ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಉಪ್ಪಾರ ಜನಾಂಗದ ವತಿಯಿಂದ ಮಹರ್ಷಿ ಶ್ರೀ ಭಗೀರಥ ಜಯಂತಿ ಅಂಗವಾಗಿ ಭಗೀರಥ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.ಗ್ರಾಮದ ಪಂಚಾಯಿತಿ ರಸ್ತೆಯಲ್ಲಿರುವ ಚಾವಡಿ ಮುಂದೆ ಬಳಿ ಅಲಂಕೃತಗೊಂಡ ಬೆಳ್ಳಿ ರಥದಲ್ಲಿ ಭಗೀರಥ ಪೋಟೋ ಇಟ್ಟು ಪೂಜೆ ಸಲ್ಲಿಸಿ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಆಚರಿಸಿದರು. ಮೆರವಣಿಗೆಯಲ್ಲಿ ಹೆಣ್ಣುಮಕ್ಕಳಿಂದ ನೂರೊಂದು ಕುಂಭಕಳಸ, ರಾಮ, ಲಕ್ಷಣ, ಭಗೀರಥ, ಆಂಜನೇಯ, ಈಶ್ವರ ವೇಷಧಾರಿಗಳು ಇದ್ದರು. ಟಮಟೆ, ಡೊಲ್ಲು, ಕೊಂಬು, ಕಹಳೆ, ಗ್ರಾಮದ ದೇವತೆಯ ಸತ್ತಿಗೆ, ಸೂರಪಾನಿಗಳನ್ನು ಹಾಗೂ ಡಿಜೆ ಸೌಂಡ್ಸ್ , ಮಂಗಳವಾದ್ಯದೊಂದಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಂಲಕರ ಹಾಗೂ ಹಸಿರು ತೋರಣ ಮಾಡಲಾಯಿತು. ಪ್ರತಿ ಮನೆಮನೆಯಿಂದ ಹಣ್ಣು ಕಾಯಿ ಪೂಜೆ ನಡೆಸಿದರು.
ಭಗೀರಥ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್ ಮಾತನಾಡಿ, ಮಹರ್ಷಿ ಶ್ರೀ.ಭಗೀರಥ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆ ಇದುದ್ದರಿಂದ ಸರಳವಾಗಿ ಆಚರಣೆ ಮಾಡಿದ್ದ ಕಾರಣ ನಮ್ಮ ಗ್ರಾಮದ ಯಜಮಾನರು, ಮುಖಂಡರು ಸಭೆ ಸೇರಿ ಅದ್ದೂರಿ ಆಚರಣೆಗೆ ತೀರ್ಮಾನ ಮಾಡಿ ಇಂದು ಭಗೀರಥ ಜಯಂತಿ ಬೆಳ್ಳಿ ರಥದಲ್ಲಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಎಂದರು.ಮೆರವಣಿಗೆಯಲ್ಲಿ ದೊಡ್ಡ ಯಜಮಾನರು ರಾಜೇಶ್, ಯಜಮಾನರು ಸೋಮಣ್ಣ, ಶಂಬುಲಿಂಗ, ರಾಮಶೆಟ್ಟಿ, ಮಹೇಶ, ಗುಂಡು, ಸಿದ್ದರಾಜು, ಶಂಕರಣ ಮಲ್ಲಶೆಟ್ಟಿ, ಪರವಶೆಟ್ಟಿ, ಪ್ರಕಾಶ್, ಮುತ್ತುರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದಶೆಟ್ರು, ಸದಸ್ಯರು ಮಹದೇವಮ್ಮ, ಶಶಿಕಲಾ, ಭಗೀರಥ ಸಂಘದ ಅಧ್ಯಕ್ಷ ನಾಗರಾಜು ಉಪ್ಪಾರ್, ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ತಾಲ್ಲೂಕು ಭಗೀರಥ ಸಂಘದ ನಿರ್ದೇಶಕರು ನಾಗರಾಜು, ಮುಖಂಡರುಗಳು ಸಿದ್ದಪ್ಪಸ್ವಾಮಿ, ಪುಟ್ಟಸ್ವಾಮಿ, ಅಂಗಡಿ ಸಿದ್ದಶೆಟ್ರು, ಮಹದೆವ, ಜೆ.ಮಾದೇಶ್, ಜಗದೀಶ್ ಗ್ರಾಮಸ್ಥರು, ಕುಲಸ್ಥರು, ಭಗೀರಥ ಸಂಘದ ಪದಾಧಿಕಾರಿಗಳು ಇದ್ದರು.