ಬೇತಲ್ ಚರ್ಚ್‌ಗೆ ನೂರು ವರ್ಷ ಹಿನ್ನಲ್ಲೇ ವರ್ಷವಿಡಿ ಸೇವಾ ಕಾರ್ಯಕ್ರಮ

| Published : Feb 19 2024, 01:30 AM IST

ಸಾರಾಂಶ

ಪಟ್ಟಣದ ಬೇತಲ್ ಲೂಥರನ್ ಸಭೆ, ಐಇಎಲ್‌ಸಿ ಸಭಾ ಶತಮಾನೋತ್ಸವದ ಅಂಗವಾಗಿ ಮೈಸೂರಿನ ಹೋಲ್ಡ್ ವರ್ತ್ ಸ್ಮಾರಕ(ಮಿಷನ್) ಆಸ್ಪತ್ರೆ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಪಟ್ಟಣದ ಬೇತಲ್ ಲೂಥರನ್ ಸಭೆ, ಐಇಎಲ್‌ಸಿ ಸಭಾ ಶತಮಾನೋತ್ಸವದ ಅಂಗವಾಗಿ ಮೈಸೂರಿನ ಹೋಲ್ಡ್ ವರ್ತ್ ಸ್ಮಾರಕ(ಮಿಷನ್) ಆಸ್ಪತ್ರೆ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರುಗಿತು. ಪಟ್ಟಣದ ಲೂಥರನ್ ಚರ್ಚ್ ಕ್ಯಾಂಪೆಸ್ ನಲ್ಲಿ ನಡೆದ ಶಿಬಿರದಲ್ಲಿ ಸಭಾಪಾಲಕರು ರೇ.ಡಿ.ಜೋಶುವ ಪ್ರಸನ್ನಕುಮಾರ್ ಚಾಲನೆ ನೀಡಿ ಮಾತನಾಡಿದರು. ಬೇತಲ್ ಲೂಥರನ್ ಸಭೆಗೆ ನೂರು ವರ್ಷ ಪೂರೈಕೆ ಹಿನ್ನಲ್ಲೇ ಶತಮಾನೋತ್ಸವದ ಅಂಗವಾಗಿ ಇಡೀ ವರ್ಷವಿಡಿ ಪ್ರತಿ ತಿಂಗಳು ಒಂದೊಂದು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಈ ತಿಂಗಳಲ್ಲಿ ಆರೋಗ್ಯ ಶಿಬಿರವನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಅನ್ನದಾನ, ಕಾನೂನು ಅರಿವು ಕಾರ್ಯಕ್ರಮ, ಮಹಿಳೆಯರು ಯವ್ವನಸ್ಥರು ಭಕ್ತಿ ವೃದ್ಧಿ ಮಾಡುವ ಅರಿವು ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇಂದಿನ ಆರೋಗ್ಯ ಶಿಬಿರದಲ್ಲಿ 12 ಮಂದಿ ತಜ್ಞ ವೈದ್ಯ ತಂಡ ಆಗಮಿಸಿದ್ದು ಮಕ್ಕಳ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಸ್ತ್ತೀರೋಗ ತಜ್ಞರು, ದಂತ ವೈದ್ಯ ತಜ್ಞರು, ಮೂಳೆ ರೋಗ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಆಹಾರ ತಜ್ಞರು, ಸಾಮಾನ್ಯ ವೈದ್ಯಕೀಯ ತಜ್ಞರು, ಇದರೊಂದಿಗೆ ಉಚಿತ ಔಷಧಾಲಯ, ಇಸಿಜಿ, ಫಿಸಿಯೋಥೆರಪಿ, ಜಾಗೃತಿ ಕಾರ್ಯ್ರಕ್ರಮವನ್ನು ಎರಡು ದಿನಗಳ ನಡೆಸಲಾಗುತ್ತದೆ. ಶಿಬಿರದಲ್ಲಿ ನುರಿತ ವೈದ್ಯರು ಚಿಕಿತ್ಸೆ ನಡೆಸುತ್ತಿದ್ದು ಇದರ ಪ್ರಯೋಜನವನ್ನು ಸುತ್ತಮುತ್ತಲ ಎಲ್ಲಾ ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಮೈಸೂರಿನ ಮಿಷನ್ ಆಸ್ಪತ್ರೆಯ ವೈದ್ಯ ಡಾ.ರೂಬನ್ ಪ್ರಕಾಶ್, ಡಾ‌.ಉತ್ತಮ್ ಆನಂದ್, ಡಾ.ಸುಗುಣ ಶಾಂತಿ, ಡಾ.ಪಂಚಾಕ್ಷರಯ್ಯ, ಡಾ.ಗಿರಿಧರ್, ಡಾ‌.ಷಾಹನಜ್,ಡಾ.ಸೌಮ್ಯ ಮತ್ತಿತರರು ಪಾಲ್ಗೊಂಡು ಆರೋಗ್ಯ ಶಿಬಿರ ಯಶಸ್ವಿಗೆ ಸಾಥ್ ನೀಡಿದರು. ರೇ. ಆಡಿಸ್ ಅರ್ನಾಲಡ್, ಸಭೆಯ ಸಭಾಪಾಲನ ಸಮಿತಿಯ ಸದಸ್ಯ. ಎಸ್.ಆಲ್ಬರ್ಟ್ ಮನೋಹರ್, ಜೆ.ಎಂ.ಕಿರಣ್ ಕುಮಾರ್, ಜೆ.ವಿನ್ಸೆಂಟ್ ವಿಜಯಕುಮಾರ್, ಎಸ್‌.ಗ್ಯಾಬ್ರೀಯಲ್, ಮಾಜಿ ಅಧ್ಯಕ್ಷ ಜೆ.ಜೆ ಮುತ್ತುಕುಮಾರ್,ಬಿ ಪುಟ್ಟಸ್ವಾಮಿ, ಮತ್ತು ಸಭಾ ಕಾರ್ಯದರ್ಶಿ ಆರ್.ಪಿ.ನರೇಂದ್ರನಾಥ್ ಹಾಜರಿದ್ದರು.