ಸಾರಾಂಶ
‘ಆರ್ ಯೂ ಬ್ಯಾಚುಲರ್. ಸ್ಕ್ಯಾನ್ ಹಿಯರ್’..!
ಇದ್ಯಾವುದೋ ಸಿನಿಮಾ ಜಾಹೀರಾತು ಅಲ್ಲ. ಪ್ರೇಮಿಗಳ ಮುನ್ನ ದಿನ ನಗರದ ಕೆಲವಡೆ ಹೀಗೆ ಪೋಸ್ಟರ್‌ಗಳನ್ನು ಅಂಟಿಸಿ ಜನರಿಗೆ ಟೋಪಿ ಹಾಕಲು ಕಿಡಿಗೇಡಿಗಳು ಯತ್ನಿಸಿದ್ದಾರೆ.
ಬೆಂಗಳೂರು : ‘ಆರ್ ಯೂ ಬ್ಯಾಚುಲರ್. ಸ್ಕ್ಯಾನ್ ಹಿಯರ್’..!
ಇದ್ಯಾವುದೋ ಸಿನಿಮಾ ಜಾಹೀರಾತು ಅಲ್ಲ. ಪ್ರೇಮಿಗಳ ಮುನ್ನ ದಿನ ನಗರದ ಕೆಲವಡೆ ಹೀಗೆ ಪೋಸ್ಟರ್‌ಗಳನ್ನು ಅಂಟಿಸಿ ಜನರಿಗೆ ಟೋಪಿ ಹಾಕಲು ಕಿಡಿಗೇಡಿಗಳು ಯತ್ನಿಸಿದ್ದಾರೆ.
ಬನಶಂಕರಿ, ಜಯನಗರ ಬಿಡಿಎ ಕಾಂಪ್ಲೆಕ್ಸ್ ಹಾಗೂ ಶೇಷಾದ್ರಿಪುರದ ಶೇಷಾದ್ರಿಪುರಂ ಕಾಲೇಜು ಸೇರಿದಂತೆ ನಗರದಲ್ಲಿ ಜನ ಸಂದಣಿ ಪ್ರದೇಶಗಳ ಸಮೀಪ ‘ಸ್ಕ್ಯಾನ್’ ಇರುವ ಪೋಸ್ಟರ್‌ಗಳನ್ನು ಗುರುವಾರ ಕೆಲವರು ಅಂಟಿಸಿದ್ದಾರೆ. ಇಲ್ಲಿ ಸ್ಯ್ಯಾನ್ ಮಾಡಿದರೆ ಪ್ರೇಮಿಗಳ ದಿನಾಚರಣೆಗೆ ₹389ಕ್ಕೆ ಬಾಯ್ ಫ್ರೆಂಡ್‌ಗಳು ಸಿಗುತ್ತಾರೆ ಎಂದು ಪ್ರಚಾರ ಮಾಡಿದ್ದರು. ಈ ಜಾಹೀರಾತು ನೋಡಿ ಖುಷಿಗೊಂಡು ಕೆಲವರು ಸ್ಕ್ಯಾನ್ ಮಾಡಿದರೆ ಬಟ್ಟೆ, ತ್ಯಾಜ್ಯ ವಸ್ತುಗಳ ವಿವರ ಕಂಡು ಬೆಸ್ತು ಬಿದ್ದಿದ್ದಾರೆ.
ಈ ಪೋಸ್ಟರ್‌ಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದರು. ಅಷ್ಟರಲ್ಲಿ ಮಾಹಿತಿ ಪಡೆದ ಬನಶಂಕರಿ ಠಾಣೆ ಪೊಲೀಸರು, ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ. ಅಲ್ಲದೆ ಕೆಲ ತಾಸುಗಳ ಬಳಿಕ ಎಲ್ಲೆಡೆ ಸಹ ಪೋಸ್ಟರ್‌ಗಳು ಮಾಯವಾಗಿವೆ. ಆದರೆ, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಬನಶಂಕರಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.