ಹೊಸದುರ್ಗ ತಾಲೂಕಿನ ಕೆಲ್ಲೋಡು ಕನಕ ಗುರುಪೀಠದ ಸಭಾಂಗಣದಲ್ಲಿ ಟಿ.ಎಸ್.ರಾಜೇಂದ್ರ ಪ್ರಸಾದ್ ರಚನೆಯ ಬಿ.ಜಿ.ವೆಂಕಟೇಶ್ ಅವರ ಬದುಕು ಸಾಹಿತ್ಯ ಕುರಿತ ಸತ್ಪುರುಷ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಸ್ನೇಹತ್ವದಲ್ಲಿ ಅಪಾರ ವಿಶ್ವಾಸ ನಂಬಿಕೆ ಉಳ್ಳ ಬಿ.ಜಿ.ವೆಂಕಟೇಶ್ ಸಾಕಷ್ಟು ಸಾಹಿತ್ಯ ಚಟುವಟಿಕೆ ತೊಡಗಿಸಿಕೊಂಡಿದ್ದು ಅವರ ನಿಧನದ ನಂತರ ಅವರ ಕವನಗಳನ್ನು ಹಾಗೂ ಅವರ ವೃತ್ತಿ ಬದುಕನ್ನು ಪುಸ್ತಕ ರೂಪದಲ್ಲಿ ಬರತಂದಿರುವುದು ಸಂತಸದ ವಿಷಯ ಎಂದು ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿದರು.ತಾಲೂಕಿನ ಕೆಲ್ಲೋಡು ಕನಕಗುರು ಪೀಠದ ಸಭಾಂಗಣದಲ್ಲಿ ಟಿ.ಎಸ್.ರಾಜೇಂದ್ರ ಪ್ರಸಾದ್ ರಚನೆಯ ಬಿ.ಜಿ.ವೆಂಕಟೇಶ್ ಅವರ ಬದುಕು ಸಾಹಿತ್ಯ ಕುರಿತ ಸತ್ಪುರುಷ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನೌಕರರರಾಗಿದ್ದರು ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಸಾಹಿತ್ಯ ಕ್ಷೇತ್ರದ ಯಾವುದೇ ಕಾರ್ಯಕ್ರಮಗಳಿಗೂ ತಪ್ಪದೆ ಭಾಗವಹಿಸುತ್ತಿದ್ದ ಅವರ ಸ್ನೇಹಪರ ಜೀವನ ಸಾರ್ಥಕವಾದದ್ದು ಎಂದರು.
ಕೃತಿ ಬಿಡುಗಡೆ ಮಾಡಿದ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ಎಲ್ಲರ ಜೊತೆ ಒಳ್ಳೆಯ ವಿಶ್ವಾಸ ಹೊಂದಿದ್ದ ಗೆಳೆಯ ಬಿ.ಜಿ.ವೆಂಕಟೇಶ್ ಅಜಾತಶತ್ರು ಎಂದು ಬಣ್ಣಿಸಿದರು.ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ನನ್ನ ಸಹೋದರ ಬಿ.ಜಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ನನ್ನ ರಾಜಕೀಯ ಬದುಕನ್ನ ರೂಪಿಸಿಕೊಂಡಿದ್ದು ಅವರ ಸಲಹೆ ಸಹಕಾರದಿಂದ ಉತ್ತಮ ಆದರ್ಶ ಜೀವನವನ್ನು, ಸಮಾಜ ಸೇವೆಯನ್ನು ಅಳವಡಿಸಿಕೊಳ್ಳಲು ನಮಗೆ ಮಾರ್ಗದರ್ಶಿಯಾಗಿದ್ದರು ಎಂದರು.
ಕನಕ ಗುರು ಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ವೃತ್ತಿ ಜೀವನದಲ್ಲಿ ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ್ದ ಬಿ.ಜಿ.ವೆಂಕಟೇಶ್ ಸಮಾಜದ ಸಂಘಟನೆಯಲ್ಲಿ ಗುರುಪೀಠದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಶ್ರೀಮಠದ ಅಭಿವೃದ್ಧಿಗೆ ಅವರ ಸಹಕಾರ ಸಾಕಷ್ಟಿತ್ತು ಎಂದರು.ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠದ ಪ್ರಧಾನ ಕಾರ್ಯದರ್ಶಿ ಸಾಹಿತಿ ಮಾಗೋಧಿ ಮಂಜಪ್ಪ, ಪ್ರಕಾಶಕ ಎಂ.ಆರ್.ಸಿ ಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಮುಖಂಡರಾದ ಎಂ.ಎಚ್. ಕೃಷ್ಣಮೂರ್ತಿ, ಕೆ.ಅನಂತ್, ರಾಗಿ ಶಿವಮೂರ್ತಿ, ತಾಳಿಕಟ್ಟೆ ಗಂಗಾಧರ್, ಡಾ.ಬಿ.ಎಚ್. ಹನುಮಂತಪ್ಪ, ಸಾಹಿತಿ ರಾಜೇಂದ್ರ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೇಣುಪ್ರಸಾದ್, ಮೈಸೂರು ಡಿಎಚ್ಒ ಡಾ.ಕುಮಾರಸ್ವಾಮಿ, ನಿವೃತ್ತ ಡಿಎಚ್ಒಗಳಾದ ಡಾ.ಬಿ.ವಿ.ನೀರಜ್, ಡಾ.ಜಗದೀಶ್, ಡಾ.ಜಯಪ್ರಕಾಶ್, ಡಾ.ಮಲ್ಲಿಕಾರ್ಜುನಯ್ಯ, ಕನಕ ನೌಕರ ಸಂಘದ ಅಧ್ಯಕ್ಷ ಮಹಾಂತೇಶ್, ಎನ್.ಸಿ.ಚಂದ್ರಶೇಖರ್, ಶಾಂತಮೂರ್ತಿ, ಶೃಂಗೇಶ್, ಕನಕ ನೌಕರ ಸಂಘದ ಪದಾಧಿಕಾರಿಗಳು, ಬಿ.ಜಿ.ವೆಂಕಟೇಶ್ ಅವರ ಕುಟುಂಬದವರು ಹಾಜರಿದ್ದರು.