ಸಾರಾಂಶ
ಚನ್ನಪಟ್ಟಣ: ನನ್ನ ಹುಟ್ಟೂರು ಚಕ್ಕರೆಯಲ್ಲಿ ಮತದಾನ ಮಾಡಿದ್ದೇನೆ. ಕ್ಷೇತ್ರಾದ್ಯಂತ ನನ್ನ ಪರವಾದ ವಾತಾವರಣ ಇದೆ. ಮತದಾರರು ಸರ್ಕಾರದ ಪರ ಇದ್ದಾರೆ ಎಂಬ ಭಾವನೆ ಮೂಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣ: ನನ್ನ ಹುಟ್ಟೂರು ಚಕ್ಕರೆಯಲ್ಲಿ ಮತದಾನ ಮಾಡಿದ್ದೇನೆ. ಕ್ಷೇತ್ರಾದ್ಯಂತ ನನ್ನ ಪರವಾದ ವಾತಾವರಣ ಇದೆ. ಮತದಾರರು ಸರ್ಕಾರದ ಪರ ಇದ್ದಾರೆ ಎಂಬ ಭಾವನೆ ಮೂಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮತಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜನ ಎಲ್ಲ ಕಡೆ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಈ ಚುನಾವಣೆ ನನಗೆ ಆಶಾದಾಯಕವಾಗಿ ಕಂಡುಬರುತ್ತಿದೆ ಎಂದರು.ಮತ ಚಲಾಯಿಸುವ ಮೂಲಕ ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡುವಂತೆ ನಾವು ಸಹ ಪ್ರಚಾರ ವೇಳೆ ಮನವಿ ಮಾಡಿದ್ದೆವು. ನೌಕರರಿಗೆ ಹೋಗುವವರು ಎಲ್ಲರೂ ಬೆಳಗ್ಗೆಯೇ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಉಪಚುನಾವಣೆಯಾದ ಹಿನ್ನೆಲೆಯಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಮತ ಚಲಾಯಿಸಿದ್ದಾರೆ ಎಂದರು. ಪೊಟೋ೧೩ಸಿಪಿಟಿ೧:
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚಕ್ಕೆರೆ ಸ್ವಗ್ರಾಮದಲ್ಲಿ ಮತ ಚಲಾಯಿಸಿದ ಯೋಗೇಶ್ವರ್ ದಂಪತಿ.