ಭಜನಾ ಮಂದಿರ ಭಕ್ತರನ್ನು ಒಗ್ಗೂಡಿಸುವ ಕೇಂದ್ರ: ಸುಬ್ರಹ್ಮಣ್ಯ ಶ್ರೀ

| Published : Apr 16 2024, 01:01 AM IST

ಭಜನಾ ಮಂದಿರ ಭಕ್ತರನ್ನು ಒಗ್ಗೂಡಿಸುವ ಕೇಂದ್ರ: ಸುಬ್ರಹ್ಮಣ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡೂರಿಯ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಗುಡಿಯಲ್ಲಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆ ನಡೆಯಿತು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರದ್ಧೆ ಗಟ್ಟಿಯಾಗಿರಬೇಕಾದರೆ ಶ್ರದ್ಧಾಕೇಂದ್ರಗಳು ಗಟ್ಟಿಯಾಗಿರಬೇಕು ಎಂಬುದು ನಮ್ಮ ನಂಬಿಕೆ. ಭಜನಾ ಮಂದಿರಗಳು ನಮ್ಮ ಭಕ್ತಿಯನ್ನು ಒಗ್ಗೂಡಿಸುವ ಕೇಂದ್ರಗಳಾಗಿದ್ದು, ಇಲ್ಲಿ ನಿರಂತರ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಾಗ ಇಂತಹ ಅಪೂರ್ವ ಗುಡಿಯ ನಿರ್ಮಾಣಕ್ಕೆ ಸಾರ್ಥಕತೆ ಬರುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.ಗುಂಡೂರಿಯ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಗುಡಿಯಲ್ಲಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಆಸ್ರಣ್ಣರು ದೀಪ ಪ್ರಜ್ವಲನೆ ನೆರವೇರಿಸಿದರು. ಶ್ರೀ ಕ್ಷೇತ್ರ ಮುದ್ದಾಡಿಯ ಆಡಳಿತ ಮೊಕ್ತೇಸರ ಎಂ.ವಿಜಯರಾಜ ಅಧಿಕಾರಿ ಮಾರಗುತ್ತು ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಎಂಸಿಎಫ್ ನಿವೃತ್ತ ಅಧಿಕಾರಿ ಜಯರಾಮ್ ಕಾರಂದೂರು, ಲಕ್ಷ್ಮೀನಾರಾಯಣ ಭಟ್, ವೇಣೂರು ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ ಖಂಡಿಗ, ಪಿ.ಎನ್. ಪುರುಷೋತ್ತಮ ರಾವ್, ಲಕ್ಷ್ಮೀ ಪದ್ಮಪೂಜಾರಿ ಪೊಕ್ಕಿ, ಉದ್ಯಮಿ ಪ್ರಕಾಶ್ ನಾರಾವಿ, ಮಂಡಳಿಯ ಗೌರವ ಸಲಹೆಗಾರರಾದ ಪೊಕ್ಕಿ ಲಕ್ಷ್ಮೀನಾರಾಯಣ ಆಚಾರ್ಯ, ರಾಜೇಂದ್ರ ಆಚಾರ್ಯ ಮುದ್ದಾಡಿ, ಭಜನಾ ಮಂಡಳಿ ಗೌರವಾಧ್ಯಕ್ಷ ಶಾಂತಿರಾಜ ಜೈನ್, ಕಾರ್ಯದರ್ಶಿ ಸತೀಶ್ ಕುಲಾಲ್, ಕೋಶಾಧಿಕಾರಿ ರಾಜು ಪೂಜಾರಿ, ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ ಕುಂಞಡಿ, ಸೇವಾಪ್ರತಿನಿಧಿ ಹರೀಶ್ ಬಾಡಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ವೇಣೂರಿನ ಪ್ರಸಿದ್ಧ ವೈದ್ಯ ಡಾ.ಶಾಂತಿಪ್ರಸಾದ್, ಉದ್ಯಮಿ ಕೆ. ಭಾಸ್ಕರ ಪೈ, ಜಿ.ಪಂ. ಮಾಜಿ ಸದಸ್ಯ ಪಿ. ಧರಣೇಂದ್ರ ಕುಮಾರ್, ಪೆರಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಕೆ. ವಿಜಯ ಗೌಡ ಆಗಮಿಸಿದ್ದರು.ಭಜನಾ ಮಂಡಳಿ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ವಲಯ ಮೇಲ್ವಿಚಾರಕಿ ವೀಣಾ ವಂದಿಸಿದರು. ಗುಣಪ್ರಸಾದ್ ಕಾರಂದೂರು ಪ್ರಾಸ್ತಾವಿಸಿದರು.* ಸನ್ಮಾನ

ಯಕ್ಷಗಾನ ಕಲಾವಿದರಾದ ಹರೀಶ್ ಕುಲಾಲ್, ನಾರಾಯಣ ಕುಲಾಲ್, ಪೊಕ್ಕಿ ಲಕ್ಷ್ಮೀನಾರಾಯಣ ಆಚಾರ್ಯ, ಶಾಂತಿರಾಜ ಜೈನ್ ಕೊಡಂಗೆ, ಬಾಬು ಮಡಿವಾಳ ನೆಲ್ಯರಡ್ಡ, ಮಂಜಪ್ಪ ದೇವಾಡಿಗ ಗೋಳಿದಡ್ಕ ಅವರನ್ನು ಸನ್ಮಾನಿಸಲಾಯಿತು. ದಾನಿಗಳನ್ನು ಹಾಗೂ ಸಹಕಾರ ನೀಡಿದವರನ್ನು ಗೌರವಿಸಲಾಯಿತು.