ಭೂ ಲೋಕದ ಜೀವಿಗಳ ದಾಹ ತಣಿಸಿದ ಭಗೀರಥ ಮಹರ್ಷಿ

| Published : May 05 2025, 12:50 AM IST

ಸಾರಾಂಶ

ಭಾರತೀಯ ಸಂಸ್ಕೃತಿ ಇಡೀ ಪ್ರಪಂಚದಲ್ಲಿಯೇ ವಿಶಿಷ್ಟತೆ ಹೊಂದಿದ್ದು, ಅನೇಕ ದಾರ್ಶನಿಕರು, ಸಾಧು ಸಂತರು, ಸತ್ಪುರುಷರನ್ನು ಪ್ರಪಂಚಕ್ಕೆ ಕೊಡುಗೆ ನೀಡಿದೆ

ಕೊಪ್ಪಳ(ಯಲಬುರ್ಗಾ): ಭಗೀರಥ ಮಹರ್ಷಿಗಳು ಗಂಗೆಯನ್ನು ಭೂಮಿಗೆ ತರಿಸಿ ಭೂ ಲೋಕದ ಜೀವಿಗಳ ದಾಹ ತೀರಿಸಿದರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು,ಮನುಕುಲಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದು ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ ಹೇಳಿದರು.

ಜಿಲ್ಲೆಯ ಯಲಬುರ್ಗಾ ಪಟ್ಟಣದ ಭಗೀರಥ ಮಹರ್ಷಿ ವೃತ್ತದಲ್ಲಿ ಭಾನುವಾರ ತಾಲೂಕಾಡಳಿತ ಇಲಾಖೆಯಿಂದ ಜರುಗಿದ ಶ್ರೀಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ,ಭೂಲೋಕದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮರಾಗಿದ್ದಾರೆ. ಭಾರತೀಯ ಸಂಸ್ಕೃತಿ ಇಡೀ ಪ್ರಪಂಚದಲ್ಲಿಯೇ ವಿಶಿಷ್ಟತೆ ಹೊಂದಿದ್ದು, ಅನೇಕ ದಾರ್ಶನಿಕರು, ಸಾಧು ಸಂತರು, ಸತ್ಪುರುಷರನ್ನು ಪ್ರಪಂಚಕ್ಕೆ ಕೊಡುಗೆ ನೀಡಿದೆ. ಇವರೆಲ್ಲರೂ ಸಕಲ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ.ಅಂತಹ ಸತ್ಪುರುಷರಲ್ಲಿ ಭಗೀರಥ ಮಹರ್ಷಿ ಪ್ರಮುಖರು, ಈ ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಭಗೀರಥ ಸಮಾಜದ ಅಧ್ಯಕ್ಷ ಈರಪ್ಪ ದಸ್ತಾನಿ ಹಾಗೂ ಯುವ ಮುಖಂಡ ಈಶ್ವರ ಅಟಮಾಳಗಿ ಮಾತನಾಡಿ, ಭಗೀರಥ ಮಹರ್ಷಿಗಳ ಕಾಯಕ ನಿಷ್ಠೆಯ ಗುಣಗಳನ್ನು ಪಾಲಿಸಿ ಸಮಾಜಕ್ಕೆ ಉತ್ತಮ ಸೇವೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶರಣಪ್ಪ ಉಪ್ಪಾರ, ಹನುಮಂತಪ್ಪ ಕೆರಳ್ಳಿ, ರಾಮನಗೌಡ ಭಾವಿಕಟ್ಟಿ, ಬಸವರಾಜ ದಮ್ಮೂರು, ಮೈಲಾರಪ್ಪ ಚಾಮಲಾಪೂರು, ಫಕೀರಪ್ಪ ಉಪ್ಪಾರ, ಎಂ.ಎಫ್. ನದಾಫ್, ಮೆಹಬೂಬುಸಾಬ್‌ ಮಂಕಾದಾರ, ಕರಿಯಪ್ಪ ಗುರಿಕಾರ, ವೈ.ಬಿ.ಮೇಟಿ, ಯಲ್ಲಪ್ಪ ಮಡಿಕೇರಿ, ಬಾಲರಾಜ ಮಾರನಾಳ, ರಮೇಶ ಚಿಕ್ಕಗೌಡ್ರು, ತಹಸೀಲ್ದಾರ್‌ ಸಿಬ್ಬಂದಿ ಹನುಮಗೌಡ ಮಾಲಿಪಾಟೀಲ, ಶುಂಭು, ಆರ್. ರಹೇಮಾನ ಇತರರಿದ್ದರು.