ಕೃಷಿಗೆ 7 ತಾಸು ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ಧ: ಎಂಡಿ ಮಹಾಂತೇಶ ಬೀಳಗಿ

| Published : Jan 08 2024, 01:45 AM IST

ಸಾರಾಂಶ

ಮುಂಗಾರು ಮಳೆ ಕೊರತೆಯಿಂದ ಡ್ಯಾಂಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ರೈತರ ಪಂಪ್‌ಸೆಟ್‌ ಮೇಲೆಯೇ ಜೂನ್‌ನಿಂದಲೇ ಅವಲಂಬಿತವಾದ್ದರಿಂದ ತೀವ್ರ ವಿದ್ಯುತ್ ಕೊರತೆ ಎದುರಿಸಬೇಕಿದೆ. ಕೊರತೆ ನೀಗಿಸಲು ಈಗಾಗಲೇ ಜಿಂದಾಲ್‌, ಸಕ್ಕರೆ ಕಾರ್ಖನೆಗಳು, ಯುಪಿಸಿಎಲ್‌, ಸೋಲಾರ್‌, ವಿಂಡ್ ಮಿಲ್‌ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತದೆ. ಈಗ ಯಾವುದೇ ರೀತಿ ವಿದ್ಯುತ್ ಕೊರತೆಯಾಗದಂತೆ ವಿದ್ಯುತ್ ಪೂರೈಸಲಾಗುತ್ತಿದೆ.

ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಬೆಸ್ಕಾಂ ಕುಂದುಕೊರತೆ ಸಭೆ । ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರ ಕೃಷಿ ಪಂಪ್‌ಸೆಟ್‌ಗೆ ನಿರಂತರ 7 ತಾಸು ವಿದ್ಯುತ್ ಪೂರೈಸಲು ಬದ್ಧವಿದ್ದು, ಬೇಸಿಗೆ ನಿರ್ವಹಣೆಗೆ ಸಾವಿರ ಮೆಗಾವ್ಯಾಟ್‌ ವಿದ್ಯುತ್ ಖರೀದಿಗೆ ಟೆಂಡರ್‌ ಕರೆಯಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಜಿ.ಬೀಳಗಿ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಭಾನುವಾರ ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಬೆಸ್ಕಾಂ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಸರ್ಕಾರದ ಸೂಚನೆಯಂತೆ ಬೆಸ್ಕಾಂ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸಲು ಮಳೆಯ ಕೊರತೆ ಮಧ್ಯೆಯೂ ಬೇಸಿಗೆ ನಿರ್ವಹಣೆಗಾಗಿ ಸಾವಿರ ಮೆಗಾವ್ಯಾಟ್ ವಿದ್ಯುತ್‌ ಖರೀದಿಗೆ ಟೆಂಡರ್ ಕರೆದಿದೆ ಎಂದರು.

