ಸಾರಾಂಶ
ಹೊನ್ನಾಳಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆ.ಟಿ.ನಿಂಗಪ್ಪ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಬಿ.ಇ.ಒ. ಆಗಿ ಸೇವೆ ಸಲ್ಲಿಸಿದ ನಂಜರಾಜ್ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಈ ಹಿನ್ನಲೆ ಯಲಬುರ್ಗಾದಲ್ಲಿ ಬಿಇಒ ಆಗಿದ್ದ ನಿಂಗಪ್ಪ ಹೊನ್ನಾಳಿ ತಾಲೂಕಿಗೆ ವರ್ಗವಾಗಿ ಬಂದಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆ.ಟಿ.ನಿಂಗಪ್ಪ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಬಿ.ಇ.ಒ. ಆಗಿ ಸೇವೆ ಸಲ್ಲಿಸಿದ ನಂಜರಾಜ್ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಈ ಹಿನ್ನಲೆ ಯಲಬುರ್ಗಾದಲ್ಲಿ ಬಿಇಒ ಆಗಿದ್ದ ನಿಂಗಪ್ಪ ಹೊನ್ನಾಳಿ ತಾಲೂಕಿಗೆ ವರ್ಗವಾಗಿ ಬಂದಿದ್ದಾರೆ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು, ಕಚೇರಿ ಸಿಬ್ಬಂದಿ ನೂತನ ಬಿಇಒ ಅವರನ್ನು ಸ್ವಾಗತಿಸಿ, ಅಭಿನಂದಿಸಿದರು.
ಈ ಸಂದರ್ಭ ಪ್ರಭಾರ ಬಿಇಒ ಆಗಿದ್ದ ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಶಪ್ಪ, ಇಸಿಒ ಮುದ್ದನಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಚ್.ಬಿ.ರವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪಗೊಲ್ಲರಹಳ್ಳಿ, ಬಿ.ಆರ್.ಪಿ. ಅರುಣ್, ಪರಮೇಶ್, ಅಕೀಲ್ ಪಾಷಾ, ಆಲಿ, ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ಶಕೀಲ್ ಆಮ್ಮದ್, ಪಾಥಮಿಕ ಶಾಲೆ ನಿವೃತ್ತ ಮುಖ್ಯಶಿಕ್ಷಕ ರುದ್ರಯ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘ ಹೊನ್ನಾಳಿ ಶಾಖೆಯ ನಿರ್ದೇಶಕ ಕರಿಬಸಯ್ಯ, ಪೇಟೆ ಶಾಲೆ ಮುಖ್ಯಶಿಕ್ಷಕಿ ರತ್ನಮ್ಮ, ನ್ಯಾಮತಿ ಸಿದ್ದಪ್ಪ, ಮಹೇಶ್ವರಪ್ಪ, ಶೇಖರಪ್ಪ, ಉಮಾಪತಿ ಮುಂತಾದವರು ಇದ್ದರು.- - - -19ಎಚ್.ಎಲ್.ಐ2:
ಹೊನ್ನಾಳಿ ತಾಲೂಕು ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆ.ಟಿ.ನಿಂಗಪ್ಪ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅವರನ್ನು ಶಿಕ್ಷಕರು ಮತ್ತು ಸರ್ಕಾರಿ ನೌಕರರ ಸಂಘಗಳ ಪದಾಧಿಕಾರಿಗಳು ಸ್ವಾಗತಿಸಿ, ಅಭಿನಂದಿಸಿದರು.