- ಇದರ ಹಿನ್ನೆಲೆ ಸಂಗೀತ ಥೇಟು ‘ಶ್ರೀಮಂತುಡು’ ಚಿತ್ರದಂತಿಯೆಲ್ಲ.- ಫ್ಯಾಮಿಲಿ ಸ್ಟೋರಿ ಅಂತಿದ್ದಾರೆ, ಇದು ‘ಗೋವಿಂದುಡು ಅಂದರಿವಾಡೆಲೇ’ ಚಿತ್ರದಂತಿದೆ.ಈ ಮೇಲಿನ ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾ ‘ವಸುದೈವ ಕುಟುಂಬಕಂ’ ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು.
ಸಿನಿವಾರ್ತೆ
- ಇದರ ಹಿನ್ನೆಲೆ ಸಂಗೀತ ಥೇಟು ‘ಶ್ರೀಮಂತುಡು’ ಚಿತ್ರದಂತಿಯೆಲ್ಲ.
- ಫ್ಯಾಮಿಲಿ ಸ್ಟೋರಿ ಅಂತಿದ್ದಾರೆ, ಇದು ‘ಗೋವಿಂದುಡು ಅಂದರಿವಾಡೆಲೇ’ ಚಿತ್ರದಂತಿದೆ.
ಈ ಮೇಲಿನ ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾ ‘ವಸುದೈವ ಕುಟುಂಬಕಂ’ ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು.
ತಮ್ಮ ಚಿತ್ರವನ್ನು ರೀಮೇಕ್ ಎನ್ನುತ್ತಿರುವವರಿಗೆ ಚಿತ್ರದ ನಿರ್ದೇಶಕ ನಂದ ಸುಧೀರ್ ಸ್ಪಷ್ಟೀಕರಣ ನೀಡಿದ್ದಾರೆ. ‘ನಮ್ಮ ಹೊಸ ಚಿತ್ರದ ಗ್ಲಿಂಪ್ಸ್ ಇಟ್ಟುಕೊಂಡು ತೆಲುಗಿನ ಶ್ರೀಮಂತುಡು ಚಿತ್ರದ ರೀಮೇಕ್ ಎನ್ನುತ್ತಿದ್ದಾರೆ. ‘ವಸುದೈವ ಕುಟುಂಬಕಂ’ ಸಿನಿಮಾ ರೀಮೇಕ್ ಅಲ್ಲ. ಇದು ಸಂಪೂರ್ಣವಾಗಿ ಸ್ವಂತ ಕತೆಯ ಸಿನಿಮಾ ಸಿನಿಮಾ. ಕೌಟುಂಬಿಕ ಮನರಂಜನೆಯ ಕತೆಯನ್ನು ಒಳಗೊಂಡ ಸಿನಿಮಾ. ಫ್ಯಾಮಿಲಿ ಎಮೋಷನ್ ಇದೆ. ಧ್ರುವ ಸರ್ಜಾ ಅವರಿಗಾಗಿಯೇ ಮಾಡಿಕೊಂಡಿದ್ದ ಕತೆ ಇದು. ಚಿತ್ರದಲ್ಲಿ ಅದ್ಭುತವಾದ ತಾರಾಗಣ ಇದೆ. ಇದು ಪ್ಯಾನ್ ಚಿತ್ರವೂ ಅಲ್ಲ. ಪಕ್ಕಾ ಕನ್ನಡ ಸಿನಿಮಾ’ ಎಂದಿದ್ದಾರೆ ನಂದ ಸುಧೀರ್.