ಮುಂಗಾರು ಮಳೆ ಕೊರತೆಯಿಂದ ಡ್ಯಾಂಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ರೈತರ ಪಂಪ್‌ಸೆಟ್‌ ಮೇಲೆಯೇ ಜೂನ್‌ನಿಂದಲೇ ಅವಲಂಬಿತವಾದ್ದರಿಂದ ತೀವ್ರ ವಿದ್ಯುತ್ ಕೊರತೆ ಎದುರಿಸಬೇಕಿದೆ. ಕೊರತೆ ನೀಗಿಸಲು ಈಗಾಗಲೇ ಜಿಂದಾಲ್‌, ಸಕ್ಕರೆ ಕಾರ್ಖನೆಗಳು, ಯುಪಿಸಿಎಲ್‌, ಸೋಲಾರ್‌, ವಿಂಡ್ ಮಿಲ್‌ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತದೆ. ಈಗ ಯಾವುದೇ ರೀತಿ ವಿದ್ಯುತ್ ಕೊರತೆಯಾಗದಂತೆ ವಿದ್ಯುತ್ ಪೂರೈಸಲಾಗುತ್ತಿದೆ. ಬೇಸಿಗೆ ಆರಂಭವಾಗುತ್ತಿರುವ ಈ ದಿನಮಾನಗಳಲ್ಲಿ ಇನ್ನಷ್ಟು ವಿದ್ಯುತ್ ಅಭಾವವಾಗಬಹುದು ಎಂದು ಹೇಳಿದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 7 ತಾಸು ವಿದ್ಯುತ್ ಪೂರೈಕೆಯಾಗುತ್ತದೆಂಬ ಭರವಸೆಯಿಂದಲೇ ರೈತರು ಬೆಳೆ ಬೆಳೆದಿದ್ದಾರೆ. ಎಷ್ಟು ಗಂಟೆ ವಿದ್ಯುತ್ ಎಂಬುದಾಗಿ ನಿಖರವಾಗಿ ಹೇಳಿ. ಆಗ ವಿದ್ಯುತ್‌ ಪೂರೈಕೆ ಆದರಿಸಿ, ಬೆಳೆ ಬೆಳೆಯುತ್ತಾರೆ. ಹೊನ್ನಾಳಿ ಟಿಸಿ ರಿಪೇರಿ ಕೇಂದ್ರದಲ್ಲಿ ಆಯಿಲ್ ದಾಸ್ತಾನಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಎಂಡಿ ಬೀಳಗಿ, ಅಕ್ಟೋಬರ್‌ನಲ್ಲಿ ವಿದ್ಯುತ್ ಕೂರತೆ ಆಗಿದ್ದರಿಂದ ವ್ಯತ್ಯಯವಾಗಿತ್ತು. ಮುಂದಿನ ದಿನಗಳಲ್ಲಿ 6 ಗಂಟೆ ವಿದ್ಯುತ್ ಪೂರೈಸಲು ಬೆಸ್ಕಾಂ ಬದ್ಧವಿದೆ. ಪ್ರತಿ ತಾಲೂಕಿನಲ್ಲಿ ಸ್ಥಳೀಯವಾಗಿ ಟಿಸಿ ರಿಪೇರಿ ಕೇಂದ್ರವಿದ್ದು, ರೈತರಿಗೆ ಕಾಲಮಿತಿಯಲ್ಲಿ ಸುಟ್ಟ ಟಿಸಿಗಳನ್ನು ಬದಲಾಯಿಸಬೇಕು ಎಂದು ಪ್ರತಿಕ್ರಿಯಿಸಿದರು. ಹೊನ್ನಾಳಿ ಎಇಇ ಮಾತನಾಡಿ, ಆಯಿಲ್ ಕೊರತೆ ಇತ್ತು. ಟೆಂಡರ್ ಅವಧಿ ಮುಗಿದಿದ್ದರಿಂದ ದಾಸ್ತಾನು ಇರಲಿಲ್ಲ . ಈಗ ಟೆಂಡರ್ ಅವಧಿ ವಿಸ್ತರಿಸಿದ್ದರಿಂದ ಸಮಸ್ಯೆ ಇಲ್ಲ ಎಂದು ಶಾಸಕರ ಗಮನಕ್ಕೆ ತಂದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್.ಜೆ.ರಮೇಶ, ಮುಖ್ಯ ಅಭಿಯಂತರ ಗೋವಿಂದಪ್ಪ, ಕೆಪಿಟಿಸಿಎಲ್ ಮುಖ್ಯ ಅಭಿಯಂತರ ಉಮೇಶ, ಅಧೀಕ್ಷಕ ಅಭಿಯಂತರ ಜಗದೀಶ, ಬೆಸ್ಕಾಂ ಇಂಜಿನಿಯರ್‌ಗಳಿದ್ದರು. ನವಿಲೆಹಾಳ್‌ನಲ್ಲಿ 10 ದಿನದಿಂದ ಸುಟ್ಟ ಟಿಸಿ ಬದಲಾಯಿಸಿಲ್ಲ. ಟಿಸಿಗಳು ಸುಟ್ಟಾಗ ತಕ್ಷಣವೇ ಅವುಗಳ ಬದಲಾಯಿಸಬೇಕು. ಟಿಸಿ ಬ್ಯಾಂಕ್‌ನಲ್ಲಿ 150 ಟಿಸಿಗಳು ದಾಸ್ತಾನಿದ್ದರೂ ಬದಲಾಯಿಸದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಆಗ ಎಂಡಿ ಬೀಳಗಿ, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಲೋಪವಾಗದಂತೆ, ದೂರುಗಳು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು.

ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ

...................................ಕನಿಷ್ಟ 4 ಕಡೆ ಹೊಸತು ಸ್ಟೇಷನ್ ಆರಂಭಿಸಿ

ದಾವಣಗೆರೆ ತಾಲೂಕು ಆನಗೋಡು, ಮೆಳ್ಳೆಕಟ್ಟೆ, ಅತ್ತಿಗಟ್ಟೆ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು, ಕಬ್ಬೂರು, ತೋಳಹುಣಸೆ ಹೊಸ ಸ್ಟೇಷನ್ ಬೇಗ ಆರಂಭಿಸಬೇಕು. ಹೊನ್ನಾಳಿ ತಾ. ನ್ಯಾಮತಿ, ಕ್ಯಾಸಿನಕೆರೆ ಸ್ಟೇಷನ್‌, ಚೀಲೂರು ಹೊಸ ಮಾರ್ಗ ನಿರ್ಮಾಣ, ಹರಪನಹಳ್ಳಿಯಲ್ಲಿ ಈಗಿರುವ ಸ್ಟೇಷನ್‌ಗಳನ್ನು ಮೇಲ್ದರ್ಜೆಗೇರಿಸಿ, ಹೊಸದಾಗಿ ಕನಿಷ್ಟ 4 ಕಡೆ ಸ್ಟೇಷನ್ ಆರಂಭಿಸಲು ಮೂರೂ ಕ್ಷೇತ್ರಗಳ ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ ಮನವಿ ಮಾಡಿದರು. ಹರಪನಹಳ್ಳಿ ಬೆಸ್ಕಾಂ ವ್ಯಾಪ್ತಿಗೆ ಬರಲಿದ್ದು, ಕೆಪಿಟಿಸಿಎಲ್‌ ಕಲಬುರಗಿಗೆ ಬರುತ್ತದೆ. ಮೊದಲು ಇದನ್ನು ಸರಿಪಡಿಸಿ ಎಂದು ಲತಾ ಮಲ್ಲಿಕಾರ್ಜುನ ಮನವಿ ಮಾಡಿದರು.