ಸಂಕ್ರಾಂತಿ ದಿನ ಹೊಳೆನರಸೀಪುರದಲ್ಲಿ ಸಂಪನ್ನಗೊಂಡ ಭಜನಾ ಮಹೋತ್ಸವ

| Published : Jan 16 2024, 01:46 AM IST

ಸಂಕ್ರಾಂತಿ ದಿನ ಹೊಳೆನರಸೀಪುರದಲ್ಲಿ ಸಂಪನ್ನಗೊಂಡ ಭಜನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲೆಯ ಹೊಳೆನರಸೀಪುರದ ದೇವಾಂಗ ಶ್ರೀ ರಾಮಮಂದಿರದಲ್ಲಿ ೮೫ನೇ ವರ್ಷದ ಧನುರ್ಮಾಸ ತಿಂಗಳ ಭಜನಾ ಮಹೋತ್ಸವವು ಡಿ. ೧೭ ರಂದು ಪ್ರಾರಂಭಗೊಂಡಿದ್ದು, ಸಂಪ್ರದಾಯದ ಆಚರಣೆಯಲ್ಲಿ ಶ್ರೀ ರಾಮನ ಭಕ್ತರು ತೊಡಗಿಸಿಕೊಂಡು ಸಂಸ್ಕೃತಿಯ ಪಾಲನೆ ಮಾಡುವ ಜತೆಗೆ ಭಜನಾ ಮಹೋತ್ಸವಕ್ಕೆ ವಿಶೇಷ ಮೆರಗನ್ನು ನೀಡುತ್ತ ಸಾಗಿದ ಆಚರಣೆಯೂ ಸಂಕ್ರಾಂತಿ ಹಬ್ಬದ ದಿನದಂದು ಸಂಪನ್ನವಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ದೇವಾಂಗ ಶ್ರೀ ರಾಮಮಂದಿರದಲ್ಲಿ ೮೫ನೇ ವರ್ಷದ ಧನುರ್ಮಾಸ ತಿಂಗಳ ಭಜನಾ ಮಹೋತ್ಸವವು ಡಿ. ೧೭ ರಂದು ಪ್ರಾರಂಭಗೊಂಡಿದ್ದು, ಸಂಪ್ರದಾಯದ ಆಚರಣೆಯಲ್ಲಿ ಶ್ರೀ ರಾಮನ ಭಕ್ತರು ತೊಡಗಿಸಿಕೊಂಡು ಸಂಸ್ಕೃತಿಯ ಪಾಲನೆ ಮಾಡುವ ಜತೆಗೆ ಭಜನಾ ಮಹೋತ್ಸವಕ್ಕೆ ವಿಶೇಷ ಮೆರಗನ್ನು ನೀಡುತ್ತ ಸಾಗಿದ ಆಚರಣೆಯೂ ಸಂಕ್ರಾಂತಿ ಹಬ್ಬದ ದಿನದಂದು ಸಂಪನ್ನವಾಯಿತು.

ಧರ್ನುಮಾಸ ಭಜನಾ ಉತ್ಸವವನ್ನು ೧೯೩೮ ರಲ್ಲಿ ದಿ. ಟಿ.ನಂಜಪ್ಪ ಹಾಗೂ ಇತರರು ಪ್ರಾರಂಭಿಸಿದ್ದರು. ಅಂದಿನಿಂದ ನಿರಂತರವಾಗಿ ಜರಗುತ್ತಿರುವ ಭಜನೆ ಉತ್ಸವವನ್ನು ಕಳೆದ ೩೮ ವರ್ಷಗಳಿಂದ ಹಿರಿಯರಾದ ಎಚ್.ಎನ್.ವೆಂಕಟರಮಣಯ್ಯ, ಎ.ಜಗನ್ನಾಥ್, ನೀಲಕಂಠಪ್ಪ, ಈಶ್ವರ, ಕುಮಾರ್ ಹಾಗೂ ಇತರರ ಮಾರ್ಗದರ್ಶನದಲ್ಲಿ ಜರಗುತ್ತಿದೆ.

