ಡೆಂಘೀ ರೋಗ ಬರದಂತೆ ಎಚ್ಚರವಹಿಸಿ: ರವಿ ದಳವಾಯಿ

| Published : Jul 11 2024, 01:30 AM IST

ಡೆಂಘೀ ರೋಗ ಬರದಂತೆ ಎಚ್ಚರವಹಿಸಿ: ರವಿ ದಳವಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಡೆಂಘೀ ರೋಗ ಬರದ ಹಾಗೆ ಎಚ್ಚರವಹಿಸಬೇಕು. ಹಗಲು ಸಮಯದಲ್ಲಿ ಕಚ್ಚುವ ಸೊಳ್ಳೆಯಿಂದ ಈ ರೋಗ ಬರುತ್ತದೆ ಎಂದು ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದರು.

ಡೆಂಗ್ಯೂ ಮುನ್ನೆಚ್ಚರಿಕೆ, ಲಘು ಯೋಗಾಸನ ವಿಧಾನಗಳ ಕುರಿತು ಕಾರ್ಯಕ್ರಮ

ಕನ್ನಪ್ರಭ ವಾರ್ತೆ, ತರೀಕೆರೆ

ಡೆಂಘೀ ರೋಗ ಬರದ ಹಾಗೆ ಎಚ್ಚರವಹಿಸಬೇಕು. ಹಗಲು ಸಮಯದಲ್ಲಿ ಕಚ್ಚುವ ಸೊಳ್ಳೆಯಿಂದ ಈ ರೋಗ ಬರುತ್ತದೆ ಎಂದು ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದರು.

ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ನಡೆದ ಡೆಂಘೀ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಲಘು ಯೋಗಾಸನ ಮಾಡುವ ವಿಧಾನಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮ ಮನೆ ಮತ್ತು ಊರಲ್ಲಿ ಜನರಿಗೆ ಈ ಮಾಹಿತಿ ತಿಳಿಸಬೇಕು ಎಂದು ಹೇಳಿದರು.

ಆಯುರ್ವೇದ ಆಸ್ಪತ್ರೆ ಡಾ.ಕಾವ್ಯಶ್ರೀ ಅವರು ಡೆಂಘೀ ರೋಗದ ಮುನ್ನೆಚ್ಚರಿಕೆ ಕ್ರಮಗಳು ಹಾಗೂು ಲಘು ಯೋಗಾಸನ ಮಾಡುವ ವಿಧಾನಗಳ ಬಗ್ಗೆ ತರಬೇತಿದಾರರಿಗೆ ಮಾಹಿತಿ ನೀಡಿದರು.

ಸಂಸ್ಥೆಯ ಸಿಬ್ಬಂದಿ ತರಬೇತಿ ಅಧಿಕಾರಿ ಕೆ.ಬಿ.ರವಿ, ಪ್ರಸನ್ನಕುಮಾರ್, ಸುರೇಶ್, ಚರಣ್ ಸಿಂಗ್, ರಂಜಿತ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.10ಕೆಟಿಆರ್.ಕೆಃ10ಃ

ತರೀಕೆರೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಡೆಂಘೀ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಲಘು ಯೋಗಾಸನ ಮಾಡುವ ವಿಧಾನಗಳ ಕುರಿತು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ರವಿ ದಳವಾಯಿ ಮತ್ತಿತರು ಇದ್ದರು.