ಸಾರಾಂಶ
ವೆಂಕಟೇಶ್ವರ ದೇಗುಲದಲ್ಲಿ ಲಾಡು ಪ್ರಸಾದವನ್ನು ತಯಾರಿಸಲು ಕೆಎಂಎಫ್ ಕಳುಹಿಸಿದ್ದ ಒಂದು ಲಾರಿ ನಂದಿನಿ ತುಪ್ಪವನ್ನು ಟಿಟಿಡಿ ಅಧಿಕಾರಿಗಳು ಬುಧವಾರ ತಮ್ಮ ತಿರುಪತಿಯಲ್ಲಿನ ಉಗ್ರಾಣದಲ್ಲಿ ಪೂಜೆ ಮಾಡಿ ಸ್ವಾಗತಿಸಿದರು.
ತಿರುಪತಿ: ವೆಂಕಟೇಶ್ವರ ದೇಗುಲದಲ್ಲಿ ಲಾಡು ಪ್ರಸಾದವನ್ನು ತಯಾರಿಸಲು ಕೆಎಂಎಫ್ ಕಳುಹಿಸಿದ್ದ ಒಂದು ಲಾರಿ ನಂದಿನಿ ತುಪ್ಪವನ್ನು ಟಿಟಿಡಿ ಅಧಿಕಾರಿಗಳು ಬುಧವಾರ ತಮ್ಮ ತಿರುಪತಿಯಲ್ಲಿನ ಉಗ್ರಾಣದಲ್ಲಿ ಪೂಜೆ ಮಾಡಿ ಸ್ವಾಗತಿಸಿದರು.
ಕಳೆದ ವಾರ ಬೆಂಗಳೂರಿನಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ 350 ಮೆಟ್ರಿಕ್ ಟನ್ ತುಪ್ಪ ಹೊತ್ತ ಲಾರಿಗೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿದ್ದರು. ಈ ಲಾರಿಯನ್ನು ತಿರುಪತಿಯಲ್ಲಿನ ಮಾರ್ಕೆಟಿಂಗ್ ಉಗ್ರಾಣದಲ್ಲಿ ಇರಿಸಲಾಗಿತ್ತು. ಬುಧವಾರ ಈ ಲಾರಿಗೆ ಟಿಟಿಡಿ ಅಧಿಕಾರಿಗಳು ಪೂಜಾ ಕೈಂಕರ್ಯ ನೆರವೇರಿಸಿ ಬರಮಾಡಿಕೊಂಡಿದ್ದಾರೆ. ಇದರಿಂದಾಗಿ ಕಳೆದೊಂದು ವರ್ಷದಿಂದ ತಿರುಮಲ ತಿರುಪತಿಯ ಲಡ್ಡು ಪ್ರಸಾದದಲ್ಲಿ ಇಲ್ಲದ ನಂದಿನಿ ತುಪ್ಪದ ಸ್ವಾದ ಇನ್ನುಮುಂದೆ ಭಕ್ತಾದಿಗಳಿಗೆ ಪುನಃ ಲಭ್ಯವಾಗಲಿದೆ.
ಈ ಹಿಂದೆ ಹತ್ತು ವರ್ಷಗಳ ಕಾಲ ಆಂಧ್ರಪ್ರದೇಶದಲ್ಲಿರುವ ತಿರುಮಲ ದೇವಸ್ಥಾನಕ್ಕೆ ಆಗ್ಮಾರ್ಕ್ ಸ್ಪೆಷಲ್ ಗ್ರೇಡ್ ಹೊಂದಿರುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಶ್ರೀವಾರಿ ಪ್ರಸಾದ ತಯಾರಿಕೆಗೆ ಕೆಎಂಎಫ್ ಸರಬರಾಜು ಮಾಡಿತ್ತು. ಅಂತೆಯೇ ಇನ್ನು ಮುಂದೆಯೂ ಟ್ಯಾಂಕರ್ ಮೂಲಕ ಹಸುವಿನ ಶುದ್ಧ ತುಪ್ಪವನ್ನು ಸರಬರಾಜು ಮಾಡಲಿದೆ.