ದರ್ಶನ್‌ ವಿರೋಧಿಗಳ ಮೇಲೆ ಪತ್ನಿ ವಿಜಯಲಕ್ಷ್ಮಿ ಆಕ್ರೋಶ

| Published : Jun 27 2024, 10:47 AM IST

Vijayalakshmi Darshan
ದರ್ಶನ್‌ ವಿರೋಧಿಗಳ ಮೇಲೆ ಪತ್ನಿ ವಿಜಯಲಕ್ಷ್ಮಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ದರ್ಶನ್ ಅಭಿಮಾನಿಗಳಿಗೆ ಶಾಂತಿಯಿಂದಿರಲು ಸಾಮಾಜಿಕ ಮಾಧ್ಯಮದಲ್ಲಿ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಬೆಂಗಳೂರು : ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ದರ್ಶನ್ ಅಭಿಮಾನಿಗಳಿಗೆ ಶಾಂತಿಯಿಂದಿರಲು ಸಾಮಾಜಿಕ ಮಾಧ್ಯಮದಲ್ಲಿ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಈ ಪತ್ರದಲ್ಲಿ ಅವರು, ‘ದರ್ಶನ್‌ರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ’ ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್‌ ಬಂಧನವಾಗಿ ಜೈಲಿಗೆ ಹೋದ ಬಳಿಕ ಪತಿ ಪರ ಮೊದಲ ಬಾರಿ ದನಿ ಎತ್ತಿರುವ ವಿಜಯಲಕ್ಷ್ಮೀ, ‘ಇದು ನಮಗೆಲ್ಲ ಪರೀಕ್ಷೆಯ ಸಮಯ. ಈಗ ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ ಸೆಲೆಬ್ರಿಟಿಗಳನ್ನು ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ನಿಮ್ಮ ಆತಂಕವನ್ನು ನಾನು, ದರ್ಶನ್‌ರಿಗೆ ತಲುಪಿಸಿದ್ದೇನೆ. ಅವರೂ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ. ನಾವು ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ’ ಎಂದು ವಿಜಯಲಕ್ಷ್ಮೀ ಬರೆದಿದ್ದಾರೆ.

ಈ ಪೋಸ್ಟ್‌ ಜೊತೆಗೆ ಬೆಟ್ಟದ ಮೇಲಿರುವ ‘ಡಿ ಬಾಸ್‌’ ಎಂಬ ಧ್ವಜದತ್ತ ದರ್ಶನ್‌ ಅಭಿಮಾನಿಗಳು ಕೈ ಹಿಡಿದು ಸಾಗುವ ಪೋಸ್ಟರ್‌ ಅನ್ನೂ ಹಂಚಿಕೊಂಡಿದ್ದಾರೆ.