ಭಗೀರಥರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ: ಡಾ.ಮೋಹನ ಭಸ್ಮೆ

| Published : May 16 2024, 12:54 AM IST

ಸಾರಾಂಶ

ಭಗೀರಥರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ರಾಜಋಷಿ ಭಗೀರಥರ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಡಾ.ಮೋಹನ ಭಸ್ಮೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಗೋಕಾಕ

ರಾಜಋಷಿ ಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು, ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್‌ ಡಾ.ಮೋಹನ ಭಸ್ಮೆ ಹೇಳಿದರು.

ನಗರದ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡ ರಾಜಋಷಿ ಭಗೀರಥರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಜಋಷಿ ಭಗೀರಥರು ತೋರಿದ ಸಮಾಜಪರ ಕಾಳಜಿ, ಕಳಕಳಿ ಅನುಸರಿಸಬೇಕು. ಸತ್ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೋಕಾಕ ತಾಲೂಕು ಭಗೀರಥ ಉಪ್ಪಾರ ಸಂಘದ ಉಪಾಧ್ಯಕ್ಷ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ಉಪ್ಪಾರ ಔದ್ಯೋಗಿಕ ಸಹಕಾರಿ ಸಂಘದ ಅಧ್ಯಕ್ಷ ಮಾಯಪ್ಪ ತಹಸೀಲ್ದಾರ್‌ ಮುಖಂಡರುಗಳಾದ ಯಲ್ಲಪ್ಪ ಹೆಜ್ಜೆಗಾರ, ಸದಾಶಿವ ಗುದಗೋಳ, ಅಡಿವೆಪ್ಪ ರಾ ಬಿಲಕುಂದಿ, ಯಲ್ಲಪ್ಪ ಸುಳ್ಳನವರ, ರೇವಪ್ಪ ದುರದುಂಡಿ, ನಾಗರಾಜ ತಹಸೀಲ್ದಾರ, ಹಣಪತಿ ರಂಕಣಕೊಪ್ಪ, ಯಲ್ಲಪ್ಪ ಗೋಸಬಾಳ, ವೈ.ಕೆ.ಕೌಜಲಗಿ, ನಂದಿ, ವಿಠ್ಠಲ ಮುರ್ಕಿಭಾಂವಿ ಸೇರಿದಂತೆ ಭಗೀರಥ ಉಪ್ಪಾರ ಸಮಾಜ ಬಾಂಧವರು ಇದ್ದರು.

------ಭೂಮಿಗೆ ಗಂಗೆಯನ್ನು ಕರೆತರುವಲ್ಲಿ ಕಠೋರ ತಪಸ್ಸು ಮಾಡಿದ ಭಗೀರಥರು ಸವಾಲು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನಲ್ಲಿ ಒಲಿಸಿಕೊಂಡು ಭೂಮಿಯ ನೀರಿನ ಕೊರತೆ ನೀಗಿಸಿದರು. ಭಗೀರಥರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

-ಡಾ.ಮೋಹನ ಭಸ್ಮೆ, ತಹಸೀಲ್ದಾರ್‌.

---------------------

ಜಾರಕಿಹೊಳಿ ಗೃಹ ಕಚೇರಿಯಲ್ಲಿ ಭಗೀರಥ ಜಯಂತಿ

ಶಾಸಕ ರಮೇಶ ಜಾರಕಿಹೊಳಿ ಗೃಹ ಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ರಾಜಋಷಿ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮ ಮಂಗಳವಾರ ರಾಜಋಷಿ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲಗಳಿಂದ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ, ಮುದ್ದೇಬಿಹಾಳ, ನಾಗಠಾಣಾ ವಿಧಾನ ಸಭಾ ಕ್ಷೇತ್ರಗಳಲ್ಲಿ ವಿಸ್ತಾರಕರಾಗಿ ಕಾರ್ಯನಿರ್ವಹಿಸಿದ ವಿರೇಂದ್ರ ಎಕ್ಕೇರಿಮಠ, ಮಾಣಿಕ ಹಿರೆಹಟ್ಟಿ, ಬಸವರಾಜ ಪಾಟೀಲ ಅವರನ್ನು ಸತ್ಕರಿಸಿ, ಗೌರವಿಸಲಾಯಿತು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ರಾಷ್ಟ್ರೀಯ ಓಬಿಸಿ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಮುಖಂಡರುಗಳಾದ ಸುರೇಶ ಸನದಿ, ಕಾಂತು ಎತ್ತಿನಮನಿ, ಕೆಂಪಣ್ಣ ಮೈಲನ್ನವರ, ಅಶೋಕ ಗೋಣಿ, ಜಯಾನಂದ ಹುಣಚ್ಯಾಳಿ, ಅನೀಲ ತುರಾಯಿದಾರ, ಶಿವಲಿಂಗಯ್ಯ ಹಿರೇಮಠ, ಮಂಜುನಾಥ ಪ್ರಭುನಟ್ಟಿ, ಬೀರಪ್ಪ ಮೈಲನ್ನವರ ಸೇರಿದಂತೆ ಅನೇಕರು ಇದ್ದರು.