ರೂಗಿ ಗ್ರಾಪಂಗೆ ರಾಜ್ಯದ ಅತ್ಯುತ್ತಮ ಸಂತೆ ಕಟ್ಟೆ ಪ್ರಶಸ್ತಿ

| Published : Mar 03 2024, 01:31 AM IST

ರೂಗಿ ಗ್ರಾಪಂಗೆ ರಾಜ್ಯದ ಅತ್ಯುತ್ತಮ ಸಂತೆ ಕಟ್ಟೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರೂಗಿ ಗ್ರಾಮ ಪಂಚಾಯತಿ ಗ್ರಾಮೀಣ ಸಂತೆ ಕಟ್ಟೆಯು ರಾಜ್ಯದ ಅತ್ಯುತ್ತಮ ಸಂತೆ ಕಟ್ಟೆ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಈ ಹಿನ್ನಲೆಯಲ್ಲಿ ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿ ವತಿಯಿಂದ ಮಾ.1ರಂದು ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶರವರು ರೂಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅಂಬವ್ವ ಚೆನ್ನಪ್ಪ ಕೋಟಗೊಂಡ ಇವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.