ಸೌಲಭ್ಯಕ್ಕೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ

| Published : Oct 08 2024, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಪಟ್ಟಣದ ೨೧ ಹಾಗೂ ೨೨ನೇ ವಾರ್ಡಿಗೆ ಮೂಲಭೂತ ಸೌಕರ್ಯ ಒದಗಿಸದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೂಡಲೇ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಾರ್ಡಿನಲ್ಲಿ ಚರಂಡಿಗಳನ್ನು ಸ್ವಚ್ಚವಾಗಿಡದ ಹಿನ್ನಲೆಯಲ್ಲಿ ದಿನಂಪ್ರತಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಇದರಿಂದ ಹಲವು ಕಾಯಿಲೆಗಳಿಗೆ ತುತ್ತಾಗಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಪಟ್ಟಣದ ೨೧ ಹಾಗೂ ೨೨ನೇ ವಾರ್ಡಿಗೆ ಮೂಲಭೂತ ಸೌಕರ್ಯ ಒದಗಿಸದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೂಡಲೇ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಾರ್ಡಿನಲ್ಲಿ ಚರಂಡಿಗಳನ್ನು ಸ್ವಚ್ಚವಾಗಿಡದ ಹಿನ್ನಲೆಯಲ್ಲಿ ದಿನಂಪ್ರತಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಇದರಿಂದ ಹಲವು ಕಾಯಿಲೆಗಳಿಗೆ ತುತ್ತಾಗಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೨೨ನೇ ವಾರ್ಡ್‌ನ ಬೋರ್‌ವೆಲ್ ಕೆಟ್ಟು ೩ ತಿಂಗಳಾಗಿದ್ದು, ಪುರಸಭೆ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಕ್ಯಾರೆ ಎನ್ನುತ್ತಿಲ್ಲ. ಹಲವು ಬಾರಿ ಪುರಸಭೆ ಸದಸ್ಯರಿಗೆ, ನೂತನ ಅಧ್ಯಕ್ಷರಿಗೆ ಕರೆ ಮಾಡಿದ್ದೇವೆ, ಆದರೆ ಯಾರು ಕೂಡ ಸ್ಪಂಧಿಸುತ್ತಿಲ್ಲ. ತುಂಬಿದ ಚರಂಡಿ ಸ್ವಚ್ಛವಾಗಿಲ್ಲ. ಹಲವು ಕಡೆ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಈ ಸಮಸ್ಯೆಗಳಿಗೆ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಈ ವೇಳೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕ, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ

ಪ್ರಶಾಂತ ಕದ್ದರಕಿ, ಸ್ಥಳೀಯ ನಿವಾಸಿಗಳಾದ ದೌಲತ ಬಳಗಾನೂರ, ರವಿ ವಾಲಿಕಾರ, ಉದಂತ ಚಿಕ್ಕ ಸಿಂದಗಿ, ಸಿದ್ದು

ಬಳಗಾನೂರ, ರಮೇಶ ಸರಸಂಬಿ, ದಾದಾಪೀರ ನಾಲತವಾಡ, ಕಮಲಾಬಾಯಿ ಭೂತಿ, ಶ್ವೇತಾ ಚಿಕ್ಕಸಿಂದಗಿ, ಶಿವಲಿಂಗಮ್ಮ ಬಳಗಾನೂರ ಇದ್ದರು.