ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಯುವಜನತೆಯು ಕೃಷಿಯಿಂದ ದೂರವಾಗುತ್ತಿರುವುದು ಚಿಂತಾದಾಯಕ ವಿಷಯವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿ ಪ್ರಗತಿಯನ್ನು ಕಾಣಬಹುದು. ಶಿಕ್ಷಣ ಪದ್ಧತಿಯಲ್ಲೂ ಕೃಷಿಯ ಮಹತ್ವವನ್ನು ತಿಳಿಸುವ ಕಾರ್ಯಗಳು ನಡೆಯಬೇಕಿದೆ ಎಂದು ಪದ್ಮಶ್ರೀ ಪುರಸ್ಕೃತ ಕೃಷಿಕ ಸತ್ಯನಾರಾಯಣ ಬೆಳೇರಿ ಹೇಳಿದರು.ಇವರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೊಯ್ಲ ಬಡಗನ್ನೂರು ಶಾಲೆಯಲ್ಲಿ ಜರುಗಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿವೃತ್ತ ಸೈನಿಕ ವಿದ್ಯಾಧರ ಪಾಟಾಳಿ ಮಾತನಾಡಿ ಭಾರತಾಂಬೆಯ ರಕ್ಷಣೆಯ ಕಾರ್ಯವು ಪುಣ್ಯದಾಯಕವಾದ ಕಾರ್ಯವಾಗಿದೆ. ಯುವಜನತೆಯು ಮನಃಪೂರ್ವಕವಾಗಿ ದೇಶ ಸೇವೆಯ ಕಿಚ್ಚನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಇಲ್ಲಿನ ನಿವೃತ್ತ ಮುಖ್ಯಶಿಕ್ಷಕಿ ಶಂಕರಿ ಮಾತನಾಡಿದರು. ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ದೇಶಕ್ಕಾಗಿ ಜೀವಿಸುವುದು ಮತ್ತು ದೇಶಕ್ಕಾಗಿ ಮಡಿಯುವುದು ಶ್ರೇಷ್ಠ ಕೆಲಸ ಎಂದರು.ತಾ.ಪಂ. ನಿಕಟ ಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಈ ಶಿಬಿರವು ವಿದ್ಯಾರ್ಥಿಗಳಿಗೆ, ಊರವರಿಗೆ, ಶಿಬಿರಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಲವಾರು ವಿಷಯಗಳನ್ನು ಕಲಿಸಿಕೊಟ್ಟಿದೆ ಎಂದರು.
ಉದ್ಯಮಿ ಹಾಗು ಪುತ್ತೂರು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ರೈ ಕಟ್ಟಾವು ಮಾತನಾಡಿದರು. ಹಿರಿಯ ಕೃಷಿಕರಾದ ಪದ್ಮಶ್ರೀ ಪುರಸ್ಕೃತ ಶ್ರೀ ಸತ್ಯನಾರಾಯಣ ಬೆಳೇರಿ, ನಿವೃತ್ತ ಸೈನಿಕ ವಿದ್ಯಾಧರ ಪಾಟಾಳಿ, ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕರಾದ ರಾಷ್ಟ್ರಮಟ್ಟದ ಯೋಗಪಟು ಕುಮಾರಿ ಶಿಲ್ಪಾ ಹಾಗೂ ರಾಜ್ಯಮಟ್ಟದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಪ್ರತೀಕ್ ಬಿ. ಇವರನ್ನು ಸನ್ಮಾನಿಸಲಾಯಿತು.ಶಾಲೆಯ ಸಹಶಿಕ್ಷಕ ಗಿರೀಶ್ ಸಮಾರೋಪ ಭಾಷಣ ಮಾಡಿದರು. ಕಾಲೇಜಿನ ಹಿರಿಯ ಗ್ರಂಥಪಾಲಕ ರಾಮ ಕೆ. ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ವರದಿಯನ್ನು ಘಟಕ 1ರ ನಾಯಕರಾದ ರಕ್ಷಣ್ ರೈ ಮತ್ತು ಕೃತಿಕಾ ಪಿ. ವಾಚಿಸಿದರು. ಶಿಬಿರಾರ್ಥಿಗಳಾದ ಮನೀಶ್, ಆದರ್ಶ ಎನ್., ಮಧುಶ್ರೀ ಕೆ.ಎಸ್., ಅಂಕಿತ ಎ.ಎಚ್. ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಪ್ರಜ್ವಲ್ ಆರ್.ಸಿ. ಮತ್ತು ಅಂಕಿತಾ ಎ.ಎಚ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಜನಾರ್ದನ ಪೂಜಾರಿ ಪದಡ್ಕ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ನಾಯ್ಕ್, ಊರವರು, ಶಾಲಾ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.