ಸಾರಾಂಶ
ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಭಗವಾನ್ ಬಿರ್ಸಾಮುಂಡ ೧೫೦ನೇ ಜನ್ಮದಿನಾಚರಣೆ ನಿಮಿತ್ತ ಜನಜಾತಿಯೇ ಗೌರ ವರ್ಷ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಭಗವಾನ್ ಬಿರ್ಸಾಮುಂಡ ೧೫೦ನೇ ಜನ್ಮದಿನಾಚರಣೆ ನಿಮಿತ್ತ ಜನಜಾತಿಯೇ ಗೌರ ವರ್ಷ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಇದರ ನಿಮಿತ್ತ ಸಿಎಸ್‌ಐಆರ್-ಎನ್‌ಎಎಲ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿಜ್ಞಾನಿ ಶೋಭವತಿ ಮಾತನಾಡಿ, ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶಾಲೆಗಳಲ್ಲಿ ಶಿಕ್ಷಣವು ಸಮಗ್ರ ಅಭಿವೃದ್ಧಿ, ಸಾಂಸ್ಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಸಬಲೀಕರಣ ನಿರ್ಣಾಯಕವಾಗಿದೆ. ಇದು ವ್ಯಕ್ತಿತ್ವ ನಿರ್ಮಾಣ ಮತ್ತು ಆಧುನಿಕ ಶಿಕ್ಷಣದೊಂದಿಗೆ ಸಂಪ್ರದಾಯಿಕ ಜ್ಞಾನದ ಏಕೀಕರಣಕ್ಕೆ ಒತ್ತು ನೀಡುತ್ತದೆ. ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ವಿದ್ಯಾರ್ಥಿಗಳನ್ನು ಸಂಕೀರ್ಣ ಜಗತ್ತಿಗೆ ಸಿದ್ಧಪಡಿಸುತ್ತದೆ ಎಂದು ತಿಳಿಸಿದರು.ಸಿಆರ್‌ಪಿ ರೇಚಣ್ಣ, ಮುಖ್ಯ ಶಿಕ್ಷಕ ಕೆ. ಜಯಶಂಕರ್ ಮಾತನಾಡಿದರು. ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗುವ ಅನೇಕ ಕಾರ್ಯಕ್ರಮಗಳನ್ನು ಎನ್‌ಎಎಲ್ ತಂಡವು ನಡೆಸಿಕೊಟ್ಟಿತು. ವಿನೂತನ ಮಾದರಿ, ಡ್ರೋನ್ ಬಳಕೆಯ ವಿಧಾನ ಅದರ ಉಪಯೋಗವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಇದೆ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ವಿಜ್ಞಾನಿಗಳಾದ ನಾಯ್ಡು, ಶ್ವೇತಾ, ನವನೀತ, ಮಹೇಶ್ ಮುಖ್ಯ ಶಿಕ್ಷಕಿ ರಾಜೇಶ್ವರಿ, ಶಿಕ್ಷಕರಾದ ಉಮಾಶಂಕರ್, ರಾಜೇಂದ್ರ, ಸುಮಾ, ತುಳಸಿ, ವಿಜಯ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.