ಹು-ಧಾ ಕಮಿಷನರ್‌ ಸೇರಿ 25 ಐಪಿಎಸ್‌ಗಳ ಟ್ರಾನ್ಸ್ಫರ್‌

| Published : Jul 04 2024, 07:49 AM IST

Police
ಹು-ಧಾ ಕಮಿಷನರ್‌ ಸೇರಿ 25 ಐಪಿಎಸ್‌ಗಳ ಟ್ರಾನ್ಸ್ಫರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ವಿದ್ಯಾರ್ಥಿನಿಯರ ಕೊಲೆ ಕೃತ್ಯಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ಸೇರಿದಂತೆ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು  :  ಇತ್ತೀಚೆಗೆ ವಿದ್ಯಾರ್ಥಿನಿಯರ ಕೊಲೆ ಕೃತ್ಯಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ಸೇರಿದಂತೆ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕೇಂದ್ರ ವಲಯ ಐಜಿಪಿಯಾಗಿದ್ದ ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನು ವರ್ಗಾಯಿಸಿದ ಸರ್ಕಾರವು, ಆ ಸ್ಥಾನಕ್ಕೆ ಗುಪ್ತದಳ ಐಜಿಪಿ ಲಾಬೂರಾಮ್ ಅವರನ್ನು ನೇಮಿಸಿದೆ. ಇನ್ನು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಾದ ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣಗಳ ಸಂಬಂಧ ಹುಬ್ಬಳ್ಳಿ-ಧಾರವಾಡ ಆಯುಕ್ತೆ ರೇಣುಕಾ ಸುಕುಮಾರ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಆಗಲೇ ಆಯುಕ್ತರ ಬದಲಾವಣೆಗೆ ಕೂಗು ಕೇಳಿ ಬಂದಿತ್ತು. ರೇಣುಕಾ ಅವರನ್ನು ವರ್ಗಾಯಿಸಿದ ಸರ್ಕಾರವು, ಆ ಸ್ಥಾನಕ್ಕೆ ಡಿಐಜಿ ಎನ್‌.ಶಶಿಕುಮಾರ್ ಅವರನ್ನು ನಿಯೋಜಿಸಿದೆ.

ಅದೇ ರೀತಿ ಕಳೆದೊಂದು ವರ್ಷದಿಂದ ಮೈಸೂರು ಆಯುಕ್ತರಾಗಿದ್ದ ಬಿ.ರಮೇಶ್ ಅವರನ್ನು ಬದಲಾಯಿಸಿದ ಸರ್ಕಾರವು, ಮೈಸೂರು ನಗರದ ಹೊಣೆಗಾರಿಕೆಯನ್ನು ಮೈಸೂರು ಜಿಲ್ಲಾ ಎಸ್ಪಿಯಾಗಿದ್ದ ಸೀಮಾ ಲಾಟ್ಕರ್ ಅವರಿಗೆ ನೀಡಿದೆ. ಪೂರ್ವ ವಲಯದ ಡಿಐಜಿಯಾಗಿ ರಮೇಶ್ ನಿಯೋಜಿತರಾಗಿದ್ದಾರೆ.

 ವರ್ಗಾವಣೆ ಪಟ್ಟಿ ಹೀಗಿದೆ :  ಲಾಬೂರಾಮ್ - ಐಜಿಪಿ ಕೇಂದ್ರ ವಲಯ, ಡಾ.ಬಿ.ಆರ್‌.ರವಿಕಾಂತೇಗೌಡ- ಐಜಿಪಿ ಡಿಜಿಪಿ ಕಚೇರಿ, ಡಾ.ಕೆ.ತ್ಯಾಗರಾಜನ್‌- ಐಜಿಪಿ ಐಎಸ್‌ಡಿ, ಎನ್‌.ಶಶಿಕುಮಾರ್‌- ಆಯುಕ್ತ, ಹುಬ್ಬಳ್ಳಿ-ಧಾರವಾಡ, ಬಿ.ರಮೇಶ್‌- ಡಿಐಜಿ ಪೂರ್ವ ವಲಯ, ಸೀಮಾ ಲಾಟ್ಕರ್‌- ಆಯುಕ್ತೆ ಮೈಸೂರು ನಗರ, ರೇಣುಕಾ.ಕೆ.ಸುಕುಮಾರ್‌- ಎಐಜಿಪಿ ಡಿಜಿಪಿ ಕಚೇರಿ, ಸಿ.ಕೆ.ಬಾಬಾ- ಎಸ್ಪಿ ಬೆಂಗಳೂರು ಗ್ರಾಮಾಂತರ, ಎನ್‌.ವಿಷ್ಣುವರ್ಧನ್‌- ಎಸ್ಪಿ ಮೈಸೂರು ಜಿಲ್ಲೆ, ಡಾ.ಸುಮನ್ ಡಿ.ಪನ್ನೇಕರ್‌- ಎಸ್ಪಿ ಬಿಎಂಟಿಎಫ್‌, ಸಿ.ಬಿ.ರಿಷ್ಯಂತ್‌- ಎಸ್ಪಿ ವೈರ್‌ಲೆಸ್‌ ಬೆಂಗಳೂರು, ಚೆನ್ನಬಸವಣ್ಣ ಲಂಗೊಟಿ- ಎಐಜಿಪಿ ಡಿಜಿಪಿ ಕಚೇರಿ, ಎಂ.ನಾರಾಯಣ್ - ಎಸ್ಪಿ ಉತ್ತರ ಕನ್ನಡ, ಸಾರಾ ಫಾತಿಮಾ- ಡಿಸಿಪಿ ಆಗ್ನೇಯ ವಿಭಾಗ ಬೆಂಗಳೂರು, ಅರುಣಾಂಗ್ಷು ಗಿರಿ- ಎಸ್ಪಿ ಸಿಐಡಿ, ಡಿ.ಎಲ್‌.ನಾಗೇಶ್‌- ಡಿಸಿಪಿ ಸಿಎಎಆರ್‌ ಕೇಂದ್ರ ಬೆಂಗಳೂರು, ಪದ್ಮಿನಿ ಸಾಹೋ-ಡಿಸಿಪಿ ಆಡಳಿತ ಬೆಂಗಳೂರು, ಪ್ರದೀಪ್ ಗುಂಟಿ- ಎಸ್ಪಿ ಬೀದರ್‌, ಎನ್‌.ಯತೀಶ್‌- ಎಸ್ಪಿ ದಕ್ಷಿಣ ಕನ್ನಡ, ಮಲ್ಲಿಕಾರ್ಜುನ್‌ ಬಾಲದಂಡಿ- ಎಸ್ಪಿ ಮಂಡ್ಯ, ಡಾ.ಶೋಭಾ ರಾಣಿ- ಎಸ್ಪಿ ಬಳ್ಳಾರಿ, ಡಾ.ಬಿ.ಟಿ.ಕವಿತಾ- ಎಸ್ಪಿ ಚಾಮರಾಜನಗರ, ಬಿ.ನಿಖಿಲ್‌- ಎಸ್ಪಿ ಕೋಲಾರ, ಕುಶಾಲ್‌ ಚೌಂಕ್ಸಿ- ಎಸ್ಪಿ ಚಿಕ್ಕಬಳ್ಳಾಪುರ, ಮಹನಿಂಗ್‌ ನಂದಗನ್ವಿ- ಡಿಸಿಪಿ ಹುಬ್ಬಳ್ಳಿ-ಧಾರವಾಡ.