ಸಾರಾಂಶ
ದೇಶಪ್ರೇಮ, ಸಹೋದರತೆ ಹಾಗೂ ಭಾವೈಕ್ಯತೆಯ ಜಾಗೃತಿ ಹಾಗೂ ವಿದ್ಯಾರ್ಥಿಗಳಲ್ಲಿ ಶಿಸ್ತು, ಮೂಡಿಸುತ್ತಿರುವ ಭಾರತ ಸೇವಾದಳ ಸಂಸ್ಥೆಯು ದೇಶದ ಸ್ವಾತಂತ್ರ್ಯ ಚಳವಳಿಗೆ ಅಪಾರ ಕೊಡುಗೆ ನೀಡಿದೆ ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಕೋಣಿನ್ ಹರವಾಳ ಹೇಳಿದರು.
ಕನ್ನಡಪ್ರಭ ವಾರ್ತೆ ಜೇವರ್ಗಿ
ದೇಶಪ್ರೇಮ, ಸಹೋದರತೆ ಹಾಗೂ ಭಾವೈಕ್ಯತೆಯ ಜಾಗೃತಿ ಹಾಗೂ ವಿದ್ಯಾರ್ಥಿಗಳಲ್ಲಿ ಶಿಸ್ತು, ಮೂಡಿಸುತ್ತಿರುವ ಭಾರತ ಸೇವಾದಳ ಸಂಸ್ಥೆಯು ದೇಶದ ಸ್ವಾತಂತ್ರ್ಯ ಚಳವಳಿಗೆ ಅಪಾರ ಕೊಡುಗೆ ನೀಡಿದೆ ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಕೋಣಿನ್ ಹರವಾಳ ಹೇಳಿದರು.ಪಟ್ಟಣದ ಪ್ರಥರ್ಮ ದಜೆ ಮಹಾವಿದ್ಯಾಲಯದಲ್ಲಿ ಭಾರತ ಸೇವಾದಳ ತಾಲೂಕು ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ 2024-25ನೇ ಸಾಲಿನ ಭಾರತ ಸೇವಾದಳ ಶಾಖಾ ನೋಂದಣಿ ಹಾಗೂ ನವೀಕರಣಗೋಳಿಸಲು ತಾಲೂಕು ಮಟ್ಟದ ಒಂದು ದಿನದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೇವಾದಳವು ಶಿಸ್ತಿನ ಸಂಸ್ಥೆಯಾಗಿದ್ದು, ಹಿಂದೂಸ್ತಾನ ಸೇವಾದಳ ಹೆಸರಿನಿಂದ 1923ರಲ್ಲಿ ಆರಂಭವಾದ ಸಂಸ್ಥೆಯು 1950ರ ಮಾ.16ರಂದು ಭಾರತ ಸೇವಾದಳವಾಗಿ ಪುನರ್ ನಾಮಕರಣಗೊಂಡು ಇದೀಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ, ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ನಾ.ಸು.ಹರ್ಡೀಕರ್ ಅವರು ಹೋರಾಟಗಾರರಲ್ಲಿ ಸಂಘಟನೆ ಹಾಗೂ ದೇಶಪ್ರೇಮದ ಜಾಗೃತಿ ಮೂಡಿಸಲು ಸ್ವತಃ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿ ಎಲ್ಲರಿಗೂ ಮಾದರಿಯಾಗಿದ್ದರು ಎಂದರು.ಸೇವಾದಳದ ಜಿಲ್ಲಾ ಖಂಜಾಚಿ ಅಬ್ದುಲ್ ರಹಿಮಾನ್ ಪಟೇಲ್ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಸಂಸ್ಥೆಯಾಗಿರುವ ಭಾರತ ಸೇವಾದಳವು ಸಮಯಪ್ರಜ್ಞೆ, ರಾಷ್ಟ್ರ ರಕ್ಷಣೆಯ ಜಾಗೃತಿ ಮೂಡಿಸಲು ತಾಲೂಕಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸಲು ಭಾರತ ಸೇವಾದಳವು ಅವಿರತವಾಗಿ ಶ್ರಮಿಸುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬಮ್ಮನಳ್ಳಿ, ಬಸವಾಜ ರಟಕಲ್, ಎಸ್.ಟಿ. ಬಿರಾದಾರ, ಶಂಕರ ಕಟ್ಟಿಸಂಗಾವಿ, ಡಾ.ಕರಿಗೂಳೇಶ್ವರ್, ಹಣಮಂತಪ್ಪ ಬಿರಾಳ, ಭೀಮರಾಯ, ಚಂದ್ರಶೇಖರ ಜಮಾದಾರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.