ಸಾರಾಂಶ
ಇತ್ತೀಚಿನ ದಿನಮಾನಗಳಲ್ಲಿ ಸೈಬರ್ ವಂಚಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಗದಗ
ಸೈಬರ್ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅದರಲ್ಲಿಯೂ ವಾಟ್ಸಪ್‌ಗೆ ಬರುವ ಎಪಿಕೆ ಫೈಲ್‌ಗಳನ್ನು ಓಪನ್ ಮಾಡಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ ಹೇಳಿದರು.ಬುಧವಾರ ಸಂಜೆ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಇತ್ತಿಚಿನ ದಿನಮಾನಗಳಲ್ಲಿ ಸೈಬರ್ ವಂಚಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳಿಂದಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ಲಕ್ಷಾಂತರ ಹಣ ಕಳೆದುಕೊಳವ ಸಾಧ್ಯತೆ ಇರುತ್ತದೆ. ಜಿಲ್ಲೆಯಲ್ಲಿಯೂ ಸೈಬರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆನ್‌ಲೈನ್ ವಂಚಕರು ಹೆಚ್ಚುತ್ತಿದ್ದಾರೆ.
ಸಾರ್ವಜನಿಕರು ಇಂತಹ ಪ್ರಕರಣದಿಂದ ಎಚ್ಚರಿಕೆಯಿಂದಿರಬೇಕು. ಎಸ್‌ಬಿಐ, ಕಿಸಾನ್ ಗ್ರೂಪ್ಮೂಲಕ, ಕೆವೈಸಿ ಅಪ್ ಡೆಟ್ ಮೂಲಕ ನಿಮ್ಮ ಮಾಹಿತಿ ಕಲೆ ಹಾಕಲು ಪ್ರಯತ್ನ ಮಾಡುತ್ತಾರೆ.
ಡಿಜಿಟಲ್ ಅರೆಸ್ಟ್ ಎಂಬ ಆ್ಯಪ್ ಮೂಲಕ ಪೋಲಿಸರು ಸೇರಿದಂತೆ ಬೇರೆ ಬೇರೆ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಹಣ ವಸೂಲಿ ಪ್ರಕರಣ ನಡೆಯುತ್ತಿವೆ. ಷೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಎಂದು ನಂಬಿಸುತ್ತಾರೆ.ಇದರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಇಂತಹ ಪ್ರಕರಣ ಕಂಡು ಬಂದಲ್ಲಿ 1930 ನಂಬರ್‌ಗೆ ಕರೆ ಮಾಡಿ ದೂರು ನೀಡಬೇಕು.
ಆನ್‌ಲೈನ್ ವಂಚನೆಯಂತ ಪ್ರಕರಣ ಬೆಳಕಿಗೆ ಬಂದಾಗ ತಕ್ಷಣ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗೆ ಬಂದು ದೂರು ನೀಡಬಹುದು. ಇದರ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಾಹನದ ಮೂಲಕಜಾಗೃತಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ. ಜೊತೆಗೆ ಮನೆ-ಮನೆಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತಿದ್ದೇವೆ ಎಂದು ಹೇಳಿದರು.
ಗದಗ ಜಿಲ್ಲಾದ್ಯಂತ ಸೈಬರ್ ಕ್ರೈಂ ಪ್ರಕರಣಗಳ ಪೈಕಿ 32 ಕೇಸ್‌ಗಳು ಸೆನ್ ಪೋಲಿಸ್ ಸ್ಟೆಷನ್‌ನಲ್ಲಿ ದಾಖಲಾಗಿವೆ.