ಗಂಗೆಯನ್ನೇ ಭುವಿಗೆ ಹರಿಸಿದ ಭಗೀರಥ ಮಹರ್ಷಿ: ಜಿಲ್ಲಾಧಿಕಾರಿ

| Published : May 15 2024, 01:30 AM IST

ಗಂಗೆಯನ್ನೇ ಭುವಿಗೆ ಹರಿಸಿದ ಭಗೀರಥ ಮಹರ್ಷಿ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಗೀರಥ ಮಹರ್ಷಿ ಘೋರ ತಪಸ್ಸಿನ ಮೂಲಕ ಕಠಿಣ ಕಾರ್ಯ ಪೂರೈಸಿ, ಪವಿತ್ರ ಗಂಗೆಯನ್ನು ಭೂಮಿಗೆ ತಂದ ಚೈತನ್ಯದ ಚಿಲುಮೆ ಹಾಗೂ ಛಲಗಾರ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದ್ದಾರೆ.

- ಡಿಸಿ ಕಚೇರಿಯಲ್ಲಿ ಭಗೀರಥ ಜಯಂತಿ । ಡಿಸಿ ಡಾ. ಎಂ.ವಿ. ವೆಂಕಟೇಶ್‌ ಪುಷ್ಪನಮನ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಭಗೀರಥ ಮಹರ್ಷಿ ಘೋರ ತಪಸ್ಸಿನ ಮೂಲಕ ಕಠಿಣ ಕಾರ್ಯ ಪೂರೈಸಿ, ಪವಿತ್ರ ಗಂಗೆಯನ್ನು ಭೂಮಿಗೆ ತಂದ ಚೈತನ್ಯದ ಚಿಲುಮೆ ಹಾಗೂ ಛಲಗಾರ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉಪ್ಪಾರ ಸಮಾಜ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿಯಲ್ಲಿ ಭಾಗವಹಿಸಿ, ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಭಗೀರಥನ ಸಾಹಸಗಾಥೆಯು ನಿರ್ಣಯ, ಭಕ್ತಿ ಹಾಗೂ ಅಸಾಧ್ಯವನ್ನು ಕಠಿಣ ಪ್ರಯತ್ನದ ಮೂಲಕ ಸಾಧ್ಯ ಮಾಡುವುದನ್ನು ತೋರಿಸಿದ್ದಾಗಿದೆ. ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಹಿರಿಯರಿಗೆ ಜಲತರ್ಪಣ ಮಾಡಿದ ಭಗೀರಥನ ಸಾಧನೆ ಅಸಾಮಾನ್ಯ. ಇದು ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದು ಎಂಬುದಕ್ಕೆ ಮುನ್ನುಡಿಯಾಗಿದೆ ಎಂದ ಅವರು, ಭಗೀರಥ ಮಹಿರ್ಷಿಗಳ ಅರಿತು, ಅವರ ಮಾರ್ಗದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಎಂ.ಸಿ. ರಮೇಶ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕೆ.ಬಿ. ಗಿರೀಶ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಮಾರುತಿ ಎಚ್.ಡಿ., ರಾಜ್ಯ ಭಗೀರಥ ನೌಕರರ ಸಂಘದ ಅಧ್ಯಕ್ಷೆ ಎನ್.ಎಸ್. ಚಂದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ಎ.ವೈ. ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳ ನಾಯ್ಕ್ ಹಾಗೂ ಎಲ್ಲಾ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

- - - -14ಕೆಡಿವಿಜಿ40ಃ:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.