ವಿದ್ಯುತ್‌ ಸಮಸ್ಯೆಗಳಿಗೆ ವಾಟ್ಸ್‌ ಆ್ಯಪ್‌ನಲ್ಲಿಯೂ ದೂರು ನೀಡಿ

| Published : May 08 2024, 01:32 AM IST

ವಿದ್ಯುತ್‌ ಸಮಸ್ಯೆಗಳಿಗೆ ವಾಟ್ಸ್‌ ಆ್ಯಪ್‌ನಲ್ಲಿಯೂ ದೂರು ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಹಾಯವಾಣಿಗೆ ಪರ್ಯಾಯವಾಗಿ ವಾಟ್ಸ್‌ಆ್ಯಪ್‌ ಆರಂಭಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸ್‌ ಆ್ಯಪ್‌ ಸಂಖ್ಯೆಗಳನ್ನು ನೀಡಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಮುರಿದು, ವಿದ್ಯುತ್ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ ಸಹಾಯವಾಣಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರಿಗೆ ಪರ್ಯಾಯ ವಾಟ್ಸ್ ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ. ವಾಟ್ಸ್‌ ಆ್ಯಪ್‌ ಸಂಖ್ಯೆಗಳಿಗೆ ಗ್ರಾಹಕರು ವಿದ್ಯುತ್‌ ಸಂಬಂಧಿತ ಸಮಸ್ಯೆ ಕುರಿತು ಸಂದೇಶ ಹಾಗೂ ಫೋಟೋಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ಪರಿಹಾರ ಪಡೆಯಬಹುದು ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಜಿಲ್ಲಾವಾರು ವಾಟ್ಸ್ ಆಪ್ ಸಂಖ್ಯೆಗಳು

ಬೆಂಗಳೂರು ಪೂರ್ವ- 82778 84013, ಬೆಂಗಳೂರು ಪಶ್ಚಿಮ- 82778 84012, ಬೆಂಗಳೂರು ಉತ್ತರ- 82778 84014, ಬೆಂಗಳೂರು ದಕ್ಷಿಣ- 82778 84011, ಬೆಂಗಳೂರು ಗ್ರಾಮಾಂತರ- 82778 84017. ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್ ಆ್ಯಪ್ ಸಂಖ್ಯೆ - 94831 91212, 94831 91222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆ್ಯಪ್ ಸಂಖ್ಯೆ- 94498 44640.

ಬೆಂಗಳೂರು ಸಮಸ್ಯೆಗಳಎಸ್ಸೆಮ್ಮೆಸ್‌ಗೆ 12 ಸಂಖ್ಯೆ

ಬೆಂಗಳೂರಿನಲ್ಲಿ ಮಳೆಯಿಂದ ಹೆಚ್ಚು ವಿದ್ಯುತ್‌ ಸಮಸ್ಯೆಗಳು ಉಂಟಾಗುವ ಹಿನ್ನೆಲೆಯಲ್ಲಿ ವಾಟ್ಸ್‌ ಅಪ್‌ ನಂಬರ್‌ಗಳ ಜೊತೆಗೆ ಎಸ್ಎಂಎಸ್ ಗಳನ್ನು ಕಳುಹಿಸಲು ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್ ಸಂಖ್ಯೆಗಳನ್ನು ಕೂಡ ಒದಗಿಸಿರುವುದಾಗಿ ಬೆಸ್ಕಾಂ ಹೇಳಿದೆ.

ಎಸ್ಎಂಎಸ್ ಕಳುಹಿಸಬಹುದಾದ ಸಂಖ್ಯೆಗಳು ಹೀಗಿವೆ: 94808 16108, 94808 16109, 94808 16110, 94808 16111, 94808 16112, 94808 16113, 94808 16114, 94808 16115, 94808 16116, 94808 16117, 94808 16118 ಮತ್ತು 94808 16119.