ಸಾರಾಂಶ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಶ್ರೀ ಭಗಿರಥ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಶ್ರೀ ಭಗಿರಥ ಜಯಂತಿ ಆಚರಿಸಲಾಯಿತು.ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಶ್ರೀ ಭಗೀರಥ ಅವರ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪಾರ್ಚನೆಯನ್ನು ಸಲ್ಲಿಸಿ ನಮಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಯೂಬ್ ದ್ರಾಕ್ಷಿ, ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ಜಕ್ಕಪ್ಪ ಯಡವೆ, ಮುತ್ತಪ್ಪ ಕೆ.ಶಿವಣ್ಣನವರ, ಅನಿಲ್ ಅವಳೆ, ಯಲ್ಲಪ್ಪ ಬಂಡಿ, ಡಾ.ಸುರೇಶ ಕಾಗಲಕರ್‌ರೆಡ್ಡಿ, ಸಿದ್ದು ಗೆರಳೆ, ಸಾಬು ಕಾತ್ರಾಳ, ಜೆ.ಎಲ್. ಕಸ್ತೂರಿ, ಶ್ರೀನಿವಾಸ್ ಅಂಬಲಿ, ಸುರೇಶ ಶಹಾಪೂರ, ಪುಂಡಲಿಕ್ ಉಪ್ಪಾರ, ವಿದ್ಯಾವತಿ ಅಂಕಲಗಿ ಮುಂತಾದವರು ಇದ್ದರು.