ಧರೆಗೆ ಗಂಗೆ ತಂದ ಆಧ್ಯಾತ್ಮಿಕ ನಾಯಕ ಭಗೀರಥ

| Published : May 05 2025, 12:47 AM IST

ಸಾರಾಂಶ

ಪುರಾಣದಲ್ಲಿ ಬರುವಂತಹ ಮಹರ್ಷಿ ಭಗೀರಥ ಹಾಗೂ ಮಹರ್ಷಿ ವಾಲ್ಮೀಕಿ ಅವರು ನಮ್ಮ ನಾಡಿನ ಆಧ್ಯಾತ್ಮಿಕ ಶಕ್ತಿಗಳು ಎಂದು ಬಿಜೆಪಿ ರಾಷ್ಟೀಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಣಿ ಸದಸ್ಯ ನೂರೊಂದುಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪುರಾಣದಲ್ಲಿ ಬರುವಂತಹ ಮಹರ್ಷಿ ಭಗೀರಥ ಹಾಗೂ ಮಹರ್ಷಿ ವಾಲ್ಮೀಕಿ ಅವರು ನಮ್ಮ ನಾಡಿನ ಆಧ್ಯಾತ್ಮಿಕ ಶಕ್ತಿಗಳು ಎಂದು ಬಿಜೆಪಿ ರಾಷ್ಟೀಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಣಿ ಸದಸ್ಯ ನೂರೊಂದುಶೆಟ್ಟಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮಹರ್ಷಿ ಭಗೀರಥರು ತಮ್ಮ ತಪಸ್ಸಿ ಶಕ್ತಿಯಿಂದ ಗಂಗೆಯನ್ನು ಧರೆಗೆ ತರುವ ಮೂಲಕ ಮಹಾಪುರುಷರು ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದಾರೆ ಎಂದರು. ಹಿಂದು ಪರಂಪರೆಯಲ್ಲಿ ಮಹರ್ಷಿಗಳಾದ ಭಗೀರಥ ಹಾಗೂ ವಾಲ್ಮೀಕಿ ಮಹರ್ಷಿಗಳಿಗೆ ಅಗ್ರ ಸ್ಥಾನವನ್ನು ನೀಡಲಾಗಿದೆ. ಭಗೀರಥ ಮಹಾರಾಜ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುತ್ತಿದ್ದಾರೆ. ಇದು ಒಂದು ಯೋಗಾಸನವಾಗಿದೆ. ಇಂಥ ಯೋಗವನ್ನು ಈ ಹಿಂದೆಯೆ ಋಷಿಮುನಿಗಳು ಅಭ್ಯಾಸ ಮಾಡುತ್ತಿದ್ದರು ಎಂಬುವುದಕ್ಕೆ ಸ್ಪಷ್ಟವಾದ ನಿರ್ದಶನವಾಗಿದೆ. ಭಗೀರಥ ಮಹಾರಾಜು ವರ್ಷನುಗಟ್ಟಲೆ ಒಂದೇ ಕಾಲಿನಲ್ಲಿ ನಿಂತು ತಪಸ್ಸು ಮಾಡುವ ಮೂಲಕ ದಿವ್ಯಶಕ್ತಿಯನ್ನು ಪಡೆದುಕೊಂಡರು. ಇಂಥ ಮಹಾಪುರುಷ್ ಜಯಂತಿ ನಮ್ಮೆಲ್ಲರ ಜೀವನದ ಪ್ರೇರಣಾ ಶಕ್ತಿಯಾಗಿದೆ ಎಂದು ಬಣ್ಣಿಸಿದರು. ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಭಗೀರಥ ಮಹರ್ಷಿಗಳ ಜಯಂತಿಯನ್ನು ಆಚರಣೆ ಮಾಡುವ ಜೊತೆಗೆ ಅವರ ಕೊಡುಗೆಯನ್ನು ಸ್ಮರಣೆ ಮಾಡಿಕೊಳ್ಳೊಣ. ಅವರು ಗಂಗೆಯನ್ನು ಧರೆಗೆ ತರಲು ಪಟ್ಟ ಪ್ರಯತ್ನ ಹೆಚ್ಚಿನದಾಗಿದೆ. ಇಂಥ ಮಹಾ ಪುರುಷರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಜಗತ್ತಿಗೆ ಹಾಗೂ ಮುಂದಿನ ಪೀಳಿಗೆಗೆ ಅವರ ತತ್ವ,ಆ ದರ್ಶಗಳನ್ನು ತಿಳಿಸೋಣ ಎಂದರು. ನಗರಸಭೆ ಅಧ್ಯಕ್ಷ ಸುರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಚುಡಾ ಮಾಜಿಅಧ್ಯಕ್ಷರಾದ ಕುಲಗಾಣಶಾಂತಮೂರ್ತಿ, ಎಸ್. ಬಾಲಸುಬ್ರಮಣ್ಯ, ಜಿಲ್ಲಾ ಮಾಧ್ಯಮ ವಕ್ತಾರ ಕಾಡಹಳ್ಳಿ ಕುಮಾರ್, ಕೂಸಣ್ಣ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಆನಂದ ಭಗೀರಥ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ನಗರ ಘಟಿಕದ ಅಧ್ಯಕ್ಷೆ ಯಶೋಧಾ, ನಗರ ಘಟಕದ ಅಧ್ಯಕ್ಷ ಶಿವರಾಜ್, ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಶಿವು ವಿರಾಟ್, ಕೇಬಲ್ ಪಿ. ರಂಗಸ್ವಾಮಿ, ಶಿವಣ್ಣ, ಕೋಡಿಮೋಳೆ ಶಿವಶಂಕರ್,ಮಂಜು ಹುಲ್ಲೇಪುರ, ಕೂಸಣ್ಣ, ಬಂಗಾರನಾಯಕ, ಶಿವರಾಮಸುಮುದ್ರ ಮೊದಲಾದವರು ಇದ್ದರು.