ಸಾರಾಂಶ
ಕಡೂರುದೇಶೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಭರತನಾಟ್ಯ ಕಲೆ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಕಲೆಯಾಗಿದೆ ಎಂದು ವಿದ್ವಾನ್ ಡಾ. ಕೇಶವಕುಮಾರ್ ಪಿಳ್ಳೆ ತಿಳಿಸಿದರು.
ಕನ್ನಡ ಪ್ರಭ ವಾರ್ತೆ, ಕಡೂರು
ದೇಶೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಭರತನಾಟ್ಯ ಕಲೆ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಕಲೆಯಾಗಿದೆ ಎಂದು ವಿದ್ವಾನ್ ಡಾ. ಕೇಶವಕುಮಾರ್ ಪಿಳ್ಳೆ ತಿಳಿಸಿದರು.ಪಟ್ಟಣದ ಶಾಸಕರ ಸರಕಾರಿ ಮಾದರಿ ಶಾಲೆ ಆವರಣದಲ್ಲಿ ಶ್ರೀ ನಾಟ್ಯ ಕೇಶವ ನೃತ್ಯ ಕಲಾನಿಕೇತನ ಭರತ ನಾಟ್ಯ ಶಾಲೆ ಯಿಂದ ಆಯೋಜಿಸಿದ್ದ ಗುರುಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಸಂಸ್ಕಾರಯುತ ಕಲೆಗಳ ಅಭ್ಯಾಸ ಮಾಡುವುದು ಬಹುಮುಖ್ಯ. ಈಗಾಗಲೇ ಕೇಶವ ನೃತ್ಯ ಕಲಾನಿಕೇತನ ಸಂಸ್ಥೆ ಪಟ್ಟಣದಲ್ಲಿ 11ನೇ ವರ್ಷದತ್ತ ಹೆಜ್ಜೆ ಹಾಕುತ್ತಿದೆ. ಮುಂದಿನ ದಿನಗಳಲ್ಲಿ ದಶಮಾನೋತ್ಸವ ಸಂಭ್ರಮಾಚರಣೆ ನಡೆಸಲಾಗುವುದು. ಭರತ ನಾಟ್ಯ ಕಲೆಯಲ್ಲಿ ತರಬೇತಿ ಹೊಂದಿದ ಮಕ್ಕಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀ ಯ ಮಟ್ಟದ ಸ್ಪರ್ಧಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ವಿಜೇತರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಭಾರತೀಯ ಸಂಸ್ಕಾರ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯವರ್ಧನೆಗೆ ಕಲೆಯೇ ಆಧಾರ. ಈ ನಿಟ್ಟಿನಲ್ಲಿ ಸ್ಥಳೀಯ ಮಕ್ಕಳಿಗೆ ಭರತನಾಟ್ಯ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ವಿಶೇಷ ಕಲಾ ಪ್ರಾಕಾರಗಳಲ್ಲಿ ತರಬೇತಿ ನೀಡ ಲಾಗುತ್ತಿದೆ. 150 ಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆಯುತ್ತಿದ್ದು, ಜೊತೆಯಲ್ಲಿ ಭರತನಾಟ್ಯ ಕಲೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳನ್ನು ಹೊಸದಾಗಿ ಸೇರಿಸಿಕೊಳ್ಳುವ ಕಾರ್ಯವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಲಾನಿಕೇತನ ಶಾಲೆ ಭರತನಾಟ್ಯ ಕಲೆ ಮಕ್ಕಳು ಸಾಮೂಹಿಕವಾಗಿ ಗುರುಪೂಜೆ ಸಲ್ಲಿಸಿದರು. ಡಾ. ನಿರ್ಮಲಾ, ಉಷಾ ಪದ್ದಣ್ಣ, ಜೆಸಿಐ ಸ್ವರ್ಣ ಶ್ರೀ ಘಟಕದ ಅಧ್ಯಕ್ಷೆ ಆಶಾ ಶ್ರೀನಿವಾಸ್, ಸುಜಾತಾ ಶಿವಕುಮಾರ್, ಮುಖ್ಯ ಶಿಕ್ಷಕಿ ರುಕ್ಮಿಣಿ, ಎಸ್ಡಿಎಂಸಿ ಅಧ್ಯಕ್ಷ ಪಂಗ್ಲಿ ಮಂಜುನಾಥ್, ಶಿಕ್ಷಕಿ ಶೋಭಾ, ಭರತನಾಟ್ಯ ಕಲೆಯ ತರಬೇತುದಾರ ಚೇತನ್, ಮೀನಾ ಪ್ರಸನ್ನಶಾಲಾ ವಿದ್ಯಾರ್ಥಿಗಳು ಮತ್ತಿತರಿದ್ದರು.18ಕೆಕೆಡಿಯು1ಕಡೂರು ಪಟ್ಟಣದ ಶಾಸಕರ ಸರಕಾರಿ ಮಾದರಿ ಶಾಲೆ ಆವರಣದಲ್ಲಿ ಶ್ರೀ ನಾಟ್ಯ ಕೇಶವ ನೃತ್ಯ ಕಲಾನಿಕೇತನ ಭರತ ನಾಟ್ಯ ಶಾಲೆಯಿಂದ ಏರ್ಪಡಿಸಿದ್ದ ಗುರುಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ಕೇಶವಕುಮಾರ್ ಪಿಳ್ಳೈ ಮತ್ತು ಕಲೆ ತರಬೇತುದಾರ ಚೇತನ್ ಅವರಿಗೆ ಜೆಸಿಐ ಸ್ವರ್ಣಶ್ರೀ ಘಟಕದಿಂದ ಗೌರವಿಸಲಾಯಿತು. ಡಾ. ನಿರ್ಮಲಾ, ಉಷಾ ಪದ್ದಣ್ಣ, ಆಶಾ ಶ್ರೀನಿವಾಸ್, ಸುಜಾತಾ ಶಿವಕುಮಾರ್ ಇದ್ದರು.