ಬಿಜಿಎಸ್ ಶಿಕ್ಷಣ ಸಂಸ್ಥೆ ಬಡವರ, ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿವೆ: ಗುಣನಾಥ ಶ್ರೀ

| Published : Feb 21 2025, 12:47 AM IST

ಬಿಜಿಎಸ್ ಶಿಕ್ಷಣ ಸಂಸ್ಥೆ ಬಡವರ, ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿವೆ: ಗುಣನಾಥ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಬಡವರು ಮತ್ತು ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಿಬಿಎಸ್ ಸಿಇ ಶಿಕ್ಷಣ ಆರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ

ಕನ್ನಡಪ್ರಭ ವಾರ್ತೆ ಕಡೂರು

ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಬಡವರು ಮತ್ತು ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು. ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಿಬಿಎಸ್ ಸಿಇ ಶಿಕ್ಷಣ ಆರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ನಮ್ಮ ಹಿರಿಯ ಶ್ರೀ ಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಅದರಲ್ಲೂ ಬಡವರ, ರೈತರ ಮಕ್ಕಳು ಸಹ ವಿಜ್ಞಾನ ವಿಷಯ ಕಲಿವ ಮೂಲಕ ವಿಜ್ಞಾನಿಗಳಾಗಬೇಕೆಂಬ ಮಹದಾಸೆಯಿಂದ ಒಂದೇ ಬಾರಿಗೆ 30ಕ್ಕೂ ಹೆಚ್ಚಿನ ವಿಜ್ಞಾನ( ಪಿಯುಸಿ) ಕಾಲೇಜುಗಳನ್ನು ತೆರೆಯಲಾಯಿತು. ಅದರಲ್ಲಿ ಕಡೂರು ಬಿಜಿಎಸ್ ವಿಜ್ಞಾನ ಕಾಲೇಜು ಸಹ ಹೊಂದಲಾಗಿದೆ. ಶ್ರೀಗಳಿಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನೀಡಿದ ಒಂದು ಸಲಹೆಗೆ ಹಿರಿಯ ಶ್ರೀಗಳು ವಿಜ್ಞಾನ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು ಎಂದರು. ಕಡೂರು ಶಾಸಕ ಆನಂದ್ ಇಂಜಿನಿಯರ್ ಮತ್ತು ಮೆಡಿಕಲ್ ಕಾಲೇಜನ್ನು ಬಿಜಿಎಸ್ ಸಂಸ್ಥೆಯಿಂದ ಕಡೂರು ಪಟ್ಟಣದಲ್ಲಿ ತೆರೆಯಲು ಮನವಿ ಮಾಡಿರುವುದು ಅವರು ಕ್ಷೇತ್ರದ ಶೈಕ್ಷಣಿಕ ಬಗ್ಗೆ ಕಾಳಜಿ ಇರುವ ಕಾರಣಕ್ಕೆ ಅಭಿನಂದಿಸುತ್ತೇವೆ. ನಿಮ್ಮೆಲ್ಲರ ಸಹಕಾರ ಇದ್ದರೆ ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡೋಣ ಎಂಬ ಸೂಚನೆ ನೀಡಿದರು. ವಾರ್ಷಿಕೋತ್ಸವವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಶ್ರೀ ಡಾ. ಬಾಲಗಂಗಾಧರನಾಥ ಶ್ರೀಗಳು 4500ಕ್ಕೂ ಹೆಚ್ಚಿನ ಶಾಲಾ-ಕಾಲೇಜುಗಳನ್ನು ತೆರೆದು ಗ್ರಾಮೀಣ ಭಾಗಗಳಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದ ಸಂಸ್ಥೆ ಎಂದರೆ ತಪ್ಪಾಗಲಾರದು. ಕಡೂರು ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೂ ಶಿಕ್ಷಣ ನೀಡುತ್ತಿದ್ದು ಈಗ ಸಿಬಿಎಸ್ಇು ಶಿಕ್ಷಣ ನೀಡಲು ಆರಂಭಿಸಿದ್ದು ಗ್ರಾಮೀಣ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಕಡೂರು ಎಂದರೆ ಬರಗಾಲಪೀಡಿತ ಪ್ರದೇಶ ಎಂಬ ಪ್ರತೀತಿ ಇದ್ದು. ಶೈಕ್ಷಣಿಕವಾಗಿ ಇಂಜಿನಿಯರ್ ಮತ್ತು ಮೆಡಿಕಲ್ ಕಾಲೇಜುಗಳನ್ನು ಬಿಜಿಎಸ್ ಶಿಕ್ಷಣ ಸಂಸ್ಥೆ ತೆರೆಯಲು ಮುಂದಾದರೆ ತಾವು ಸರ್ಕಾರದಿಂದ ಮತ್ತು ವೈಯುಕ್ತಿಕವಾಗಿಯೂ ಸಹಕರಿಸುತ್ತೇನೆ. ಕಡೂರು ಬಿಜಿಎಸ್ ಕಾಲೇಜಿನಲ್ಲಿ ವಿಜ್ಞಾನ ಮಾತ್ರ ಇದ್ದು ಕಲೆ ಮತ್ತು ವಾಣಿಜ್ಯ ವಿಭಾಗಗಳನ್ನು ಸಹ ತೆರೆಯಲಿ ಎಂದರು.

ಸಂಸ್ಥೆಯ ಪ್ರಾಚಾರ್ಯರಾದ ಎಚ್.ಎಸ್.ಸುಮಿತ್ರ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಚಿಕ್ಕಮಗಳೂರು ಜಿಲ್ಲಾ ಪಿಯುಸಿ ನಿರ್ದೇಶಕ ಪುಟ್ಟಾನಾಯ್ಕ ಅವರು ಡಾ.ರಾಜ್ ಕುಮಾರ್ ಅಭಿನಯದ ಚಿತ್ರ ಗೀತೆಗಳನ್ನು ಹಾಡಿ, ಅಭಿನಯಿಸುವ ಮೂಲಕ ಮನರಂಜಿಸಿದರು. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು ಜಿ.ಕೆ, ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧರಾಜನಾಯ್ಕ ಹಾಗೂ ಇಂಜಿನಿಯರ್ ತರುಣ್ ಶಶಿ ಸೇರಿದಂತೆ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ, ಪೋಷಕರು, ಮಕ್ಕಳು ಇದ್ದರು. 20ಕೆಕೆಡಿಯು1.

ಕಡೂರು ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಸಿಬಿಎಸ್ ಸಿಇ ಶಾಲೆ ಆರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀಗುಣನಾಥ ಸ್ವಾಮೀಜಿ ಮತ್ತಿತರರು ಇದ್ದರು.