ಭಾರತ್ ಜೋಡೋ ಕೇವಲ ಕಾಂಗ್ರೆಸ್ ಜೋಡೋ ಆಗುತ್ತಿದೆ
ಕನ್ನಡಪ್ರಭ ವಾರ್ತೆ ಕುಣಿಗಲ್ ರಾಜ್ಯ ಸರ್ಕಾರದ ಸೂಚನೆಯಂತೆ ಕುಣಿಗಲ್ನಲ್ಲಿ ರಚನೆ ಆಗುತ್ತಿರುವ ಭಾರತದ ಜೋಡೋ ಯುವ ಸಂಘಟನೆ ಕಾಂಗ್ರೆಸ್ ಸಂಘಟನೆ ಆಗುತ್ತಿದೆ ಎಂದು ದೋಸ್ತಿ ಪಕ್ಷಗಳು ಆರೋಪ ಮಾಡಿವೆ. ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್ ಸರ್ಕಾರ ಭಾರತ ಜೋಡೋ ಹೆಸರಿನಲ್ಲಿ ಸಂಘಗಳ ರಚನೆ ಮಾಡುತ್ತಿದೆ ಜನರ ತೆರಿಗೆಯ ಹಣವನ್ನು 10 ಲಕ್ಷ ರುಪಾಯಿಗಳನ್ನು ಸಂಘಕ್ಕೆ ನೀಡುತ್ತಿದ್ದು ರಚನೆಯಲ್ಲಿ ಲೋಪ ದೋಷ ಕಾಣುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ಆನ್ಲೈನ್ ನಲ್ಲಿ ಸಾವಿರಾರು ಯುವಕರು ಭಾರತ್ ಜೋಡೋ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಆದರೆ ಅದನ್ನು ಪರಿಗಣಿಸದ ಸರ್ಕಾರ ಶಾಸಕರ ಕಚೇರಿಯ ಮುಖಾಂತರ ಫಾರಂ ಒಂದನ್ನು ವಿತರಿಸಿದ್ದು ಕಾಂಗ್ರೆಸ್ ಮುಖಂಡರು ತಮಗೆ ಬೇಕಾದ ಯುವಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಇದು ಕೇವಲ ಇದನ್ನು ಕಾಂಗ್ರೆಸ್ ಜೋಡೋಎಂಬ ಭಾವನೆಯಲ್ಲಿ ಮಾಡುತ್ತಿದ್ದು ನಶಿಸುವ ಕಾಂಗ್ರೆಸ್ನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಸರ್ಕಾರದ ಸಂಬಳ ಪಡೆದು ಎಲ್ಲರನ್ನೂ ಒಟ್ಟಾಗಿ ಸೇರಿಸಬೇಕಾದ ಅಂತಹವರು ಈ ಕೆಲಸ ಮಾಡುತ್ತಿರುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಇರುವಂತಹ ಕೆಲವರು ನನಗೆ ಗುಟ್ಟಾಗಿ ಅಲ್ಲಿನ ಮಾಹಿತಿಗಳನ್ನು ನೀಡುತ್ತಿದ್ದಾರೆ ಅವರು ಆಯ್ಕೆ ಮಾಡಿ ಕಳುಹಿಸಿರುವ ಶಿಫಾರಸ್ಸು ನನ್ನ ಬಳಿ ಇದೆ ಎಂದು ಮೊಬೈಲ್ ಮುಖಾಂತರ ದಾಖಲೆ ತೋರಿಸಿ ಕಚೇರಿಯ ಸಿಬ್ಬಂದಿಯ ಹೆಸರನ್ನು ನಾನು ಹೇಳುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ದಿನೇಶ್ ಸರ್ಕಾರ ನ್ಯಾಯಯುತವಾಗಿ ರಚನೆ ಮಾಡಬೇಕಾದ ಇಂತಹ ಸಂಘಗಳನ್ನು ಸಂಪೂರ್ಣವಾಗಿ ರಾಜಕೀಯದಿಂದ ಮಾಡುತ್ತಿದೆ ಮುಂದಿನ ದಿನಗಳಿಂದ ಇದರಿಂದ ನ್ಯಾಯಯುತವಾದ ನಿರೀಕ್ಷೆ ಸಾಧ್ಯವಿಲ್ಲ. ಅಧಿಕಾರಿಗಳು ಮಾಡುತ್ತಿರುವ ಇಂತಹ ಕೆಟ್ಟ ಕೆಲಸದ ಬಗ್ಗೆ ಇಂದಲ್ಲ ನಾಳೆ ಯುವ ಜನತೆ ಜಾಗೃತ ರಾಗುತ್ತಾರೆ ನಿಮಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದರು,ಬಿಜೆಪಿ ಮಾಜಿ ಅಧ್ಯಕ್ಷ ಬಲರಾಮ ಮಾತನಾಡಿ ಇದುವರೆಗೂ ಆಡಳಿತ ಮಾಡಿದ ಎಲ್ಲಾ ರಾಜಕಾರಣಿಗಳು ನಿಸ್ಪಕ್ಷವಾದ ಆಡಳಿತ ಮಾಡಿದ್ದಾರೆ ಆದರೆ ಕುಣಿಗಲ್ ಶಾಸಕ ಡಾ. ರಂಗನಾಥ್ ಕೇವಲ ರಾಜಕೀಯ ಉದ್ದೇಶದಿಂದ ಈ ಸಂಘಟನೆಯನ್ನು ಮಾಡುತ್ತ ಕಾಲ ಕಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಯುವ ಜನತೆಗೆ ಈ ವಿಚಾರ ತಿಳಿದರೆ ಹೋರಾಟ ಮಾಡುವುದರ ಜೊತೆಗೆ ಕಚೇರಿಗಳಿಗೆ ಬೀಗ ಹಾಕುತ್ತಾರೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ನಾಯಕ್, ಪುರಸಭಾ ಮಾಜಿ ಅಧ್ಯಕ್ಷ ಕೆ ಎಲ್ ಹರೀಶ್, ರಂಗಸ್ವಾಮಿ, ನಾಗರಾಜು, ದೀಪು, ಸೇರಿದಂತೆ ಹಲವಾರು ಏನ್ ಡಿ ಎ ಪದಾಧಿಕಾರಿಗಳು ಇದ್ದರು.