ಭಗವದ್ಗೀತೆ ಜಯದ ಸಂದೇಶ ನೀಡುತ್ತದೆ: ಪುತ್ತಿಗೆ ಶ್ರೀಗಳು

| Published : Nov 20 2025, 01:30 AM IST

ಸಾರಾಂಶ

ಪರ್ಯಾಯ ಪುತ್ತಿಗೆ ಮಠ ವತಿಯಿಂದ ಕೃಷ್ಣಮಠ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವ ಸಂದರ್ಭದಲ್ಲಿ ಸಂತ ಸಂದೇಶ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಮ್ಮೆಲ್ಲಾ ಜಯಾಪಜಯಗಳಿಗೆ ಮನಸ್ಸೇ ಕಾರಣ, ಭಗವದ್ಗೀತೆ ಜಯದ ಸಂದೇಶ ನೀಡುತ್ತದೆ. ಆದ್ದರಿಂದ ಗೀತೆಯ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಂಡರೇ ನಿಶ್ಚಿತವಾಗಿ ಜಯಶಾಲಿಗಳಾಗಬಹುದು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಪರ್ಯಾಯ ಪುತ್ತಿಗೆ ಮಠ ವತಿಯಿಂದ ಕೃಷ್ಣಮಠ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವ ಸಂದರ್ಭದಲ್ಲಿ ಬುಧವಾರ ಆಯೋಜಿಸಲಾದ ಸಂತ ಸಂದೇಶ ಸಂದೇಶದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬೆಂಗಳೂರು ರಾಜರಾಜೇಶ್ವರಿ ನಗರದ ಕೈಲಾಸಾಶ್ರಮದ ಮಂಡಾಲಾಧೀಶ್ವರ ಶ್ರೀಜಯೇಂದ್ರಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಬೆಳಕು ಮತ್ತು ಜ್ಞಾನವೇ ಭಾರತ. ಅದನ್ನು ಬಯಸುವವರೆಲ್ಲರೂ ಭಾರತೀಯರು. ವಿದೇಶಿ ಸಂಸ್ಕೃತಿಗಳಿಗೆ ದಾಸರಾಗದೇ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ನಾವೆಲ್ಲರೂ ಪಣ ತೊಡಬೇಕು, ಗೀತೆಯ ಮೂಲಕ ಜ್ಞಾನದ ಬೆಳಕನ್ನು ವಿಶ್ವದಾದ್ಯಂತ ಪಸರಿಸುತ್ತಿರುವ ಪುತ್ತಿಗೆ ಶ್ರೀಗಳದು ಮಹತ್ಕಾರ್ಯ ಎಂದು ಪ್ರಶಂಸಿಸಿದರು.ಈ ಸಂದರ್ಭದಲ್ಲಿ ಶ್ರೀ ಜಯೇಂದ್ರಪುರಿ ಸ್ವಾಮೀಜಿಯವರನ್ನು ಪುತ್ತಿಗೆ ಮಠದ ವತಿಯಿಂದ ಗೌರವಿಸಲಾಯಿತು. ಪುತ್ತಿಗೆ ‌ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮಠದ ‌ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು. ಡಾ.ಗೋಪಾಲಾಚಾರ್ ನಿರೂಪಿಸಿದರು.