ಭಜನಾ ಸಂಧ್ಯಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ

| Published : Dec 27 2024, 12:46 AM IST

ಭಜನಾ ಸಂಧ್ಯಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ್ಕಿಯ ಗೇರುಕಟ್ಟೆಯ ಮುಂಡಾಲ ಸಮಾಜದ ಸಭಾಭವನದಲ್ಲಿ ಮುಂಡಾಲ ಕಲ್ಯಾಣ ಸಂಸ್ಥೆ ವತಿಯಿಂದ ಸಮಾಜ ಬಾಂಧವರಿಗೆ ಎರಡನೇ ವರ್ಷದ ಭಜನಾ ಸಂಧ್ಯಾ ಕಾರ್ಯಕ್ರಮ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಪ್ರತಿಭಾ ಪ್ರದರ್ಶನ 2024 ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಒಗ್ಗಟ್ಟಿನ ಕೊರತೆಯಿಂದ ಸರ್ಕಾರದಿಂದ ಸವಲತ್ತುಗಳನ್ನು ಪಡೆಯುವಲ್ಲಿ ಸಮಾಜ ಹಿಂದುಳಿದಿದ್ದು ಸಂಘಟಿತರಾಗಬೇಕು ಎಂದು ತುಳು ವಿದ್ವಾಂಸ ಸುರೇಶ್ ಕೊಲಕಾಡಿ ಹೇಳಿದರು.

ಮೂಲ್ಕಿಯ ಗೇರುಕಟ್ಟೆಯ ಮುಂಡಾಲ ಸಮಾಜದ ಸಭಾಭವನದಲ್ಲಿ ಮುಂಡಾಲ ಕಲ್ಯಾಣ ಸಂಸ್ಥೆ ವತಿಯಿಂದ ಸಮಾಜ ಬಾಂಧವರಿಗೆ ಜರುಗಿದ ಎರಡನೇ ವರ್ಷದ ಭಜನಾ ಸಂಧ್ಯಾ ಕಾರ್ಯಕ್ರಮ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಪ್ರತಿಭಾ ಪ್ರದರ್ಶನ 2024 ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಿವರಾಮ್ ಮೂಲ್ಕಿ ವಹಿಸಿದ್ದು ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ದೈವ ಪಾತ್ರಿ ಸುಧಾಕರ, ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪ್ರಕಾಶ್ ಕಿನ್ನಿಗೋಳಿ, ಸಾಹಿತಿ ಸಂದೀಪ್ ಮಧ್ಯ, ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್, ಮಹಾತ್ಮ ಜ್ಯೋತಿ ಬಾಪುಲೆ ಫೆಲೋ ಶಿಪ್ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಲೀಲಪ್ಪ ಶೇರಿಗಾರ್ ತೋಕೂರು, ರವೀಂದ್ರ ಕೆರೆಕಾಡು, ಅರುಣ್ ಬಾಂದೊಟ್ಟು, ರಾಮಚಂದ್ರ ಕಂಗುರಿ, ರಾಜೇಶ್ ಕೆರೆಕಾಡು ಅವರನ್ನು ಸನ್ಮಾನಿಸಲಾಯಿತು .

ಭಜನಾ ಸಂಧ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಗೌರವಿಸಲಾಯಿತು. ಶಿಲ್ಪಿ ಡಿ ಸುಬ್ರಹ್ಮಣ್ಯ ಕಾರ್ಕಳ, ಸಾಹಿತಿ ಯಶವಂತ ಕುದ್ರೋಳಿ, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ರವಿ ಕಾಪಿ ಕಾಡು, ಉದ್ಯಮಿ ಶಿವರಾಜ ಕರ್ಕೇರ, ಮುಲ್ಕಿ ಮೆಸ್ಕಾಂ ಹಿರಿಯ ಸಹಾಯಕಿ ಆಶಾಲತಾ, ಮುಂಡಾಲ ಕಲ್ಯಾಣ ಸಂಸ್ಥೆಯ ಗೌರವಾಧ್ಯಕ್ಷ ಶಂಕರ್ ಮಾಸ್ಟರ್ ಗೋಳಿ ಜೋರಾ, ಯುವ ವೇದಿಕೆ ಅಧ್ಯಕ್ಷ ಕಮಲಾಕ್ಷ ಕಕ್ವ, ಪದಾಧಿಕಾರಿಗಳಾದ ಸುಕುಮಾರ್, ಉಪನ್ಯಾಸಕ ರಮಾನಂದ ಮತ್ತಿತರರು ಉಪಸ್ಥಿತರಿದ್ದರು.

ಸುರೇಖಾ ಸ್ವಾಗತಿಸಿದರು. ಧನು ಅಂಚನ್ ನಿರೂಪಿಸಿದರು.