ಸಾರಾಂಶ
ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವಿಗೆ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಹಾಗೂ ಕಡಲತೀರದಲ್ಲಿ ನೃತ್ಯ ಮಾಡುವ ಮೂಲಕ ಶುಭ ಹಾರೈಸಲಾಯಿತು.ಮುರ್ಡೇಶ್ವರ ಬಳಿ ನೇತ್ರಾಣಿ ದ್ವೀಪದಲ್ಲಿ ನೇತ್ರಾಣಿ ಅಡ್ವೆಂಚರ್ಸ್‌ನ ಡೈವರ್‌ಗಳಾದ ಅನೀಶ್, ನವೀನ್ ಹಾಗೂ ಲೋಕಿ ಎನ್ನುವವರು ಸಾಗರದಾಳದಲ್ಲಿ ಆಲ್ ದ ಬೆಸ್ಟ್ ಟೀಮ್ ಇಂಡಿಯಾ ಎಂಬ ಪೋಸ್ಟರ್ ಹಿಡಿದು ಶುಭ ಹಾರೈಸಿದರು. ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂಬ ಭರವಸೆಯಿಂದ ನೇತ್ರಾಣಿ ಅಡ್ವೆಂಚರ್ಸ್ ₹1999ಗೆ ಸ್ಕೂಬಾ ಡೈವಿಂಗ್ ಆಫರ್ ನೀಡಿದೆ. ಇದು ಒಂದು ವಾರ ಕಾಲ ಇರಲಿದೆ.
ಕನ್ನಡಪ್ರಭ ವಾರ್ತೆ ಕಾರವಾರ

ಕಡಲತೀರದಲ್ಲಿ ಡ್ಯಾನ್ಸ್:ಇಲ್ಲಿನ ಸ್ಟಾರ್ ಚಾಯ್ಸ್ ಡಾನ್ಸ್ ಅಕಾಡೆಮಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಟ್ಯಾಗೋರ ಕಡಲತೀರದಲ್ಲಿ ಚೆಕ್ ದೆ ಇಂಡಿಯಾ ಹಾಡಿಗೆ ಆಕರ್ಷಕವಾಗಿ ನೃತ್ಯ ಮಾಡುವ ಮೂಲಕ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ಶುಭಕೋರಿದರು.