ಸಾರಾಂಶ
2025ನೇ ಸಾಲಿಗೆ ಮಂಜೂರು ಮಾಡಿರುವ 19 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು : 2025ನೇ ಸಾಲಿಗೆ ಮಂಜೂರು ಮಾಡಿರುವ 19 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.
ಜ.14- ಮಕರ ಸಂಕ್ರಾಂತಿ, ಫೆ.26- ಮಹಾ ಶಿವರಾತ್ರಿ, ಮಾ.31- ರಂಜಾನ್, ಏ.10- ಮಹಾವೀರ ಜಯಂತಿ, ಏ.14- ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಏ.18- ಗುಡ್ ಫ್ರೈಡೆ, ಏ.30- ಬಸವ ಜಯಂತಿ, ಅಕ್ಷಯ ತೃತೀಯ, ಮೇ 1- ಕಾರ್ಮಿಕರ ದಿನಾಚರಣೆ, ಜೂ.7- ಬಕ್ರೀದ್, ಆ.15- ಸ್ವಾತಂತ್ರ್ಯ ದಿನಾಚರಣೆ, ಆ.27- ವರಸಿದ್ಧಿ ವಿನಾಯಕ ವ್ರತ, ಸೆ.5 -ಈದ್ ಮಿಲಾದ್, ಅ.1 - ಮಹಾನವಮಿ, ಅ.2- ಗಾಂಧಿ ಜಯಂತಿ, ಅ.7- ಮಹರ್ಷಿ ವಾಲ್ಮೀಕಿ ಜಯಂತಿ,
ಅ.20 ನರಕ ಚತುರ್ದಶಿ, ಅ.22- ದೀಪಾವಳಿ, ನ.1- ಕರ್ನಾಟಕ ರಾಜ್ಯೋತ್ಸವ, ಡಿ.25 ಕ್ರಿಸ್‌ಮಸ್. ಗಣರಾಜ್ಯೋತ್ಸವ, ಯುಗಾದಿ, ಮೊಹರಂ, ಮಹಾಲಯ ಅಮಾವಸ್ಯೆ ಭಾನುವಾರ ಮತ್ತು ಕನಕದಾಸ ಜಯಂತಿ 2ನೇ ಶನಿವಾರ ಬರುವ ಕಾರಣ ರಜಾಪಟ್ಟಿಯಲ್ಲಿ ನಮೂದಿಸಿಲ್ಲ.