ಸಾರಾಂಶ
ಸವಣೂರು: ಸವಣೂರು ತಾಲೂಕಿನ ತೆವರಮರಳಿಹಳ್ಳಿ ಗ್ರಾಮದಲ್ಲಿ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ರೋಡ್ ಶೋ ಮೂಲಕ ಮತಯಾಚಿಸಿದರು.ಸವಣೂರು ರೈತರ ಆಸ್ತಿಗಳಿಗೆ ನೋಟಿಸ್ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ರೈತರ ಭೂಮಿಯನ್ನು ವಕ್ಫ್ ಮೂಲಕ ಕಬಳಿಸುವ ಹುನ್ನಾರ ನಡೆಸುತ್ತಿರುವ ಕಾಂಗ್ರೆಸ್‌ಗೆ ಶಿಗ್ಗಾಂವಿ-ಸವಣೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಭರತ ಬೊಮ್ಮಾಯಿ ಹೇಳಿದರು.
ತಾಲೂಕಿನ ತೆವರಮರಳಿಹಳ್ಳಿ, ಹಳೆಹಲಸೂರು, ಕುಣಿಮರಳಿಹಳ್ಳಿ, ಮನ್ನಂಗಿ, ಮನ್ನಂಗಿ ಪ್ಲಾಟ್, ಕಲ್ಮಡವು, ಬರದೂರು, ಚಳ್ಳಾಳ, ಮವೂರು, ಫಕ್ಕೀರನಂದಿಹಳ್ಳಿ, ಚಿಕ್ಕ ಬೂದಿಹಾಳ ಮತ್ತು ಸವೂರ ಗ್ರಾಮಗಳಲ್ಲಿ ಉಪಚುನಾವಣಾ ಪ್ರಚಾರ ಕೈಗೊಂಡು ಮತದಾರರನ್ನುದ್ದೇಶಿಸಿ ಮಾತನಾಡಿದರು. ಪಕ್ಷದ ಟಿಕೆಟ್ ಆಕಾಂಕ್ಷಿ ನಾನಾಗಿರಲಿಲ್ಲ, ತಂದೆಯವರು ನನಗೆ ಫೋನ್ ಮೂಲಕ ಹೈಕಮಾಂಡ್ ನಿನ್ನನ್ನು ಶಿಗ್ಗಾಂವಿ-ಸವಣೂರು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ಹೇಳಿದಾಗಲೇ ನನಗೆ ಗೊತ್ತಾಗಿದ್ದು. ತಮ್ಮೆಲ್ಲರ ಆಶೀರ್ವಾದ ಇದಕ್ಕೆ ಕಾರಣ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಜನರ ಸೇವೆಗಾಗಿ ಸದಾ ಸಿದ್ದನಿದ್ದೇನೆ. ತಂದೆಯವರಂತೆ ಕ್ಷೇತ್ರದ ಅಭಿವೃದ್ಧಿಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು. ಈಗಾಗಲೇ ಕ್ಷೇತ್ರದಲ್ಲಿ ರಸ್ತೆ, ಎಲ್ಲ ಸಮುದಾಯದವರಿಗೆ ಸಮುದಾಯ ಭವನಗಳ ನಿರ್ಮಾಣ, ನೀರಿನ ಸೌಲಭ್ಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದಿನ ದಿನಗಳಲ್ಲಿ ನಾನೂ ಕೂಡ ಎಲ್ಲ ಸಮುದಾಯದವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಮೂಲಕ ತಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದರು.ಬಿಜೆಪಿ ಸವಣೂರು ಮಂಡಳ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ಮುಖಂಡರಾದ ಶಶಿಧರ ಯಲಿಗಾರ, ರುದ್ರಗೌಡ ಪಾಟೀಲ, ಚಂದ್ರು ಆಡೂರ, ಸುಭಾಸ ಗಡೆಪ್ಪನವರ, ಬಂಗಾರಿಗೌಡ ಚನವೀರಗೌಡ್ರ, ಸೋಮನಗೌಡ ಅರಳಿಹಳ್ಳಿ, ಸುರೇಶ ಸೋರದ, ಬಸವರಾಜ ತಳವಾರ, ರಜನಿಕಾಂತ ದೇವಿಹೊಸುರ, ಗಾಳೆಪ್ಪ ದೊಡ್ಡಪೂಜಾರ, ಪರ್ತಗೌಡ ಕೊಪ್ಪದ, ನಾಗಪ್ಪ ಆಡೂರ, ಗುಡ್ಡನಗೌಡ ಪಾಟೀಲ ಇದ್ದರು.