ಸಾರಾಂಶ
ಇಳಕಲ್ಲ: ಬ್ರಾಹ್ಮಣ ಸಮಾಜ, ಉತ್ತರಾದಿಮಠ ಜ್ಞಾನವಾಹಿನಿ ಹಾಗೂ ಬಾಗಲಕೋಟೆಯ ವಿಶ್ವಮಾಧ್ವ ಪರಿಷತ್ ಏರ್ಪಡಿಸಿದ್ದ ಮೂರು ದಿನಗಳ ಶ್ರೀಮದ್ ಭಗವದ್ಗೀತಾ ಅಭಿಯಾನದ ಎರಡನೆಯ ಮಾಸಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥರ ಸುವರ್ಣ ಮಹೋತ್ಸವ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಇಳಕಲ್ಲ
ಬ್ರಾಹ್ಮಣ ಸಮಾಜ, ಉತ್ತರಾದಿಮಠ ಜ್ಞಾನವಾಹಿನಿ ಹಾಗೂ ಬಾಗಲಕೋಟೆಯ ವಿಶ್ವಮಾಧ್ವ ಪರಿಷತ್ ಏರ್ಪಡಿಸಿದ್ದ ಮೂರು ದಿನಗಳ ಶ್ರೀಮದ್ ಭಗವದ್ಗೀತಾ ಅಭಿಯಾನದ ಎರಡನೆಯ ಮಾಸಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥರ ಸುವರ್ಣ ಮಹೋತ್ಸವ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮನುಷ್ಯ ನೀಡಲೇಬೇಕಾಗಿರುವ ಪ್ರಾಧಾನ್ಯ, ಯೋಗ್ಯಾಯೋಗ್ಯ ಸ್ಮರಣೆಯ, ಸಂನ್ಯಾಸ ಯೋಗದಿಂದ ಜೀವನಕ್ಕೆ ದೊರೆಯುವ ನೆಮ್ಮದಿ ಮುಂತಾದ ವಿಷಯಗಳ ಬಗ್ಗೆ ಧೀರೇಂದ್ರಾಚಾರ್ಯರು ಪ್ರವಚನ ನೀಡಿದರು.
ಮೂರು ದಿನಗಳ ಕಾರ್ಯಕ್ರಮವನ್ನು ನಗರದ ಖ್ಯಾತ ನೇತ್ರತಜ್ಞ ಡಾ.ಸುಶೀಲ ಕಾಖಂಡಕಿ ಪ್ರಾಯೋಜಿಸಿದ್ದರು. ಕಾರ್ಯಕ್ರಮದ ಕೊನೆಯ ದಿನ ಇಳಕಲ್ಲ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ, ಉಪಾಧ್ಯಕ್ಷ ವಿಜಯ ಕಾರ‍್ಕಳ ಅವರು ಧೀರೇಂದ್ರಾಚಾರ್ಯರನ್ನು ಸನ್ಮಾನಿಸಿದರು. ವಿರುಪಾಕ್ಷಭಟ್ಟ ಜೋಶಿ, ಶ್ರೀಹರಿ ಪೂಜಾರ, ಸತೀಶ ಹುನಕುಂಟಿ, ರಮೇಶ ಕರ‍್ಕಳ ವೇದಪಾಠ ಮಾಡಿದರು.ಭಗವದ್ಗೀತೆಯ ಸುಮಾರು ೭೦೦ ಶ್ಲೋಕಗಳನ್ನು ನಿರರ್ಗಳವಾಗಿ ಕಂಠಪಾಠ ಮಾಡಿದ ಹೈದರಾಬಾದ್ ನ ಸಾತ್ವಿಕ್ ಎಂಬ ಬಾಲಕನನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು. ಕಮಲಾಕರರಾವ್ ದೇಶಪಾಂಡೆ ಪ್ರವಚನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಡು ಕಟ್ಟಿ ನಿರೂಪಿಸಿದರು. ಸಮಾಜದ ಹಿರಿಯರಾದ ಪಿ.ಜಿ. ಪಾಟೀಲ, ನಾರಾಯಣಾಚಾರ್ಯ ಪೂಜಾರ, ಗುರುರಾಜ ಕುಲಕರ್ಣಿ, ವೆಂಕಟೇಶ ಪೂಜಾರ, ನರಸಿಂಹಾಚಾರ ಪೂಜಾರ, ಪ್ರೊ.ಎಸ್.ಕೆ. ಕುಲಕರ್ಣಿ, ಪ್ರೊ.ಆರ್.ಕೆ. ಕುಲಕರ್ಣಿ, ಟಿ.ಎಚ್.ಕುಲಕರ್ಣಿ, ಪ್ರೊ.ಎಂ.ಎಸ್. ಜೋಶಿ, ದತ್ತು ಹುನಕುಂಟಿ, ವೆಂಕಟೇಶದಾಸ ಇತರರು ಉಪಸ್ಥಿತರಿದ್ದರು. ಲಕ್ಷ್ಮೀ ಮಹಿಳಾ ಮಂಡಳಿ ಸದಸ್ಯೆಯರಾದ ಗೀತಾ ಪಾಟೀಲ, ಚಂದ್ರಕಲಾ ಪೂಜಾರ, ಶ್ರೀದೇವಿ ಇನಾಮದಾರ, ಛಾಯಾ ಪುರಂದರೆ, ಜ್ಯೋತಿ ಕುಲಕರ್ಣಿ ಇತರರು ಇದ್ದರು.