ಬಾಗಿರುವ ವಿದ್ಯುತ್‌ ತಂತಿ; ಕೃಷಿ ಚಟುವಟಿಕೆಗೆ ತೊಡಕು

| Published : Dec 09 2024, 12:45 AM IST

ಬಾಗಿರುವ ವಿದ್ಯುತ್‌ ತಂತಿ; ಕೃಷಿ ಚಟುವಟಿಕೆಗೆ ತೊಡಕು
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ಎಲ್ಲೇಮಾಳ ಗ್ರಾಮದ ರೈತ ಷರೀಫ್ ಸಾಹೇಬ ಜಮೀನಿನಲ್ಲಿ ವಿದ್ಯುತ್ ತಂತಿಗಳು ಕೈಗೆಟುಕುವ ಮಟ್ಟಕ್ಕೆ ಬಾಗಿದ್ದು, ರೈತರು ಚೆಸ್ಕಾಂ ಅಧಿಕಾರಿಗಳಿಗೆ ದುರಸ್ತಿಪಡಿಸುವಂತೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು ಹನೂರು ತಾಲೂಕಿನ ಎಲ್ಲೇಮಾಳ ಗ್ರಾಮದ ರೈತ ಶರೀಫ್ ಸಾಹೇಬ ಜಮೀನಿನಲ್ಲಿ ವಿದ್ಯುತ್ ತಂತಿ ತಳಮಟ್ಟಕ್ಕೆ ಬಾಗಿದ್ದು, ರೈತರು ಸರಿಪಡಿಸಿಕೊಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ.

ಇದರಿಂದ ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ತಂತಿಗಳು ಬಾಗಿರುವುದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ರೈತರು ಆತಂಕಕ್ಕೀಡಾಗಿದ್ದಾರೆ. ಶರೀಫ್ ಸಾಹೇಬರ ಜಮೀನನ್ನು ಗುತ್ತಿಗೆ ಪಡೆದ ಸುಬ್ರಮಣಿ ಬದನೆ ಬೆಳೆ ಹಾಕಿದ್ದು, ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ ಸಮೀಪದಲ್ಲಿಯೇ ತಳಮಟ್ಟಕ್ಕೆ ತಂತಿಗಳು ಬಾಗಿರುವುದಿಂದ ಜಮೀನಿನಲ್ಲಿ ಬದನೆ ಬೆಳೆ ಕಟಾವು ಮಾಡಲು ಕೂಲಿ ಕಾರ್ಮಿಕರು ಬರುತ್ತಿಲ್ಲ ಎಂದಿದ್ದಾರೆ. ಹೀಗಾಗಿ ವಿದ್ಯುತ್ ಅವಘಡ ಸಂಭವಿಸುವ ಮುನ್ನ ಚೆಸ್ಕಾಂ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬಾಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಮುಂದಾಗಬೇಕು ಎಂದು ರೈತ ಚೆಸ್ಕಾಂ ಇಲಾಖೆಗೆ ಮನವಿ ಮಾಡಿದ್ದಾರೆ.

ಚೆಸ್ಕಾಂ ನಿರ್ಲಕ್ಷ್ಯ, ಅನಾಹುತಕ್ಕೆ ಅವರೇ ಹೊಣೆ:

ಅರಣ್ಯದಂಚಿನಲ್ಲಿ ಜಮೀನು ಇರುವುದರಿಂದ ಕಾಡುಪ್ರಾಣಿಗಳು ಸಹ ರಾತ್ರಿ ವೇಳೆ ಬರುವುದರಿಂದ ಈ ಭಾಗದಲ್ಲಿ ಕಾಡಾನೆಗಳ ಸುತ್ತಾಟ ಜಾಸ್ತಿ ಇರುತ್ತದೆ. ಅನಾಹುತ ಸಂಭವಿಸುವ ಮುನ್ನ ಬಾಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಚೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.