ಸಾರಾಂಶ
ಅಧ್ಯಾಪಕರು ಕಲಿಕೆ ಎಲ್ಲಿ ನಿಲ್ಲಿಸುವರೋ ಅಲ್ಲಿಯೇ ವಿದ್ಯಾರ್ಥಿಗಳು ಮುಂದೆ ಕಲಿಯದೆ ಸ್ಥಗಿತಗೊಳ್ಳುವುದು
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವದ ದಾರ್ಶನಿಕ ವ್ಯಕ್ತಿಗಳ ತತ್ವಗಳು ಇಂದಿನ ಯುವ ಸಮುದಾಯಕ್ಕೆ ತಲುಪದೇ, ಅನುಸಂಧಾನಗೊಳ್ಳದೆ ಹೋದರೆ ಜಗತ್ತು ನೈತಿಕ ಅದಃಪತನ ಹೊಂದುತ್ತದೆ ಎಂದು ಬಿಜಿಎಸ್ ಬಿ.ಇಡಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಬಿ. ಬೆಟ್ಟಸ್ವಾಮಿ ಹೇಳಿದರು.ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ಸಾಹುಕಾರ ಕಬ್ಬಳ್ಳಿ ಚನ್ನಬಸಪ್ಪನವರ ವೀರಶೈವ ಆಶ್ರಮದಲ್ಲಿ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ಶಿಕ್ಷಣ ಮೌಲ್ಯಗಳು ಕುರಿತು ಮಾತನಾಡಿದ ಅವರು, ಅಧ್ಯಾಪಕರು ಕಲಿಕೆ ಎಲ್ಲಿ ನಿಲ್ಲಿಸುವರೋ ಅಲ್ಲಿಯೇ ವಿದ್ಯಾರ್ಥಿಗಳು ಮುಂದೆ ಕಲಿಯದೆ ಸ್ಥಗಿತಗೊಳ್ಳುವುದು ಎಂದು ವಿಷಾದಿಸಿದರು.ಕಲಿಯು ವಿಷಯದಲ್ಲಿ ಏನೆಲ್ಲಾ ಸಾಮಗ್ರಿಗಳು, ಪೂರಕ ಸಾಹಿತ್ಯ ಇರುತ್ತೋ ಅವುಗಳ ಬಗ್ಗೆ ಅರಿವು ಪಡೆಯದಿದ್ದರೆ ನಾವು ಪ್ರಗತಿ ಹೊಂದಲು ಸಾಧ್ಯವಿಲ್ಲ. ಇಂದಿನ ಕಲಿಕಾ ಮಟ್ಟ ತುಂಬಾ ಕುಸಿದು ಹೋಗಿದೆ. ಸದ್ಭಾವನೆಗಳ ಕಡೆಗೆ ನಮ್ಮ ಮನಸ್ಸು ಸದಾ ತುಡಿಯಬೇಕು ಎಂದು ಅವರು ತಿಳಿಸಿದರು.ಇದೇ ವೇಳೆ ಕರ್ನಾಟಕ ಸರ್ಕಾರದಿಂದ ಶಿಶುನಾಳ ಶರೀಫ ಪ್ರಶಸ್ತಿ ಪಡೆದ ಹಿರಿಯ ಗಾಯಕ ಎಸ್. ಮಲ್ಲಣ್ಣ ಅವರನ್ನ ಸನ್ಮಾನಿಸಲಾಯಿತು.ಪರಿಷತ್ತಿನ ನಗರಾಧ್ಯಕ್ಷ ಮ.ಗು. ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಆಶ್ರಮದ ಅಧ್ಯಕ್ಷ ಎಚ್.ಜಿ. ಗುರುಪ್ರಸಾದ್, ಮೋಹನ್ ಶಂಕರ್, ನಂದೀಶ್, ಬಸವರಾಜ್, ಪ್ರಭುಸ್ವಾಮಿ, ಮಂಗಳ ಮುದ್ದುಮಾದಪ್ಪ ಇದ್ದರು. ಪ್ರಜ್ವಲ್ ಪ್ರಾಥಿಸಿದರು. ರಾಜಶೇಖರ್ ಸ್ವಾಗತಿಸಿದರು. ಎಂ. ಮಹದೇವಸ್ವಾಮಿ ವಂದಿಸಿದರು. ಅಭಿಷೇಕ್ ನಿರೂಪಿಸಿದರು.