ಸಾರಾಂಶ
ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಭಗವದ್ಗಿತಾ ಅಭಿಯಾನದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹುಬ್ಬಳ್ಳಿ:
ಇಲ್ಲಿನ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಭಗವದ್ಗಿತಾ ಅಭಿಯಾನ ಧಾರವಾಡ ಜಿಲ್ಲಾ ಸಮಿತಿ ಆಶ್ರಯದಲ್ಲಿ ಭಾನುವಾರ ಭಗವದ್ಗೀತೆ ಕುರಿತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.ಪ್ರಾಥಮಿಕ ವಿಭಾಗ ಭಾಷಣ ಸ್ಪರ್ಧೆಯಲ್ಲಿ ಸಾನಿಧ್ಯ ಸಂಜೀವ ಪ್ರಥಮ, ನರಸಿಂಹ ಬೆಳಗಾವಕರ್ ದ್ವಿತೀಯ, ಭುವನ ಪಿ.ಬಿ. ಪ್ರೌಢಶಾಲಾ ವಿಭಾಗದಲ್ಲಿ ರವಿಕಿರಣ ಭಟ್ ಪ್ರಥಮ, ಸಾಕ್ಷಿ ಕುಲಕರ್ಣಿ ದ್ವಿತೀಯ, ಶ್ರೇಯಸ್ ಬಾರಕೇರ ತೃತೀಯ ಸ್ಥಾನ ಪಡೆದರು.
ಕಂಠಪಾಠ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಶ್ರದ್ಧಾ ಶಾನಭಾಗ್ ಪ್ರಥಮ, ಪರಿಮಳಾ ಜೋಶಿ ದ್ವಿತೀಯ, ವತ್ಸಾ ಎಸ್., ತೃತೀಯ. ಪ್ರೌಢಶಾಲಾ ವಿಭಾಗದಲ್ಲಿ ಅಂಕಿತ ರಾಮದುರ್ಗ ಪ್ರಥಮ, ಕಾರ್ತಿಕ ಕೆ., ದ್ವಿತೀಯ, ಅರ್ಜುನ್ ಪಿ., ತೃತೀಯ ಸ್ಥಾನ ಪಡೆದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನದ ವೀರರಾಜ ಕೆ, ದಾನೇಶ ಎಂ.ವಿ, ಎಸ್.ಆರ್. ಬೊಮ್ಮಾಯಿ ರೋಟರಿ ಸ್ಕೂಲ್‌ನ ರುಕ್ಮಿಣಿ ಸಾಲಗುಂದಿ, ಅಧಿತಿ ಕುಲಕರ್ಣಿ, ಭಾವದೀಪದ ಶ್ರಾವಣಿ ಕುಲಕರ್ಣಿ, ಮಾನಸಿ ಗಿರೀಶ ಹಿರೇಮಠ ವಿಜೇತರಾದರು.ವಿಜೇತ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಅಭಿಯಾನ ಸಮಿತಿ ಪದಾಧಿಕಾರಿಗಳಾದ ಅರವಿಂದ ಮುತ್ತಗಿ, ಗೋಪಾಲಕೃಷ್ಣ ಹೆಗಡೆ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ ಪ್ರಮಾಣಪತ್ರ ವಿತರಿಸಿದರು. ವೀಣಾ ಶಿವರಾಮ ಹೆಗಡೆ ಕಾರ್ಯಕ್ರಮ ನಡೆಸಿಕೊಟ್ಟರು.