ಭಾರತ್ ಬ್ರ್ಯಾಂಡ್‌ ಅಕ್ಕಿ,ಸಾರ್ವಜನಿಕರಿಂದ ಉತ್ತಮ ಸ್ಪಂದನೆ

| Published : Feb 08 2024, 01:34 AM IST

ಭಾರತ್ ಬ್ರ್ಯಾಂಡ್‌ ಅಕ್ಕಿ,ಸಾರ್ವಜನಿಕರಿಂದ ಉತ್ತಮ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳದಿಂದ ವಾಹನಗಳ ಮೂಲಕ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ಪಟ್ಟಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಅಕ್ಕಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳದಿಂದ ವಾಹನಗಳ ಮೂಲಕ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ಪಟ್ಟಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಅಕ್ಕಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ.

ಪಟ್ಟಣದಲ್ಲಿ ಮಂಗಳವಾರ ರಾತ್ರಿಯಿಂದ ವಾಹನಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆಜಿ ಗೆ ೨೯ರು. ದರ ನಿಗದಿಪಡಿಸಲಾಗಿದ್ದು, ೫ ಕೆ ಜಿ ಮತ್ತು ೧೦ ಕೆಜಿ ಪ್ಯಾಕೆಟ್‌ಗಳಲ್ಲಿ ದೊರೆಯುತ್ತಿದೆ.ರಾತ್ರಿ ಅಕ್ಕಿ ವಾಹನ ಬಂದೊಡನೆ ಕೇವಲ ಅರ್ಧ ಗಂಟೆಯಲ್ಲಿ ಎಲ್ಲಾ ಅಕ್ಕಿ ಬಿಕರಿಯಾಗಿದೆ. ಬುಧವಾರ ಮತ್ತೊಂದು ಲೋಡ್ ಅಕ್ಕಿ ಬಂದಿದ್ದು, ಮಾಜಿ ಶಾಸಕ ಬಿ.ಪಿ.ವೆಂಕಟ ಮುನಿಯಪ್ಪ ಸಾರ್ವಜನಿಕರಿಗೆ ಅಕ್ಕಿ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ದಿನೇ ದಿನೇ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವಾಗ ಇದರಿಂದ ಮಧ್ಯಮ ವರ್ಗದ ಜನರಿಗೆ ಸಂಸಾರ ಸಾಗಿಸಲು ಕಷ್ಟವಾಗಿದ್ದು, ಇದನ್ನು ಅರಿತ ಪ್ರಧಾನಿ ಮೋದಿ ಅಕ್ಕಿ ಕೆಜಿ ಗೆ ಕೇವಲ ೨೯ರು.ಗೆ ನೀಡುವ ಯೋಜನೆಗೆ ಚಾಲನೆ ನೀಡಿದ್ದು,ಇದು ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ ಎಂದರು.

ಪಟ್ಟಣಕ್ಕೆ ೨ ಸಾವಿರ ಟನ್ ಅಕ್ಕಿ ಬರಲಿದ್ದು, ಸಾರ್ವಜನಿಕರು ಯಾವುದೇ ಗೊಂದಲವಿಲ್ಲದೆ ಪಡೆಯಬಹುದು. ಈ ಅಕ್ಕಿ ಮಾರುಕಟ್ಟೆಯಲ್ಲಿ ೫೦ ರಿಂದ ೬೦ ರು. ಗೆ ಸಿಗಲಿದ್ದು, ಎನ್‌ಎಸ್ ಅಕ್ಕಿಗಿಂತ ಕಮ್ಮಿಯಿಲ್ಲ ಎಂದರು. ಮುಂದಿನ ದಿನಗಳಲ್ಲಿ ಅಗ್ಗದ ಬೆಲೆಗೆ ಗೋದಿ ಹಿಟ್ಟು ಹಾಗೂ ಕಡಲೆ ಕಾಳು ಸಹ ಬರಲಿದೆ ಎಂದರು. ಕಷ್ಟಕಾಲದಲ್ಲಿ ಬಡವರಿಗೆ ಆಶ್ರಯವಾಗಿರುವ ಪ್ರಧಾನಿ ಮೋದಿಯವರನ್ನು ಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಮಾಡಲು ಸಂಕಲ್ಪ ಮಾಡಬೇಕೆಂದು ಮನವಿ ಮಾಡಿದರು.