ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪುತ್ಥಳಿಗೆ ಗುರುವಂದನೆ

| Published : Jul 23 2024, 12:35 AM IST

ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪುತ್ಥಳಿಗೆ ಗುರುವಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರು ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಗುರುವಿನ ಮಾರ್ಗದರ್ಶನವಿಲ್ಲದೆ ನಾವು ಮುನ್ನಡೆಯಲು ಸಾಧ್ಯವಿಲ್ಲ. ಇದನ್ನು ಅರಿತಿದ್ದರಿಂದಲೇ ನಮ್ಮ ಹಿರಿಯರು ಗುರುವಿನ ಗುಲಾಮನಾಗದ ಹೊರತು ದೊರಯದಯ್ಯ ಮುಕ್ತಿ ಎಂದು ಹೇಳಿದ್ದಾರೆ. ಗುರು ಕೇವಲ ಅಕ್ಷರದಾಯಕನಲ್ಲ. ಅವನು ಮೋಕ್ಷದಾಯಕ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗುರು ಪೂರ್ಣಿಮೆಯ ಅಂಗವಾಗಿ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಭೈರವೈಕ್ಯ ಡಾ.ಬಾಲಗಂಗಧರನಾಥ ಮಹಾಸ್ವಾಮೀಜಿ ಪುತ್ಥಳಿಗೆ ಪಟ್ಟಣದ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಶಾಲಾ ಮಕ್ಕಳು ಮತ್ತು ಉಪನ್ಯಾಸಕ ವೃಂದ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗುರುವಂದನೆ ಸಲ್ಲಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಧಾರ್ಮಿಕ ಕ್ಷೇತ್ರದ ಜೊತೆಗೆ ನಾಡಿನ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಚುಂಚ ಶ್ರೀಗಳು ನೀಡಿದ ಕೊಡುಗೆ ಸ್ಮರಿಸಿದರು.

ಗುರು ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಗುರುವಿನ ಮಾರ್ಗದರ್ಶನವಿಲ್ಲದೆ ನಾವು ಮುನ್ನಡೆಯಲು ಸಾಧ್ಯವಿಲ್ಲ. ಇದನ್ನು ಅರಿತಿದ್ದರಿಂದಲೇ ನಮ್ಮ ಹಿರಿಯರು ಗುರುವಿನ ಗುಲಾಮನಾಗದ ಹೊರತು ದೊರಯದಯ್ಯ ಮುಕ್ತಿ ಎಂದು ಹೇಳಿದ್ದಾರೆ. ಗುರು ಕೇವಲ ಅಕ್ಷರದಾಯಕನಲ್ಲ. ಅವನು ಮೋಕ್ಷದಾಯಕ ಎಂದರು.

ನಾಡಿನ ಭೂಪಟದಲ್ಲಿ ಒಂದು ಸಾಮಾನ್ಯ ಮಠವಾಗಿದ್ದ ಆದಿ ಚುಂಚನಗಿರಿ ಪೀಠವನ್ನು ದೇಶ ವಿದೇಶಗಳಿಗೆ ವಿಸ್ತರಿಸಿದ ಕೀರ್ತಿ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದರು.

ಈ ವೇಳೆ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಹಿರಿಯ ವಕೀಲ ಎಸ್.ವಿ.ವಿಜಯಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಬಿಜಿಎಸ್ ಪ್ರಾಂಶುಪಾಲ ಪ್ರಸಾದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗುರುಪೂರ್ಣಿಮೆ ಗುರುಗಳಿಗೆ ಅಭಿನಂದನೆ

ಭಾರತೀನಗರ:ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಅಂಗವಾಗಿ ಅರ್ಚಕರಾದ ಗೋಪಾಲಕೃಷ್ಣಭಟ್ಟರ್ ಹಾಗೂ ಅನಂತಕೃಷ್ಣಭಟ್ಟರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ದೇವಾಲಯದ ಆವರಣದಲ್ಲಿ ಸತ್ಯನಾರಾಯಣ ಪೂಜೆ ನಡೆದು ಭಕ್ತಾದಿಗಳು ಭಾಗವಹಿಸಿದ್ದರು. ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಶ್ರೀವೆಂಕಟೇಶ್ವರಸ್ವಾಮಿ ಮೂರ್ತಿಗೆ ಹೂ ಮತ್ತು ಆಭರಣಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.ಈ ವೇಳೆ ಶ್ರೀವೆಂಕಟೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಪೂಜೂರಿ ವೆಂಕಟೇಗೌಡ, ಕಾರ್ಯಾಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ದೇವರಹಳ್ಳಿ ವೆಂಕಟೇಶ್, ಅಣ್ಣೂರು ಸತೀಶ್, ಸೀಮೆಂಟ್ ಅಂಗಡಿ ವೆಂಕಟೇಶ್ ಸೇರಿದಂತೆ ಹಲವರಿದ್ದರು.