ಬ್ಯಾಂಕುಗಳು ಜನ ಸ್ನೇಹಿಯಾದರೆ ಅಭಿವೃದ್ಧಿ ಸಾಧ್ಯವಿದ್ದು, ಭಾರತ್‌ ಬ್ಯಾಂಕಿನ ಸ್ಥಾಪಕ ಅಧ್ಯಕ್ಷ ದಿ. ಜಯ ಸುವರ್ಣ ಅವರ ಕನಸಿನ ಕೂಸಾದ ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ರಾಷ್ಟ್ರೀಯ ಬ್ಯಾಂಕುಗಳಿಗೆ ಸರಿ ಸಮಾನಾಗಿ ಗ್ರಾಹಕರ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವೆಂದು ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ ಹೇಳಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಮೂಲ್ಕಿ ಬಸ್ ನಿಲ್ದಾಣದ ಬಳಿಯ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಸಭಾಭವನದಲ್ಲಿ ನಡೆದ ಸ್ಥಾಪಕ ದಿನಾಚರಣೆ, 48ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ್ ಬ್ಯಾಂಕ್ ಗ್ರಾಹಕರಿಗೆ 10 ಶೇ. ಡಿವಿಡೆಂಟ್ ನೀಡಿದ್ದು, 20 ಸಾವಿರ ಕೋಟಿ ವಹಿವಾಟು ನಡೆಸಿ 77 ಕೋಟಿ ರು. ಲಾಭಗಳಿಸಿದೆ. ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ಹಾಗೂ ತಂಡದ ಶ್ರಮ ಹಾಗೂ ಸಾಧನೆ ಅಭಿನಂದನೀಯವೆಂದು ಹೇಳಿದರು. ಮೂಲ್ಕಿ ನಗರ ಪಂಚಾಯಿತಿ ಮಾಜಿ ಮುಖ್ಯಾಧಿಕಾರಿ ಹರೀಶ್ಚಂದ್ರ ಪಿ ಸಾಲ್ಯಾನ್, ಉಪನ್ಯಾಸಕ ಅತ್ತಾವರ್ ನೀರೇಂದ್ರ, ದೇವೇಂದ್ರ ಬಂಗೇರ ಮುಂಬೈ, ಮೂಲ್ಕಿ ನಗರ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಕೋಟ್ಯಾನ್, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್, ವಕೀಲ ಹಾಗೂ ನೋಟರಿ ಬಿಪಿನ್ ಪ್ರಸಾದ್, ಬ್ಯಾಂಕಿನ ಸಿಬ್ಬಂದಿ ವರ್ಗ, ಗ್ರಾಹಕರು ಮತ್ತಿತರರು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕಿ ಶಕುಂತಲಾ ನೀರೇಂದ್ರ ಸ್ವಾಗತಿಸಿದರು.