ಸಾರಾಂಶ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಾರತೀ ಸಂಯುಕ್ತ ಪದವಿ ಪೂರ್ವ (ಎಕ್ಸಲೆನ್ಸ್) ಕಾಲೇಜು ಶೇ.95 ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ 34 ಅತ್ಯುನ್ನತ ಶ್ರೇಣಿ, 58 ಪ್ರಥಮ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ವಾಣಿಜ್ಯ ವಿಭಾಗದಲ್ಲಿ 4 ಅತ್ಯುನ್ನತ ಶ್ರೇಣಿ, 12 ಪ್ರಥಮ, ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಾರತೀ ಸಂಯುಕ್ತ ಪದವಿ ಪೂರ್ವ (ಎಕ್ಸಲೆನ್ಸ್) ಕಾಲೇಜು ಶೇ.95 ರಷ್ಟು ಫಲಿತಾಂಶ ಲಭಿಸಿದೆ ಎಂದು ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ 34 ಅತ್ಯುನ್ನತ ಶ್ರೇಣಿ, 58 ಪ್ರಥಮ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ವಾಣಿಜ್ಯ ವಿಭಾಗದಲ್ಲಿ 4 ಅತ್ಯುನ್ನತ ಶ್ರೇಣಿ, 12 ಪ್ರಥಮ, ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿ ಬಿ.ಎಂ.ಲೇಖನ (ಶೇ.97ರಷ್ಟು) ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು ಕೆ.ವಿ.ಕೃತಿಕ (ಶೇ.96.67 ರಷ್ಟು), ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನ ಆರ್. ಪುಷ್ಪಶ್ರೀ (ಶೇ.95.67) ಪಡೆದು ಗಣಿತ ವಿಷಯದಲ್ಲಿ 100 ಅಂಕ ಗಳಿಸಿದ್ದಾರೆ. ತದ ನಂತರದ ಸ್ಥಾನಗಳನ್ನು ಎಂ.ಎಸ್. ಸೋನಾಶ್ರೀ (ಶೇ.95.17) ಗಣಿತ ವಿಷಯದಲ್ಲಿ 100 ಅಂಕ, ಎ.ಎನ್. ಸುಪ್ರೀತ್‌ಗೌಡ (ಶೇ.94.17), ಆರ್.ವಿ. ರಚನಾ (ಶೇ.94.00), ಬಿ. ರಕ್ಷಿತಾ (ಶೇ.93.83), ಮೊಹಮ್ಮದ್ ಹುಮ್ಮರ್ (ಶೇ.93.67) ಎಚ್.ಪಿ. ಅಕ್ಷೀತ್‌ಗೌಡ (ಶೇ.93.33), ಪಿ. ಸಿಂಧುಶ್ರೀ (ಶೇ.93), ಎಚ್.ಎಸ್. ಸಾಗರ್ (ಶೇ.92.83), ಬಿ. ಮಾಣಿಕ್ಯ (ಶೇ.92.33), ಎಚ್.ಎಂ. ಅನು (ಶೇ.92.17 ರಷ್ಟು), ಬಿ.ಪಿ.ದೀಪ್ತಿ ರಾಜ್ (ಶೇ.91.50), ಜಿ. ತೇಜಶ್ರೀ (ಶೇ.91.50), ಎಂ.ಒ. ಕಿರಣ್ (ಶೇ.91.17), ಆರ್. ಮಣಿಮೇಘಲಾ (ಶೇ.90 ), ಎಸ್. ಇಂಚರ (ಶೇ.83 ), ಎಸ್. ಧೃವ (ಶೇ.90.67, ಎಂ.ಜೆ. ಅಫ್ನಾನ್‌ಪಾಷ (ಶೇ.90.50), ಎಂ.ಸಿ. ಪ್ರಜ್ಞಾ (ಶೇ.90.50) ಅಂಕ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಜೆ.ಎಸ್, ಪಾಲ್ಗುಣಿ (ಶೇ.94.67), ಅಂಕ ಗಳಿಸಿದ್ದು ಉತ್ತಮ ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಸಂಸ್ಥೆ ಚೇರ್‍ಮನ್ ಮಧು. ಜಿ. ಮಾದೇಗೌಡ, ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿಇಒ ಆಶಯ್ ಮಧು, ಟ್ರಸ್ಟಿಗಳು, ಕಾಲೇಜು ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ ಮತ್ತು ಬೋಧಕ, ಬೋಧಕೇತರರು ಅಭಿನಂದಿಸಿದ್ದಾರೆ.