ಪ್ರತಿನಿತ್ಯ ಮುಂಜಾನೆ ೫ ಗಂಟೆಗೆ ಪ್ರಾರಂಭಗೊಳ್ಳುವ ಭಜನಾ ಉತ್ಸವವು ಪೇಟೆ ಮುಖ್ಯ ರಸ್ತೆಯ ಮೂಲಕ ಸುಭಾಷ್ ವೃತ್ತ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ಬಸವನಗುಡಿ ದೇವಾಲಯ, ಶ್ರೀ ಬನಶಂಕರಿ ದೇವಾಲಯದಲ್ಲಿ ಭಜನೆ, ಮಂಗಳಾರತಿ ಸ್ವೀಕರಿಸಿ, ಶ್ರೀ ರಾಮಮಂದಿರಲ್ಲಿ ಮಹಾಮಂಗಳಾರತಿ ನಂತರ ಭಜನಾ ಉತ್ಸವ ಸಂಪನ್ನಗೊಳ್ಳುತ್ತದೆ.

ಭಜನಾ ಉತ್ಸವದಲ್ಲಿ ಎಚ್.ವಿ.ಸುರೇಶ್ ಕುಮಾರ್, ಕಾಳಾಚಾರ್, ಎಚ್.ಎಲ್.ರಾಘವೇಂದ್ರ, ಅರುಣ್, ಮಂಜುನಾಥ್ ಡಿ., ಬಾಬು, ಎಚ್.ಆರ್.ರವಿ, ಮಂಜುನಾಥ್ ಎಚ್.ಎಲ್., ಗಣೇಶ, ಗೋಕುಲ, ಚಂದ್ರ ಎನ್.ಜೆ., ಯೋಗೇಶ್, ರಾಜೀವ್, ರಾಜಣ್ಣ, ಆರ್ಮಿ ವಸಂತ, ಕಿರಣ್, ಮೋಹನ, ನಾರಾಯಣ, ರವಿ, ನಾಗೇಂದ್ರ, ಶಂಕರ, ಪ್ರಸನ್ನ, ಮಂಜು, ವಸಂತ, ಶ್ರೀನಿವಾಸ, ಪೂಜಿತ್, ದೃತಿ, ಪುಣ್ಯ, ಸ್ವಾತಿ, ಆರಾಧ್ಯ, ಸುಧಾ, ಹಿತೇಶ್, ಜೀವನ್ ಭಾಗವಹಿಸಿದ್ದರು.ಹೊಳೆನರಸೀಪುರ ಪಟ್ಟಣದ ದೇವಾಂಗ ಶ್ರೀ ರಾಮಮಂದಿರದ ಭಜನಾ ಮಂಡಳಿ ಸದಸ್ಯರು ಧನುರ್ಮಾಸದ ಪ್ರಯುಕ್ತ ಗರುಡಗಂಭದಲ್ಲಿ ಜ್ಯೋತಿ ಬೆಳಗಿಸುತ್ತ, ಶ್ರೀ ರಾಮನ ಭಜನೆ ಮಾಡುತ್ತ, ಸಂಪ್ರದಾಯದ ಆಚರಣೆಯನ್ನು ಪಾಲನೆ ಮಾಡುತ್ತಿದ್ದಾರೆ. ಎಚ್.ವಿ.ಸುರೇಶ್ ಕುಮಾರ್, ಎಚ್.ಎಲ್.ರಾಘವೇಂದ್ರ, ಅರುಣ್, ಮಂಜುನಾಥ್ ಡಿ., ಬಾಬು, ಎಚ್.ಆರ್.ರವಿ, ಮಂಜುನಾಥ್ ಎಚ್.ಎಲ್. ಇದ್ದರು.