ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ರಕ್ತದ ಕಣಕಣಗಳಲ್ಲಿಯೂ ರಾಷ್ಟ್ರಪ್ರೇಮ ತುಂಬಿಕೊಂಡು ದೇಶದ ಸ್ವಾತಂತ್ರ‍್ಯಕ್ಕಾಗಿ ಪ್ರಾಣವನ್ನೇ ಮುಡುಪಾಗಿಟ್ಟ ಅಪ್ರತಿಮ ಹೋರಾಟಗಾರ ಕ್ರಾಂತಿಯ ಕಿಡಿ ಭಗತ್ ಸಿಂಗ್ ಅವರ ದೇಶಪ್ರೇಮ ಯುವಕರಿಗೆ ಪ್ರೇರಣೆ ಎಂದು ನ್ಯಾಯವಾದಿ, ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ನಗರದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಮತ್ತು ಭಾರತ ವೇದಿಕೆ ಚಾರಿಟೇಬಲ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ ಭಗತ್ ಸಿಂಗ್ ಜಯಂತ್ಯುತ್ಸವದಲ್ಲಿ ಭಗತ್ ಸಿಂಗ್‌ನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.ಈ ವೇಳೆ ಸಾಹಿತಿ ಪ್ರೊ.ಎ.ಎಚ್.ಕೊಳಮಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯತಂದು ಕೊಡುವುದೇ ಭಗತ್ ಸಿಂಗನ ಗುರಿ ಮತ್ತು ಛಲವಾಗಿತ್ತು. ಬಾಲದಿಂದಲೂ ದೇಶಪ್ರೇಮವನ್ನು ಒಳಗೊಂಡಿದ್ದ ಅವರು ದುಷ್ಟ ಬ್ರಿಟಿಷರನ್ನು ಹೊಡೆದು ಓಡಿಸುವುದೇ ನನ್ನ ಛಲ ಎಂದು ಹೋರಾಡಿದವರು. ಅವರು ಕೇವಲ 24ನೇ ವರ್ಷದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್‌ನ ದೇಶಾಭಿಮಾನವನ್ನು ಇಂದಿನ ಯುವಕರು ಅನುಸರಿಸಬೇಕು. ತಾಯಿ ಹಾಗು ತಾಯಿ ನಾಡಿಗಾಗಿ ಹೋರಾಡುವ ಯುವ ಪಡೆಯ ಅವಶ್ಯಕತೆ ಇದೆ ಎಂದು ಹೇಳಿದರು.
ಫೌಂಡೇಷನ್ ಅಧ್ಯಕ್ಷ ಸುನಿಲ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ದೇಶ ಕಟ್ಟುವಲ್ಲಿ ಯುವಕರು ಕಂಕಣ ಬದ್ಧರಾಗಿ ನಿಲ್ಲಬೇಕು. ಇಂದಿನ ಯುವಕರಲ್ಲಿ ಭಗತ್ ಸಿಂಗನ ದೇಶಾಭಿಮಾನ ಬೆಳೆಯಬೇಕು ಎಂದರು.ಈ ವೇಳೆ ಗುರು ಗಚ್ಚಿನಮಠ, ಸಂಗಮೇಶ ಜಾಧವ, ಶಂಕರ ಹಾಲಳ್ಳಿ, ಸಂತೋಷ ಹೆಗಡೆ, ಅಮಿತ ನಾಯ್ಕೋಡಿ, ಸಂಜು ಹೂಗಾರ, ಕಿರಣ ಕೆಂಗನಗುತ್ತಿ ಅವಿನಾಶ ಮೆಹಿಂದ್ರಕರ, ವಿಜಯ ಮುರಗಾನೂರ, ಸುಧೀರ, ಪ್ರಸಾದ ಪಾಟೀಲ, ಪ್ರೇಮ ನಿಡೋಣಿ, ಯೋಗೇಶ ಹೊನಕೇರಿ ಉಪಸ್ಥಿತರಿದ್ದರು.