ಸಾರಾಂಶ
ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ಅಂಗವಾಗಿ ಶಹಾಪುರದ ಬಸವೇಶ್ವರ ವೃತ್ತದಲ್ಲಿ ಕೋಮು ಸೌಹಾರ್ದ ವೇದಿಕೆ ವತಿಯಿಂದ ಮಾನವ ಸರಪಳಿ ನಿರ್ಮಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶಹಾಪುರ
ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜದಲ್ಲಿ ಭೇದ-ಭಾವ ಹುಟ್ಟುಹಾಕಿ ರಾಜಕೀಯ ಮಾಡುವ ರಾಜಕಾರಣಿಗಳಿಂದ ಎಚ್ಚರವಿರಬೇಕು ಎಂದು ಪ್ರಗತಿಪರ ಚಿಂತಕ ಹಾಗೂ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.ನಗರದ ಬಸವೇಶ್ವರ ವೃತ್ತದಲ್ಲಿ ಕೋಮು ಸೌಹಾರ್ದ ವೇದಿಕೆ ವತಿಯಿಂದ ನಡೆದ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ಅಂಗವಾಗಿ ಮಾನವ ಸರಪಳಿ ನಿರ್ಮಿಸಿ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕೋಮುಗಲಭೆ, ಶಾಂತಿ ಕದಡುವ ಮತೀಯ ಶಕ್ತಿಗಳಿಂದ ಎಚ್ಚರವಿರಬೇಕು ಎಂದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಮಾತನಾಡಿ, ಜಾತಿ, ಧರ್ಮ ಯಾವುದೇ ಇರಲಿ ದಮನಿತರಾಗಿ ಬದುಕುತ್ತಿರುವ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದು ಸಂವಿಧಾನ. ಸಂವಿಧಾನದ ಧೈರ್ಯದಿಂದಲೇ ಪ್ರತಿಯೊಬ್ಬ ಭಾರತೀಯ ಜೀವಿಸುತ್ತಿರುವುದು ಎಂದರು.ಹಿರಿಯ ನ್ಯಾಯವಾದಿ ಆರ್. ಚನ್ನಬಸ್ಸು ವನದುರ್ಗ, ಸೈಯದ್ ಇಬ್ರಾಹಿಂ ಸಾಬ್, ಸಿದ್ಲಿಂಗಪ್ಪ ಆನೆಗುಂದಿ, ನೀಲಕಂಠ ಬಡಿಗೇರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ್ ಹೊಸಮನಿ, ನಾಗಣ್ಣ ಬಡಿಗೇರ್, ಎಸ್.ಎಂ.ಸಾಗರ್, ಬಸಲಿಂಗಮ್ಮ ನಾಟೇಕಾರ, ಯಮನಮ್ಮ ದೋರನಹಳ್ಳಿ, ರಂಗಮ್ಮ ಕಟ್ಟಿಮನಿ, ಚಂದಮ್ಮ ನಾಯ್ಕಲ್, ರಾಜೇಶ್ವರಿ, ಅನಿತಾ ಹಿರೇಮಠ, ಲಕ್ಷ್ಮೀ ಶಹಾಪುರ, ಮಹಾದೇವಿ ಕಾಡಂಗೇರಾ, ದಾವಲ್ ಸಾಬ್ ನದಾಫ್ ಸೇರಿ ಇತರರಿದ್ದರು.