ಹೊಸಕೋಟೆ: ತಾಲೂಕಿನ ಚಿಕ್ಕನಹಳ್ಳಿ, ಬಾಣಮಾಕನಹಳ್ಳಿ, ಮುಗಬಾಳ, ದೊಡ್ಡ ನಲ್ಲಾಲ, ಜಡಿಗೇನಹಳ್ಳಿ ಗ್ರಾಮಗಳಲ್ಲಿ ಬೆಸ್ಕಾಂ ತಂಡ ಕಾರ್ಯಾಚರಣೆ ನಡೆಸಿ ಕೃಷಿ ಪಂಪ್‌ಸೆಟ್‌ಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ 18 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಹೊಸಕೋಟೆ: ತಾಲೂಕಿನ ಚಿಕ್ಕನಹಳ್ಳಿ, ಬಾಣಮಾಕನಹಳ್ಳಿ, ಮುಗಬಾಳ, ದೊಡ್ಡ ನಲ್ಲಾಲ, ಜಡಿಗೇನಹಳ್ಳಿ ಗ್ರಾಮಗಳಲ್ಲಿ ಬೆಸ್ಕಾಂ ತಂಡ ಕಾರ್ಯಾಚರಣೆ ನಡೆಸಿ ಕೃಷಿ ಪಂಪ್‌ಸೆಟ್‌ಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ 18 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಹೊಸಕೋಟೆ ಬೆಸ್ಕಾಂ ಆರಕ್ಷಕ ನಿರೀಕ್ಷಕ ಯೋಗೇಶ್ ಕುಮಾರ್ ಮಾತನಾಡಿ, ಮುಗಬಾಳ, ಪಂಚಾಯಿತಿ ತಾವರೆಕೆರೆ, ಜಡಿಗೇನಹಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 40 ರೈತರು ಪಂಪ್‌ಸೆಟ್‌ಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿರುವುದನ್ನು ಪತ್ತೆ ಹಚ್ಚಿದ್ದೇವೆ. ಇವರಿಗೆ ಹಲವು ಬಾರಿ ಶೋಕಾಸ್ ನೋಟಿಸ್ ನೀಡಿದ್ದರೂ ಸ್ಪಂದಿಸದ ಕಾರಣ ವಿದ್ಯತ್ ಸಂಪರ್ಕ ಕಡಿತಗೊಳಿಸಿದ್ದೇವೆ. ರೈತರು ಸೂಕ್ತ ದಾಖಲೆ ಸಲ್ಲಿಸಿ ಸ್ಥಳೀಯ ಬೆಸ್ಕಾಂ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿ ಮರು ಸಂಪರ್ಕ ಪಡೆಯಬಹುದು ಎಂದರು.2023ರ ನವಂಬರ್ ನಂತರದಲ್ಲಿ ನೀರಾವರಿ ಪಂಪ್ ಸೆಟ್ ಹೊಂದಿರುವ ರೈತರು ಸ್ವಯಂ ಕಾರ್ಯ ನಿರ್ವಹಣೆ ಅಡಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಬೆಸ್ಕಾಂ ಸೂಚಿಸಿತ್ತು. ಇದನ್ನು ನಿರ್ಲಕ್ಷಿಸಿದ್ದ ರೈತರಿಗೆ ಹಲವು ಬಾರಿ ಮೌಖಿಕ ಹಾಗೂ ನೋಟಿಸ್ ನೀಡಲಾಗಿತ್ತು. ಆದರೂ ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಿ ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರದಿಂದ ಆದೇಶ ಬಂದಿದ್ದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಯೋಗೇಶ್ ತಿಳಿಸಿದರು.
ಮರು ಸಂಪರ್ಕ ಹೇಗೆ:ರೈತರು ನೀರಿನ ಹಕ್ಕಿನ ಪತ್ರ, ಪಹಣಿ, ಒಂದು ಭಾವಚಿತ್ರ ಸಹಿತ ಸಮೀಪದ ಬೆಸ್ಕಾಂನ ಉಪ ವಿಭಾಗದಲ್ಲಿ ನೋಂದಾಯಿಸಕೊಳ್ಳಬೇಕು. ಎಷ್ಟು ಪ್ರಮಾಣದ ವಿದ್ಯುತ್ ಬಳಕೆ ಅವಶ್ಯಕತೆ ಇದೆ ಎಂದು ನಮೂದಿಸಬೇಕು. ಬಾಕಿ ಪಾವತಿಸಿದರೆ ಒಂದು ಶಾಶ್ವತ ಸಂಖ್ಯೆ ಸಂಪರ್ಕ ಕಲ್ಪಿಸಲಾಗುವುದು ಎಂದು ಮುಗಬಾಳ ಘಟಕದ ಬೆಸ್ಕಾಂ ಅಧಿಕಾರಿ ನಿಂಗೇಗೌಡ ತಿಳಿಸಿದರು.ಫೋಟೋ: 17 ಹೆಚ್‌ಎಸ್‌ಕೆ 1 ಮತ್ತು 2
ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಹಾಗೂ ಬಾಣಮಾಕನಹಳ್ಳಿ ಗ್ರಾಮಗಳಲ್ಲಿ ಅನಧಿಕೃತ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಬೆಸ್ಕಾಂ ಆರಕ್ಷಕ ಉಪನಿರೀಕ್ಷಕ ಸಿಬ್ಬಂದಿ ಕಡಿತಗೊಳಿಸಿದರು.