ಸಾರಾಂಶ
ನಗರದ ವೈಟ್‌ಫೀಲ್ಡ್ ಪ್ಯಾನೆಲ್ ಕ್ಯಾಬಿನ್‌ನಲ್ಲಿ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಅಳವಡಿಕೆ, ನಾನ್ ಇಂಟರ್‌ಲಾಕಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆ ರದ್ದು ಹಾಗೂ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರು : ನಗರದ ವೈಟ್‌ಫೀಲ್ಡ್ ಪ್ಯಾನೆಲ್ ಕ್ಯಾಬಿನ್‌ನಲ್ಲಿ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಅಳವಡಿಕೆ, ನಾನ್ ಇಂಟರ್‌ಲಾಕಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆ ರದ್ದು ಹಾಗೂ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ರೈಲುಗಳ ರದ್ದತಿ: ಬಂಗಾರಪೇಟೆ - ಕೆ.ಎಸ್.ಆರ್ ಬೆಂಗಳೂರು ಮೆಮು (66582), ಕೆ.ಎಸ್.ಆರ್ ಬೆಂಗಳೂರು- ಬಂಗಾರಪೇಟೆ ಮೆಮು (16522), ಬಂಗಾರಪೇಟೆ- ಎಸ್ಎಂವಿಟಿ ಬೆಂಗಳೂರು ಮೆಮು (06527) ಸೇವೆಗಳನ್ನು ಮೇ 13ರಂದು ರದ್ದುಗೊಳಿಸಲಾಗುವುದು. ಎಸ್ಎಂವಿಟಿ ಬೆಂಗಳೂರು - ಬಂಗಾರಪೇಟೆ ಮೆಮು (06528) ಸೇವೆಯನ್ನು ದಿನಾಂಕ ಮೇ 14ರಂದು ರದ್ದುಗೊಳಿಸಲಾಗುತ್ತಿದೆ.
ಭಾಗಶಃ ರದ್ದತಿ:
ಮೇ 13ರಂದು ಮಾರಿಕುಪ್ಪಂ-ಕೃಷ್ಣರಾಜಪುರಂ ಮೆಮು ರೈಲು (66514) ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಲಿದೆ. ಕೃಷ್ಣರಾಜಪುರಂ-ಮಾರಿಕುಪ್ಪಂ ಮೆಮು, ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ನಡುವೆ (66515) ಭಾಗಶಃ ರದ್ದಾಗಲಿದೆ. ಈ ರೈಲು ಕೃಷ್ಣರಾಜಪುರಂ ಬದಲಿಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ.
ಜೋಲಾರಪೇಟ್ಟೈ - ಕೆಎಸ್ಆರ್ ಬೆಂಗಳೂರು ಮೆಮು (66549), ವೈಟ್‌ಫೀಲ್ಡ್ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದೆ. ಕೆಎಸ್ಆರ್ ಬೆಂಗಳೂರು-ಜೋಲಾರ್‌ಪೇಟ್ಟೈ ಮೆಮು (16520), ಕೆಎಸ್ಆರ್ ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲಿಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ.
ಮಾರಿಕುಪ್ಪಂ- ಕೃಷ್ಣರಾಜಪುರಂ ಮೆಮು (66533) ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಲಿದೆ. ಕೃಷ್ಣರಾಜಪುರಂ-ಕುಪ್ಪಂ ಮೆಮು (66534) ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕೃಷ್ಣರಾಜಪುರಂ ಬದಲಿಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ.
ರೈಲುಗಳ ನಿಯಂತ್ರಣ:
ಮೇ 13ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲನ್ನು (16021) ಮಾರ್ಗದಲ್ಲಿ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್ ರೈಲನ್ನು (16220) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.