ಭಗವತಿ ಫುಟ್ಬಾಲ್ ಕಪ್: ಕ್ಯಾಪ್ಟನ್ಸ್ 11 ಪಾಲಿಬೆಟ್ಟ ಚಾಂಪಿಯನ್ಸ್

| Published : Jan 01 2024, 01:15 AM IST

ಭಗವತಿ ಫುಟ್ಬಾಲ್ ಕಪ್: ಕ್ಯಾಪ್ಟನ್ಸ್ 11 ಪಾಲಿಬೆಟ್ಟ ಚಾಂಪಿಯನ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಮಟ್ಟದ ಮುಕ್ತ 7 2 ಜನರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ದ್ವಿತೀಯ ಸ್ಥಾನವನ್ನು ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾಫುಟ್ಬಾಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ‌ ಕಾಲ ನಡೆದ ಜಿಲ್ಲಾಮಟ್ಟದ ಮುಕ್ತ 7+2 ಜನರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ದ್ವಿತೀಯ ಸ್ಥಾನವನ್ನು ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡ ಪಡೆದುಕೊಂಡಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಹಂತಿಮ ಹಣಾಹಣಿಯಲ್ಲಿ ಕ್ಯಾಪ್ಟನ್ಸ್ ‌11 ಪಾಲಿಬೆಟ್ಟ ಹಾಗೂ ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡವು ನಿಗದಿತ ಸಮಯದಲ್ಲಿ 2-2 ಗೋಲುಗಳಿಸಿ ಸಮಬಲ ಸಾಧಿಸಿದವು.

ಪೆನಾಲ್ಟಿ ಶೂಟೌಟ್‌ನಲ್ಲಿ ಕ್ಯಾಪ್ಟನ್ಸ್ ‌11 ತಂಡದ ಗೋಲ್ ಕೀಪರ್ ಮಣಿ ಅವರು ಎರಡು ಪೆನಾಲ್ಟಿ ಹೊಡೆತವನ್ನು ತಡೆಯುವುದರ ಮೂಲಕ ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡವು 5-3 ಗೋಲುಗಳ ಅಂತರದಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿ ಭಗವತಿ ಕಪ್ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿತು.

ರನ್ನರ್ಸ್ ಪ್ರಶಸ್ತಿಗೆ ಚಾಮುಂಡಿ ಯುನೈಟೆಡ್ ತಂಡ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವು ವೈಷ್ಣವಿ ಯುವಕ ಸಂಘ ಮರಗೋಡು ಹಾಗೂ ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡಗಳ ನಡುವೆ ನಡೆಯಿತು.ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡವು 4-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ ಪಂದ್ಯವು ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ಹಾಗೂ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಚಾಮುಂಡಿ ಯುನೈಟೆಡ್ ತಂಡವು 3-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.

ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಣಿಗೊಂಡ 16 ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅತ್ಯುತ್ತಮ ತಂಡದ ಪ್ರಶಸ್ತಿಯನ್ನು ಗಾಂಧಿ ಯುವಕ ಸಂಘ ಕಂಡಕರೆ ಪಡೆದುಕೊಂಡಿತು.

ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಗೆ ಕ್ಯಾಪ್ಟನ್ಸ್ 11 ತಂಡದ ಮುನ್ನಡೆ ಆಟಗಾರ ಜುನೈದ್ ಭಾಜನರಾದರು.

ಅತ್ಯುತ್ತಮ ಆಟಗಾರ ಪ್ರಶಸ್ತಿ ಚಾಮುಂಡಿ ಯುನೈಟೆಡ್ ತಂಡದ ಪಾಂಡಿಯನ್ ಹಾಗೂ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಅಯ್ಯಪ್ಪ ಫ್ರೆಂಡ್ಸ್ ತಂಡ ರಾಖಿ ಪಡೆದುಕೊಂಡರು.

ಲಯನ್ಸ್ ವಿದ್ಯಾಸಂಸ್ಥೆಗೆ ಗೆಲವು:ಭಗವತಿ ಕಪ್ ಫುಟ್ಬಾಲ್ ‌ಪಂದ್ಯಾವಳಿಯು ಫೈನಲ್ ಪಂದ್ಯದ ಮೊದಲು ಲಯನ್ಸ್ ವಿದ್ಯಾಸಂಸ್ಥೆ ಗೋಣಿಕೊಪ್ಪ ಹಾಗೂ ‌ಮರಗೋಡು ಎಫ್.ಸಿ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.4-0 ಗೋಲುಗಳ ‌ಅಂತರದಿಂದ ಲಯನ್ಸ್ ವಿದ್ಯಾಸಂಸ್ಥೆ ಗೆಲುವು ಪಡೆಯಿತು.

ಕಳೆದ ನಾಲ್ಕು ದಿನಗಳ ನಡೆದ ಭಗವತಿ ಫುಟ್ಬಾಲ್ ಕಪ್ ‌ನಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ಇಮ್ರಾನ್ ಖಾನ್ ಹುಬ್ಬಳ್ಳಿ, ದರ್ಶನ್ ಸುಕುಮಾರ್ ಮರಗೋಡು ಹಾಗೂ ಗೇಬ್ರಿಯಲ್ ಬೆಳಗಾವಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ದಶಕಗಳ ಬಳಿಕ‌ ಕೊಡಗಿನಲ್ಲಿ ನೋಂದಾಯಿತ ಕೊಡಗಿನ ತಂಡಗಳ ನಡುವೆ ಕಾಲ್ಚೆಂಡು:ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ‌ನಲ್ಲಿ ನೋಂದಣಿಗೊಂಡಿರುವ ತಂಡಗಳ ನಡುವೆ ದಶಕಗಳ ಬಳಿಕ‌‌ ನಾಕೌಟ್ ಮಾದರಿಯಲ್ಲಿ, ಕೊಡಗಿನಲ್ಲಿ ಕಾಲ್ಚೆಂಡು ಪಂದ್ಯಾವಳಿ ಆಯೋಜಿಸುವುದರ ಮೂಲಕ ಭಗವತಿ ಯೂತ್ ಕ್ಲಬ್ ಹಾಲುಗುಂದ ಯುವಕ ಸಂಘ, ಹಾಲುಗುಂದ ಗ್ರಾಮಸ್ಥರು ಹಾಗೂ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ಗಮನ ಸೆಳೆದರು. ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಣಿಗೊಂಡ ತಂಡಗಳ ನಡುವೆ ದಶಕಗಳ ಬಳಿಕ ನೋಕೌಟ್ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಭಗವತಿ ಯುವಕ ಸಂಘ ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳ ಮನ ಗೆದ್ದಿದ್ದಾರೆ.