ಸಾರಾಂಶ
ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ವರ್ಷಾಂತ್ಯ ನಿಮಿತ್ತ ಭಾನುವಾರ ಭಕ್ತ ಸಮೂಹ ಹರಿದು ಬಂದಿದೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ವರ್ಷಾಂತ್ಯ ನಿಮಿತ್ತ ಭಾನುವಾರ ಭಕ್ತ ಸಮೂಹ ಹರಿದು ಬಂದಿದೆ.ಸೋಮವಾರ ಎಳ್ಳು ಅಮಾವಾಸ್ಯೆ ಪ್ರಯುಕ್ತ ಮಲೆ ಮಾದೇಶ್ವರನಿಗೆ ಗಂಗಾಜಲ ಅಭಿಷೇಕ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಎಣ್ಣೆ ಮಜ್ಜನ ಸೇವೆ ದೂಪದ ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರ ನಡೆಯಲಿದೆ.
ವರ್ಷಾಂತ್ಯ ಮತ್ತು ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದರು.ಮಲೆ ಮಾದೇಶ್ವರ ಬೆಟ್ಟದಲ್ಲಿ ಭಕ್ತ ಪರುಷೆ ಮಾದೇಶ್ವರನಿಗೆ ಹರಕೆ ಹೊತ್ತ ಭಕ್ತರು ಬೆಳ್ಳಿ ರಥೋತ್ಸವ ಹಾಗೂ ಹುಲಿ ವಾಹನ ಹಾಗೂ ಮಾದೇಶ್ವರ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ ದೂಪದ ಸೇವೆ ಉರುಳು ಸೇವೆ ವಂಜಿನ ಸೇವೆ ಹಾಗೂ ಮುಡಿಸೇವೆ ಸೇರಿದಂತೆ ಹಲವು ಪೂಜೆ ಹಾಗೂ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ವರ್ಷಾಂತ್ಯ ಮಹದೇಶ್ವರ ಬೆಟ್ಟದಲ್ಲಿ ಭಕ್ತಪರುಷೆ ಹರಿದು ಬಂದಿತ್ತು.
ವೀಕೆಂಡ್ ವರ್ಷಾಂತ್ಯದಲ್ಲಿ ಮಲೆ ಮಹದೇಶ್ವರ ಬೆಟ್ಟ ಧಾರ್ಮಿಕ ಕ್ಷೇತ್ರದಲ್ಲಿ ಇರುವ ವಸತಿ ಗೃಹಗಳೆಲ್ಲ ಭರ್ತಿಯಾಗಿವೆರ. ರಾತ್ರಿ ವಾಸ್ತವ್ಯ ಮಾಡುವ ಮೂಲಕ ಭಕ್ತಾದಿಗಳು ಮಾದೇಶ್ವರನ ದರ್ಶನ ಮಾಡಲು ಸರತಿ ಸಾಲಿನಲ್ಲಿ ನಿಂತು ಉಘೇ ಮಾದಪ್ಪ ಉಘೇಮಾದಪ್ಪ ಎಂದು ಜೈಕಾರ ಕೂಗಿದರು.