ಸಾರಾಂಶ
ದಾಬಸ್‍ಪೇಟೆ: 2021ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಕನ್ನಡಪ್ರಭ ದಿನಪತ್ರಿಕೆ ವಿತರಕ ಹುಲುಕುಂಟೆ ಮಹೇಶ್ ಅವರ ಮಗಳು ಹಾಗೂ ಬೈರವಿ ಚಿತ್ರದ ಬಾಲನಟಿ ಬೈರವಿ ಆಯ್ಕೆಯಾಗಿದ್ದಾರೆ.
ದಾಬಸ್‍ಪೇಟೆ: 2021ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಕನ್ನಡಪ್ರಭ ದಿನಪತ್ರಿಕೆ ವಿತರಕ ಹುಲುಕುಂಟೆ ಮಹೇಶ್ ಅವರ ಮಗಳು ಹಾಗೂ ಬೈರವಿ ಚಿತ್ರದ ಬಾಲನಟಿ ಬೈರವಿ ಆಯ್ಕೆಯಾಗಿದ್ದಾರೆ.
ಬಾಲನಟಿ ಬೈರವಿ ಶವಸಂಸ್ಕಾರ, ಶ್ರಾವಣಿ ದಿ ಗ್ರೇಟ್, ದಿ ವೈ, ರಾಜಮಾರ್ಗ ಸೇರಿದಂತೆ 20ಕ್ಕೂ ಹೆಚ್ಚು ಚಲನಚಿತ್ರಗಳು, ಉಧೋ ಉಧೋ ಶ್ರೀರೇಣುಕಾಯಲ್ಲಮ್ಮ, ನೂರು ಜನ್ಮಕ್ಕೂ, ಗಿಣಿರಾಮ, ಯಾರಿವಳು, ಶಾಂತಂ ಪಾಪಂ ಧಾರವಾಹಿಗಳಲ್ಲಿ ನಟಿಸಿದ್ದು, ಉಧೋ ಉಧೋ ಶ್ರೀರೇಣುಕಾಯಲ್ಲಮ್ಮ ಧಾರವಾಹಿಯ ಯಲ್ಲಮ್ಮ ಪಾತ್ರಧಾರಿಯಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದಾರೆ. ಮೂರು ರಿಯಾಲಿಟಿ ಶೋಗಳು ಸೇರಿದಂತೆ ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ಸೀಸನ್-4ರಲ್ಲಿ ಭಾಗವಹಿಸಿದ್ದಾರೆ. ಈಕೆ ನಟಿಸಿರುವ ಅದೇ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿಯೂ ಲಭಿಸಿದೆ.ಪ್ರಸುತ್ತ ಬೈರವಿ ಅವರು ಬರದಿ-ಮಂಡಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದು, ಪ್ರಶಸ್ತಿಯಲ್ಲಿ ಬಂದ 20 ಸಾವಿರ ಹಣವನ್ನು ಶಾಲಾ ಅಭಿವೃದ್ಧಿಗೆ ದೇಣಿಗೆ ನೀಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಬಾಲನಟಿ ಪ್ರಶಸ್ತಿಗೆ ಆಯ್ಕೆಯಾದ ಬೈರವಿ ಅವರಿಗೆ ತಂದೆ ಹುಲುಕುಂಟೆ ಮಹೇಶ್, ತಾಯಿ ರಾಧಾಮಣಿ ಸೇರಿದಂತೆ ಕುಟುಂಬಸ್ಥರು, ಶಾಲಾ ಶಿಕ್ಷಕರು ಅಭಿನಂದಿಸಿ ಶುಭಕೋರಿದ್ದಾರೆ.ಪೋಟೋ 7 : ಬಾಲನಟಿ ಪ್ರಶಸ್ತಿಗೆ ಆಯ್ಕೆಯಾದ ಬೈರವಿ