ಧ್ವಂತಂ ಚಿತ್ರದ ಪೋಸ್ಟರ್ ಬಿಡುಗಡೆ

| Published : Jul 05 2024, 12:57 AM IST

ಸಾರಾಂಶ

ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಸುಲಭ ಮಾರ್ಗ ಸಿನಿಮಾ‌. ಕನ್ನಡ ಚಿತ್ರರಂಗದಲ್ಲಿ ನಮ್ಮ ಮೈಸೂರಿನ ಯುವಕರು ಹೆಚ್ಚು ಯಶಸ್ಸನ್ನು ಕಾಣಬೇಕೆಂಬುದು ನಮ್ಮಲ್ಲರ ಆಸೆ.

ಕನ್ನಡಪ್ರಭ ವಾರ್ತೆ ಮೈಸೂರು

ಶ್ರೀ ಭಗವತಿ ಪ್ರೊಡಕ್ಷನ್ಸ್ ಮೈಸೂರಿನ ಸ್ಥಳೀಯ ಕಲಾವಿದರು, ತಂತ್ರಜ್ಞರನ್ನು ಒಟ್ಟುಗೂಡಿಸಿ ಮಾಡಿರುವ ಧ್ವಂತಂ ಚಿತ್ರದ ಪೋಸ್ಟರ್ ಅನ್ನು ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬಿಡುಗಡೆಗೊಳಿಸಿದರು.

ನಂತರ ಎಚ್.ವಿ. ರಾಜೀವ್ ಮಾತನಾಡಿ, ಇವತ್ತಿನ ಯುವ ಪೀಳಿಗೆಗೆ ಸಿನಿಮಾ ಮೇಲಿರುವ ಪ್ರೀತಿ ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ. ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಸುಲಭ ಮಾರ್ಗ ಸಿನಿಮಾ‌. ಕನ್ನಡ ಚಿತ್ರರಂಗದಲ್ಲಿ ನಮ್ಮ ಮೈಸೂರಿನ ಯುವಕರು ಹೆಚ್ಚು ಯಶಸ್ಸನ್ನು ಕಾಣಬೇಕೆಂಬುದು ನಮ್ಮಲ್ಲರ ಆಸೆ. ಧ್ವಂತಂ ಚಿತ್ರಕ್ಕೆ ಯಶಸ್ಸಾಗಲಿ ಎಂದು ಆಶಿಸಿದರು.

ಧ್ವಂತಂ ಚಿತ್ರದ ಪ್ರೀಮಿಯರ್ ಶೋ ಜು.7ರ ಬೆಳಗ್ಗೆ 9.30ಕ್ಕೆ ಡಿ.ಆರ್‌.ಸಿ ಸಿನಿಮಾಸ್ ನಲ್ಲಿ ಆಯೋಜಿಸಲಾಗಿದೆ. ಆಹಾರ ನಿಗಮದ ಮಾಜಿ ಸದಸ್ಯ ಜಯಂತ್, ಸ್ಪಂದನ ಟ್ರಸ್ಟಿನ ಅಧ್ಯಕ್ಷ ಅಭಿನಂದನ್ ಅರಸ್, ಚಿತ್ರದ ನಿರ್ದೇಶಕ ನವೀನ್ ಕುಮಾರ್ ಅಮರೇಶ್, ಸಂಗೀತ ನಿರ್ದೇಶಕ ಪ್ರಿನ್ಸ್ ಜೋಸೆಫ್, ನಾಯಕ ನಟ ರಕ್ಷಿತ್ ರಾಜ್, ನಟರಾದ ಹೇಮಂತ್ ಆಚಾರ್, ಯಶ್ವಂತ್ ಶರ್ಮಾ ಮೊದಲಾದವರು ಇದ್ದರು.